ರೈತರು ಬೆಳೆ ಸರ್ವೆ ಮೊಬೈಲ್ ನಲ್ಲಿ ಮಾಡುವುದು ಹೇಗೆ? A to Z ಮಾಹಿತಿ ಜಂಟಿ ಕೃಷಿ ಇಲಾಖೆ
<ರೈತರ ಬೆಳೆ ಸಮೀಕ್ಷೆ> <ರೈತರ ಬೆಳೆ ಸರ್ವೇ> < ಆನ್ಲೈನ್ ನಲ್ಲಿ ಬೆಳೆ ಸರ್ವೇ > <ಆನ್ಲೈನ್ ಬೆಳೆ ಸರ್ವೇ > < ಆನ್ಲೈನ್ ಮೂಲಕ ಬೆಳೆ ಸರ್ವೆ> < ಮುಂಗಾರು ಬೆಳೆ ಸಮೀಕ್ಷೆ 2024>
ಆತ್ಮೀಯ ರೈತ ಬಾಂಧವರಿಗೆ ಈಗಾಗಲೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮುಂಗಾರು ಹಂಗಾಮಿನ ಬೆಳೆ ಸರ್ವೆ ಅಥವಾ ಬೆಳೆ ಸಮೀಕ್ಷೆ ಮಾಡಲು ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ ಮತ್ತು ಅದನ್ನು ರೈತರೇ ಸ್ವಂತ ತಮ್ಮ ಮೊಬೈಲ್ ಮೂಲಕ ನಿಮ್ಮ ಬೆಳೆ ಚಿತ್ರಗಳನ್ನು ತೆಗೆದು ಅದರಲ್ಲಿ ಅಪ್ಲೋಡ್ ಮಾಡಬೇಕು ಮುಂದೆ ಏನಾದರೂ ಬೆಳೆ ಹಾನಿಯಾಗಿದ್ದಲ್ಲಿ ಅಥವಾ ನೀವು ಬೆಳೆ ವಿಮೆ ಕಟ್ಟಿದ ನಂತರ ವಾಪಸ್ ಹಣವನ್ನು ಪಡೆಯಬೇಕಾದರೆ ಅದೇ ಸಮಯದಲ್ಲಿ ಈ ಒಂದು ದಾಖಲೆಗಳನ್ನು ನಿಖರವಾಗಿ ಇಟ್ಟುಕೊಂಡು ಸರ್ಕಾರ ಹಣವನ್ನು ವರ್ಗಾವಣೆ ಮಾಡುತ್ತದೆ.
ಆನ್ಲೈನ್ ನಲ್ಲಿ ನಿಮ್ಮ ಬೆಳೆ ಸರ್ವೇ ಮಾಡುವುದು ಹೇಗೆ?
ಇದರ ಬಗ್ಗೆ ಈಗಾಗಲೇ ಸ್ವಲ್ಪ ರೈತರಿಗೆ ಗೊತ್ತಿರಬಹುದು ಆದರೆ ಇನ್ನೂ ಬಹಳಷ್ಟು ರೈತರಿಗೆ ಇದನ್ನು ಮೊಬೈಲ್ ನಲ್ಲಿ ಯಾವ ರೀತಿ ಹೀಗೆ ಮಾಡಬೇಕು ಎಂಬುದರ ಬಗ್ಗೆ ಇನ್ನೂ ಗೊತ್ತಾಗಿಲ್ಲ ಆದರೆ ಈ ಒಂದು ಲೇಖನದಲ್ಲಿ ಪ್ರತಿಯೊಂದು ಅಂತ ಹಂತವಾಗಿ ನೀವು ಏನು ಮಾಡಬೇಕು ಮತ್ತು ಅದನ್ನು ಭಾವಚಿತ್ರದ ಮೂಲಕ ತೋರಿಸುತ್ತಾ ಹೋಗುತ್ತೇವೆ.
