Pahani and Aadhar link Status| ಲಿಂಕ್ ಆಗಿದೆಯಾ? ಇಲ್ಲದಿದ್ದರೆ ಪರಿಹಾರ ಜಮಾ ಆಗಲ್ಲ ನೋಡಿ
<Pahani> <RTC> <Pahani Aadhar link> <how to link Pahani and Aadhar> <Pahani and Aadhar link>
ರೈತರು ತಮ್ಮ ಜಮೀನು ಪಹಣಿ ಅಥವಾ ಉತಾರ್ ಪತ್ರಿಕೆಗೆ (RTC) ಆಧಾರ್ ಜೋಡಣೆ ಮಾಡದ ಕಾರಣಕ್ಕೆ ಬಹಳಷ್ಟು ರೈತರು ಬರ ಪರಿಹಾರದಿಂದ ವಂಚಿತರಾಗಿದ್ದಾರೆ. ಕೇವಲ ಬರ ಪರಿಹಾರ ಮಾತ್ರವಲ್ಲ ಸರಕಾರದ ಅನೇಕ ಸೌಲಭ್ಯಗಳು ಪಹಣಿ-ಆಧಾರ್ ಲಿಂಕ್ ಆಗಿರದ ರೈತರಿಗೆ ಸಿಗುತ್ತಿಲ್ಲ.ಈಚೆಗೆ ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರ ಹಣ ರಾಜ್ಯದ ಲಕ್ಷಾಂತರ ರೈತರ ಖಾತೆಗೆ ಜಮಾ ದಕ್ಕೆ ಆಧಾರ್ ಪಹಣಿ ಜೋಡಣೆ ಆಗದೇ ಇರುವುದು ಕಾರಣವಾಗಿದೆ. ಹೀಗಾಗಿ ಇದೀಗ ಆಧಾರ್- ಪಹಣಿ ಲಿಂಕ್ ಮಾಡದ ರೈತರು ಎರಡನ್ನೂ ಜೋಡಣೆ ಮಾಡಲು ಪರದಾಡುತ್ತಿದ್ದಾರೆ.
ಏನಿದು ಆಧಾರ್-ಪಹಣಿ ಲಿಂಕ್ ಯೋಜನೆ?
ವರ್ಷಗಳ ಹಿಂದೆಯೇ ರಾಜ್ಯ ಕಂದಾಯ ಇಲಾಖೆಯು ಸರ್ಕಾರದಿಂದ ಜಮೀನಿಗೆ ಸಂಬಂಧಿಸಿದಂತೆ ಹಲವಾರು ಯೋಜನೆಗಳ ಲಾಭ ಪಡೆಯಲು ಹಾಗೂ ಜಮೀನಿನ ಸುರಕ್ಷತೆಗಾಗಿ ಪಹಣಿಗಳಿಗೆ ಆಧಾರ್ లింಕ ಮಾಡಿಸುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 'ನನ್ನ ಆಧಾರನೊಂದಿಗೆ ನನ್ನ ಆಸ್ತಿ ಸುಭದ್ರ' ಯೋಜನೆ ಆರಂಭಿಸಿದೆ.
ಜಮೀನು ಪಹಣಿ ಆಧಾರ್ ಜೋಡಣೆ ಆರ ಸರಳ ಪ್ರಕ್ರಿಯೆಯಾಗಿದ್ದು?
ಈ ಬಗ್ಗೆ ಹಲವು ಬಾರಿ ಕೃಷಿ ಅಧಿಕಾರಿಗಳು ಸೂಚನೆ ನೀಡಿದರೂ ಕೂಡ ಈಗಲೂ ಲಕ್ಷಾಂತರ ರೈತರು ಈ ಕೆಲಸ ಮಾಡಿಲ್ಲ. ಇದೀಗ ಬರ ಪರಿಹಾರ, ಬೆಳೆ ವಿಮೆ, ಪಿ ಎಂ ಕಿಸಾನ್ ಯೋಜನೆಗಳ ಪರಿಹಾರ ಹಣ ಕೈ ತಪ್ಪುತ್ತಿರುವುದರಿಂದ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಜೋಡಣೆ ಮಾಡಲು ಮುಗಿ ಬಿದ್ದಿದ್ದಾರೆ.
ಆಧಾರ್-ಪಹಣಿ ಲಿಂಕ್ ಪ್ರಕ್ರಿಯೆ ಹೇಗೆ?
