ತೋಟಗಾರಿಕಾ ಇಲಾಖೆಯಿಂದ ಉಳ್ಳಾಗಡ್ಡಿ ಶೆಡ್ !ಮತ್ತು ಇತರೆ ಸೌಲಭ್ಯಗಳಿಗೆ ಅರ್ಜಿ

<ಈರುಳ್ಳಿ ಘಟಕ> <ಉಳ್ಳಾಗಡ್ಡಿ ಶೆಡ್> < ಉಳ್ಳಾಗಡ್ಡಿ ಶೆಡ್> < ಈರುಳ್ಳಿ ಘಟಕ ಯೋಜನೆ> < ಈರುಳ್ಳಿ ಘಟಕ ನಿರ್ಮಾಣ>

Jul 2, 2024 - 17:29
 0
ತೋಟಗಾರಿಕಾ ಇಲಾಖೆಯಿಂದ ಉಳ್ಳಾಗಡ್ಡಿ ಶೆಡ್ !ಮತ್ತು ಇತರೆ ಸೌಲಭ್ಯಗಳಿಗೆ ಅರ್ಜಿ

2024ರ ಹೊಸ ಅರ್ಜಿಗಳು ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ಬಾಳೆ ಬೆಳೆ, ಪೇರಲ ಬೆಳೆ, ಡ್ರಾಗನ್ ಹಣ್ಣು ಕೃಷಿ,ನೇರಳೆ ಹಣ್ಣು ಕೃಷಿ, ಹುಣಸೆ ಹಣ್ಣುಗಳ ಪ್ರದೇಶ ವಿಸ್ತರಣೆ,ಹೈಬ್ರಿಡ್ ತರಕಾರಿ ಕೃಷಿ,ಹೂವು ಪ್ರದೇಶ ವಿಸ್ತರಣೆ, ಸಮುದಾಯ ಕೆರೆ ಘಟಕಗಳ ನಿರ್ಮಾಣ, ವೈಯಕ್ತಿಕ ನೀರು ನೆರಳು ಪರದೆ ಘಟಕಗಳ ನಿರ್ಮಾಣ, ಪ್ಯಾಕ್‌ಹೌಸ್ ಘಟಕ ಹಾಗೂ ಈರುಳ್ಳಿ ಶೇಖರಣಾ ಘಟಕಗಳಿಗೆ ಸಹಾಯಧನದ ಸೌಲಭ್ಯವಿದ್ದು ಆಸಕ್ತ ರೈತರು ಸಂಬಂಧಿಸಿದ ತಾಲೂಕು ತೋಟಗಾರಿಕೆ ಕಚೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಲೆ ತಿಳಿಸಿರುವ ಪ್ರತಿಯೊಂದು ಯೋಜನೆಯ ವಿವರವನ್ನು ಇಲ್ಲಿ ಕೆಳಗಡೆ ನೀಡಲಾಗಿದೆ?

ಪ್ರದೇಶ ವಿಸ್ತರಣೆ: ತೋಟಗಾರಿಕೆ ಬೆಳೆಗಳಾದ ಹಣ್ಣು, ತೋಟದ ಬೆಳೆಗಳ ಪ್ರದೇಶ ವಿಸ್ತರಣೆಗೆ ಪ್ರತಿ ಫಲಾನುಭವಿಗೆ 4 ಹೆಕ್ಟೇರ್ ಹಾಗೂ ಹೈಬ್ರೀಡ್ ತರಕಾರಿಗಳು ಹಾಗೂ ಹೂವಿನ ಬೆಳೆಗಳಿಗೆ 2 ಹೆಕ್ಟೇರ್ ವರೆಗೆ ಮಿತಿಗೊಳಿಸಿ ಶೇ. 40 ರಂತೆ ಸಹಾಯಧನ ನೀಡಲಾಗುತ್ತದೆ.

ಸಂರಕ್ಷಿತ ಬೇಸಾಯ:

a)ಪಾಲಿ ಹೌಸ್ ನಿರ್ಮಾಣ:ಪ್ರತಿ ಫಲಾನುಭವಿಗೆ ರೂ.798/- ರಿಂದ ರೂ.1094/- ಪ್ರತಿ ಚದರ ಮೀಟರ್ ನಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುತ್ತದೆ.

b)ನೆರಳು ಪರದೆ ನಿರ್ಮಾಣ:ಪ್ರತಿ ಫಲಾನುಭವಿಗೆ ರೂ.394/- ಪ್ರತಿ ಚದರ ಮೀಟರ್ ರಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುತ್ತಿದೆ.

ಸಮಗ್ರ ಕೊಯ್ಲೋತ್ತರ ನಿರ್ವಹಣೆ:ರೈತರಿಗೆ ಒಳ ರಾಜ್ಯದಲ್ಲಿ ರೂ.1000/- ಮತ್ತು ಹೊರ ರಾಜ್ಯದಲ್ಲಿ ರೂ.1500/- ಪ್ರತಿ ದಿನಕ್ಕೆ ವೆಚ್ಚ ಭರಿಸಲಾಗುತ್ತದೆ.

a)ಪ್ಯಾಕ್‍ಹೌಸ್.:ನಿಗದಿತ ವಿನ್ಯಾಸದಲ್ಲಿ ನಿರ್ಮಿಸಿದ ಕನಿಷ್ಠ ಕಡ್ಡಾಯ ಸೌಕರ್ಯಗಳನ್ನು ಹೊಂದಿರುವ 162 ಘ.ಮೀ. ಅಳತೆಯ (9ಮಿ*6ಮಿ*4ಮಿ) ಪ್ಯಾಕ್‍ಹೌಸ್‍ನ ಘಟಕ ವೆಚ್ಚ ರೂ.4.00 ಲಕ್ಷಗಳಾಗಿದ್ದು, ಗರಿಷ್ಟ ರೂ.2.00 ಲಕ್ಷಗಳ ಸಹಾಯಧನ ನೀಡಲಾಗುತ್ತಿದೆ.

ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕ:(25 ಮೆ.ಟನ್) ಕನಿಷ್ಟ 25 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವಿರುವ ಘಟಕಕ್ಕೆ ರೂ 1.75 ಲಕ್ಷಗಳ ವರೆಗೆ ಯೋಜನಾ ಪ್ರಸ್ತಾವನೆ ವೆಚ್ಚವು ಇದ್ದು, ಇದರಲ್ಲಿ ಶೇ. 50 ರಂತೆ ಗರಿಷ್ಠ ರೂ. 0.875 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

ಅರ್ಜಿಯನ್ನು ಆಫ್ಲೈನ್ ಮೂಲಕ ತೋಟಗಾರಿಕಾ ಇಲಾಖೆಗೆ ಹೋಗಿ ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಇಲಾಖೆಗೆ ಭೇಟಿ ನೀಡುವ ಸಮಯದಲ್ಲಿ ಇಲ್ಲಿ ನೀಡಿರುವ ದಾಖಲೆಗಳನ್ನು ತಪ್ಪದೆ ತೆಗೆದುಕೊಂಡು ಹೋಗಬೇಕು.

 ಆಧಾರ್ ಕಾರ್ಡ್

 ಪಹಣಿ ಪತ್ರ

 ತಲಾಟಿ ಸೆಟ್

 ಭಾವಚಿತ್ರ

 ಅರ್ಜಿ ನಮೂನೆ

 ಅರ್ಜಿ ನಮೂನೆಯನ್ನು ಅಲ್ಲೇ ಇಲಾಖೆ ತೋಟಗಾರಿಕಾ ಇಲಾಖೆಯಲ್ಲಿ ನೀಡಲಾಗುತ್ತದೆ ಮತ್ತು ಅದನ್ನು ಬರೆದು ಅದನ್ನು ತೋಟಗಾರಿಕಾ ನಿರ್ದೇಶಕರ ಕಡೆಯಿಂದ ಸಹಿಯನ್ನು ಮಾಡಿಸಿ ನಿಮ್ಮ ಹೆಸರನ್ನು ನೋಂದಣಿ ಅಥವಾ ಅರ್ಜಿಯನ್ನು ಸಲ್ಲಿಸಬೇಕು.

ರೈತರ ಗಮನಕ್ಕೆ ಅರ್ಜಿಗಳು ತುಂಬಾ ಕಡಿಮೆ ಇರುತ್ತವೆ ರಾಷ್ಟ್ರೀಕೃತ ಯೋಜನೆ ಆಗಿರುವುದರಿಂದ ಸ್ವಲ್ಪ ಪ್ರಮಾಣದ ಅರ್ಜಿಗಳು ಮಾತ್ರ ಒಂದು ತೋಟಗಾರಿಕಾ ಇಲಾಖೆಗೆ ಬಂದಿರುತ್ತವೆ ಹೀಗಾಗಿ ನಿನ್ನೆ ತಾನೇ ಬಂದಿರುವ ಈ ಒಂದು ಪ್ರಕಟಣೆ ಮೂಲಕ ಬೇಗನೆ ಅರ್ಜಿ ಯಾರು ಸಲ್ಲಿಸುತ್ತಾರೋ ಅವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ನಾಳೆ ನೀವು ಕೂಡ ಹೋಗಿ ಅರ್ಜಿಯನ್ನು ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಿ.

ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ಸ್ವಂತ ದಾರಿ ಇಲ್ಲವೇ? ಅಕ್ಕಪಕ್ಕದವರು ದಾರಿ ಕೊಡುತ್ತಿಲ್ಲವೇ? ಹಾಗಿದ್ದರೆ ಅಧಿಕೃತವಾಗಿ ನಿಮ್ಮ ಜಮೀನಿಗೆ ದಾರಿ ಪಡೆದುಕೊಳ್ಳುವುದು ಹೇಗೆ?

https://krushisanta.com/How-to-solve-Road-problems-to-Farmers-Field-through-rules

ಇದನ್ನು ಓದಿ:ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ ರೈತರ ಸಾಲ ಮನ್ನಾ ವರದಿ ಸ್ಟೇಟಸ್ ಚೆಕ್ ಮಾಡಿ?

https://krushisanta.com/By-using-Aadhaar-number-or-ration-card-number-check-loan-Waiver-status

ಇದನ್ನು ಓದಿ:50% ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಆಧಾರಿತ ಸಿಂಪರಣೆ ಯಂತ್ರ ಮತ್ತು ಎಡೆ ಕುಂಟೆ ಯಂತ್ರ

https://krushisanta.com/Tractor-drawn-spraying-machine-and--inter-cultivator-in-subsidy

ಇದನ್ನು ಓದಿ:ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ನೋಡಿ ಕಾಲುದಾರಿ ಬಂಡಿದಾರಿ ರೈಲ್ವೆ ದಾರಿ ಮತ್ತು ಕಳ್ಳ ಕೊಳ್ಳಗಳು ಎಲ್ಲಿವೆ ಸರ್ವೆ ನಂಬರ್ ನೋಡಿ ಚೆಕ್ ಮಾಡಿ

https://krushisanta.com/Download-Gram-Panchayat-wise--map-to-view-roads-and-lines

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ

https://krushisanta.com/Aadhar-to-RTC-Linking-is-mandatory-to-get-government--facilities-in-Karnataka

admin B.Sc(hons) agriculture College of agriculture vijayapura And provide consultant service