ಕೆಳಗಡೆ ನೀಡಿರುವ ಪ್ರತಿಯೊಂದು ಹಂತವನ್ನು ತಪ್ಪದೇ ನೀವು ನಿಮ್ಮ ಮೊಬೈಲ್ ನಲ್ಲಿ ಮಾಡುತ್ತಾ ಹೋಗಿ ಮತ್ತು ಕೂಡಲೇ ಬೆಳೆ ಸಮೀಕ್ಷೆಯನ್ನು ಸಹ ಪೂರ್ಣಗೊಳಿಸಬಹುದು ಅರ್ಥವಾಗದೆ ಇದ್ದಲ್ಲಿ ಕೆಳಗಡೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ನೀವು ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಮತ್ತು ಈ ಕರೆಗಳು ಉಚಿತವಾಗಿದ್ದು ರೈತರ ಸಕಲ ಸೇವೆಗೆ ಸಿದ್ಧವಾಗಿದೆ.
ಹಂತ 1: ಮೊಟ್ಟ ಮೊದಲಿಗೆ ಈ ವರ್ಷದ ಬೆಳೆ ಸರ್ವೆ ಮಾಡುವ ಅಪ್ಲಿಕೇಶನ್ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ಅದನ್ನು ನಾನು ಇಲ್ಲಿ ಕೆಳಗಡೆ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆತ್ಮಿಯ ರೈತ ಬಾಂದವರೇ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಬೇಳೆ ಸಮೀಕ್ಷೆ ಆಪ್ (ಅಪ್ಲಿಕೇಶನ್) ಬಿಡುಗಡೆ ಮಾಡಿದ್ದು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ದಯವಿಟ್ಟು ಕೆಳಗಿನ ಗೂಗಲ್ ಪ್ಲೇ ಸ್ಟೋರ್ ಲಿಂಕ್ ಅನ್ನು ಹುಡುಕಿ.
https://play.google.com/store/apps/details?id=com.csk.farmer23_24.cropsurvey
Next
ಹಂತ 2: ಲಾಗಿನ್ ಆಗುವ ವಿಧಾನ ಇರಲಿ ನೀವು ಹೀಗೆ ಕೆ ವೈಸಿ ಆಧಾರ ಇದನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಆಧಾರ್ ಓಟಿಪಿ ಬರುತ್ತದೆ ಅದನ್ನು ಅಲ್ಲಿ ನಮೂದಿಸಿ ಮತ್ತು ನಿಮ್ಮ ಹೆಸರು ಯಾವ ರೀತಿಯಾಗಿದೆ ಅದೇ ರೀತಿಯಾಗಿ ಇದರಲ್ಲಿ ಕೂಡ ಟೈಪ್ ಮಾಡಿ.
ಹಂತ 2:ಆಧಾರ್ ನೊಂದಿಗೆ ಜೋಡಣೆಯಾದ ಜಮೀನು ಪಟ್ಟಿಯನ್ನು ಪರೀಕ್ಷಿಸಿ ಮತ್ತು ನಿಮ್ಮ ಜಮೀನು ತೋರಿಸುತ್ತಿದೆಯಾ ಅಥವಾ ಬೇರೆ ಜಮೀನು ತೋರಿಸುತ್ತಿದೆಯಾ ಅದನ್ನು ಗಮನಿಸಿ ನಂತರ ನಿಮ್ಮದೇ ಸರ್ವೇ ನಂಬರ್ ತೋರಿಸುತ್ತಿದ್ದರೆ ಮುಂದೆ ಕಂಟಿನ್ಯೂ ಮಾಡಿ.
ಹಂತ 3:ಸರ್ವೇನಂ ಆಯ್ಕೆ ಮಾಡಿದ ನಂತರ ನೀರಾವರಿ ಅಥವಾ ಮಳೆಶ್ರಿತ ಬೇಳೆಯನ್ನು ಆಯ್ಕೆ ಮಾಡಿ ನಂತರ ಎಷ್ಟು ಎಕರೆ ಬಿತ್ತನೆ ಮಾಡಿದ್ದೀರಿ ನಮೂದಿಸಿ ನಂತರ ಮೂರು ಹಂತಗಳಲ್ಲಿ ಛಾಯಚಿತ್ರವನ್ನು ಸೆರೆಹಿಡಿಯಬೇಕು
1ನೇ ಹಂತ: ಪೂರ್ಣ ಹೊಲದ ಛಾಯಚಿತ್ರ ಸೆರೆ ಹಿಡಿಯಿರಿ.