ಜಮೀನಿನ ಪಹಣಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಹಲವಾರು ವಿಧಾನದಲ್ಲಿ ಮಾಡಬಹುದು. ರೈತರು ಹತ್ತಿರದ 'ಗ್ರಾಮ ಒನ್' ಕೇಂದ್ರಗಳಿಗೆ ತೆರಳಿ ಮಾಡಿಸಬಹುದು. ಗ್ರಾಮ ಲೆಕ್ಕಾಧಿಕಾರಿ ಕಚೇರಿಯಲ್ಲೂ ಕೂಡ ಪಹಣಿಗೆ ಆಧಾರ್ ಲಿಂಕ್ ಮಾಡಿಸಬಹುದು. ಮೊಬೈಲ್‌ನಲ್ಲಿ ಸ್ವತಃ ರೈತರೇ ಆಧಾರ್-ಪಹಣಿ ಜೋಡಣೆ ಕೊಳ್ಳಬಹುದಾಗಿದೆ. ಹೀಗೆ ಎರಡಕ್ಕೂ ಲಿಂಕ್ ಮಾಡಲು ಮೊದಲನೆಯದಾಗಿ ಬೆಳಕೆಯಲ್ಲಿರುವ ಮೊಬೈಲ್ ಸಂಖ್ಯೆ ಆಧಾರ್‌ಗೆ ಜೋಡಣೆಯಾಗಿರಬೇಕು.
ಆಧಾರ್-ಪಹಣಿ ಮಾಡುವ ಸಂದರ್ಭದಲ್ಲಿ ಎರಡು ಪ್ರತ್ಯೇಕ ಒಟಿಪಿ ಬರುತ್ತವೆ. ಅಲ್ಲೇ ರೈತರ ಫೋಟೋ ತೆಗೆದು ಅಪ್ ಲೋಡ್ ಮಾಡುವ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ನಡೆಯುತ್ತದೆ. ಹಲವು ತೊಡಕುಗಳ ರೈತರು ಸ್ವತಃ ತಮ್ಮ ಮೊಬೈಲ್ ಮೂಲಕ ಆನ್‌ಲೈನ್ ನಲ್ಲಿ ಆಧಾರ್-ಪಹಣಿ ಜೋಡಣೆಗೆ ಅವಕಾಶ ಇದ್ದರೂ ಆದಾರ್‌ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರಿಗೆ ವ್ಯತ್ಯಾಸದಿಂದಾಗಿ ಜೋಡಣೆಯಾಗುತ್ತಿಲ್ಲ. ಆದರೆ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಈ ಕೆಲಸ ಸುಲಭವಾಗಿ ಆಗುತ್ತಿದೆ. ಸಮಸ್ಯೆ ಎಂದರೆ ಕೆಲವು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ನೆಟ್‌ವರ್ಕ್ ಸಮಸ್ಯೆಯ ಜೊತೆಗೆ ಆದಿ- ಕಾರ ಜೋಡಣೆ ಆಗಿರುವ ರೈತರ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿರುವುದು, ಜೋಡಣೆ ಸಂದರ್ಭದಲ್ಲಿ ಒಟಿಪಿ ಬರುವುದು ವಿಳಂಬವಾಗುವುದು, ಆಧಾರ್ ಕಾರ್ಡ ಮೊಬೈಲ್ ಸಂಖ್ಯೆ ಜೋಡಣೆ ಆಗದಿರುವುದು ಮತ್ತಿತ್ತರ ತೊಡಕುಗಳಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಪಹಣಿ ಪತ್ರಕ್ಕೆ ಆಧಾರ್ ಜೋಡಣೆ ಮಾಡಲು ಹೊಸದಾದ ಸಿದ್ದಗೊಳಿಸಿದ್ದು, ಅನುಕೂಲವಾಗುವಂತೆ ತಂತ್ರಾಂಶವನ್ನು ಈ ಕಾರ್ಯವನ್ನು ಮಾಡಲು ಗ್ರಾಮ ಆಡಳಿತ ಅಧಿಕಾ- ರಿಗಳಿಗೆ ಜವಾಬ್ದಾರಿ ನೀಡಲಾಗಿರುತ್ತದೆ. ಸರ್ಕಾರದ ವಿವಿಧ ಪ್ರಯೋಜನಗಳನ್ನು ಪಡೆಯಲು ಶಾಶ್ವತ ಪರಿಹಾರದ ಅಂಗವಾಗಿ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಗ್ರಾಮ್ ಒನ್ಕೇಂದ್ರ, ಗ್ರಾಮ ಆಡಳಿತ ಕಚೇರಿ ಅಥವಾ ಆಧಾರ್ ಕಾರ್ಡ್ ಲಿಂಕ್ ಮಾಡಲು ಆಡಳಿತ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದಾಗ ಅವರಿಗೆ ಅಗತ್ಯ ದಾಖಲೆಗಳನ್ನುನೀಡಿ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಲಾಭಗಳು?
*ನಿಮ್ಮ ಭೂಮಿಯ ದಾಖಲೆಗಳನ್ನು (ಊದಾ:ಪಹಣಿ, ಆಕರ ಬಂದ,ಪೋಡಿ,ಹಿಡುವಳಿ.) ಸುಲಭವಾಗಿ ಪಡೆಯಬಹುದು.
*ಪಹಣಿ ಮತ್ತು ಆಧಾರ್ ಲಿಂಕ್ ಮಾಡಿಸುವುದರಿಂದ ಸರ್ಕಾರದ ಯೋಜನೆಗೆ ರೈತರು ಸುಲಭವಾಗಿ ಅರ್ಜಿ ಹಾಕಬಹುದು. ಹೀಗೆ ಲಿಂಕ್ ಮಾಡುವುದರಿಂದ ರೈತರ ಭೂಮಿಯಲ್ಲಿ ಯಾವುದೇ ವಿವಾದಗಳು ಬರುವುದಿಲ್ಲ.
*ರೈತರು ತಮ್ಮ ಹೊಲದ ಮೇಲೆ ಸುಲಭವಾಗಿ ಯಾವುದೇ ಲೋನ್ ಮತ್ತು ಸಾಲವನ್ನು ಪಡೆಯಬಹುದು.
*ರೈತರು ಭೂಮಿ ಮರುವಾಗ ಮತ್ತು ಕೊಳ್ಳುವಾಗ ಪಾರದರ್ಶಕತೆ ಹೆಚ್ಚುತ್ತದೆ. ಒಬ್ಬ ವ್ಯಕ್ತಿಯ ಎಲ್ಲಾ ಜಮೀನಿನ ವಿವರ ಸುಲಭವಾಗಿ ತಿಳಿಯಬಹುದು.
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ಸ್ವಂತ ದಾರಿ ಇಲ್ಲವೇ? ಅಕ್ಕಪಕ್ಕದವರು ದಾರಿ ಕೊಡುತ್ತಿಲ್ಲವೇ? ಹಾಗಿದ್ದರೆ ಅಧಿಕೃತವಾಗಿ ನಿಮ್ಮ ಜಮೀನಿಗೆ ದಾರಿ ಪಡೆದುಕೊಳ್ಳುವುದು ಹೇಗೆ?
https://krushisanta.com/How-to-solve-Road-problems-to-Farmers-Field-through-rules
ಇದನ್ನು ಓದಿ:ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ ರೈತರ ಸಾಲ ಮನ್ನಾ ವರದಿ ಸ್ಟೇಟಸ್ ಚೆಕ್ ಮಾಡಿ?
https://krushisanta.com/By-using-Aadhaar-number-or-ration-card-number-check-loan-Waiver-status
ಇದನ್ನು ಓದಿ:50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಆಧಾರಿತ ಸಿಂಪರಣೆ ಯಂತ್ರ ಮತ್ತು ಎಡೆ ಕುಂಟೆ ಯಂತ್ರ
https://krushisanta.com/Tractor-drawn-spraying-machine-and--inter-cultivator-in-subsidy
ಇದನ್ನು ಓದಿ:ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ನೋಡಿ ಕಾಲುದಾರಿ ಬಂಡಿದಾರಿ ರೈಲ್ವೆ ದಾರಿ ಮತ್ತು ಕಳ್ಳ ಕೊಳ್ಳಗಳು ಎಲ್ಲಿವೆ ಸರ್ವೆ ನಂಬರ್ ನೋಡಿ ಚೆಕ್ ಮಾಡಿ
https://krushisanta.com/Download-Gram-Panchayat-wise--map-to-view-roads-and-lines
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