2ನೇ ಹಂತ: ಬೇಳೆಯ ಸಾಲುಗಳು ಕಾಣುವ ಹಾಗೇ ಛಾಯಚಿತ್ರ ಸೆರೆ ಹಿಡಿಯಿರಿ.
3ನೇ ಹಂತ: ನಿರ್ಧಿಷ್ಟ ಬೇಳೆ ಕಾಣುವ ಹಾಗೇ ಛಾಯಚಿತ್ರ ಸೆರೆ ಹಿಡಿದು ಮಾಹಿತಿಯನ್ನು ಸೇರಿಸಿ.
ಹಂತ 4: ಇದಾದ ನಂತರ ನೀವು ನಿಮ್ಮ ಡಾಕ್ಯುಮೆಂಟ್ಸ್ಗಳನ್ನು ಅಪ್ಲೋಡ್ ಮಾಡಿದ ಮೇಲೆ ಅಂದರೆ ನಿಮ್ಮ ಜಮೀನಿನ ಭಾವಚಿತ್ರ ಅಪ್ಲೋಡ್ ಮಾಡಿದ ಮೇಲೆ ಆ ಕೆಳಗಡೆ ನೀಡಿರುವ ಬಾಕ್ಸ್ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಅದು ತಿರುಗಿದ ನಂತರ ನಿಮ್ಮ ಬೆಳೆ ಸರ್ವೆ ಆಗಿದೆ ಎಂದರ್ಥ.
ಇದನ್ನು ಓದಿ:ಕೈಗೆ ತಗಲುವ ಬೆಲೆಯಲ್ಲಿ ಬಿತ್ತನೆ ಮಾಡಲು ಬಂತು ಬಿತ್ತನೆಯ ಕೈ ಮತ್ತು ಸೈಕಲ್ ಆಧಾರಿತ ಬಿತ್ತನೆ ಯಂತ್ರ 60 ನಿಮಿಷದಲ್ಲಿ ಒಂದು ಎಕರೆ ಬಿತ್ತನೆ ಮಾಡಬಲ್ಲದು
https://krushisanta.com/Multipurpose-hand-and-Cycle-seed-drill
ಇದನ್ನು ಓದಿ:ಪಹಣಿ ಆಧಾರ್ ಲಿಂಕ್ ಸ್ಟೇಟಸ್? ಇಲ್ಲದಿದ್ದರೆ ಹೆಚ್ಚುವರಿ ಪರಿಹಾರ ಯಾವ ರೈತರಿಗೂ ಸಹ ಬರುವುದಿಲ್ಲ? ಇಲ್ಲಿಯವರೆಗೆ ಲಿಂಕ್ ಆಗಿರುವ ಸ್ಟೇಟಸ್ ಚೆಕ್ ಮಾಡಿ
https://krushisanta.com/Pahani-and-Aadhar-link-status-check
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ಸ್ವಂತ ದಾರಿ ಇಲ್ಲವೇ? ಅಕ್ಕಪಕ್ಕದವರು ದಾರಿ ಕೊಡುತ್ತಿಲ್ಲವೇ? ಹಾಗಿದ್ದರೆ ಅಧಿಕೃತವಾಗಿ ನಿಮ್ಮ ಜಮೀನಿಗೆ ದಾರಿ ಪಡೆದುಕೊಳ್ಳುವುದು ಹೇಗೆ?
https://krushisanta.com/How-to-solve-Road-problems-to-Farmers-Field-through-rules
ಇದನ್ನು ಓದಿ:ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಸಂಖ್ಯೆ ಹಾಕಿ ರೈತರ ಸಾಲ ಮನ್ನಾ ವರದಿ ಸ್ಟೇಟಸ್ ಚೆಕ್ ಮಾಡಿ?
https://krushisanta.com/By-using-Aadhaar-number-or-ration-card-number-check-loan-Waiver-status