ರಾಜ್ಯದ ರೈತರಿಗೆ ಬೋರ್ವೆಲ್ ಕೊರೆಸಿಕೊಳ್ಳಲು 2.5 ಲಕ್ಷ ಆರ್ಥಿಕ ನೆರವು 4% ಬಡ್ಡಿ ದರದಲ್ಲಿ ನೀಡಲು ಅರ್ಜಿ ಆಹ್ವಾನ!

<ಬೋರ್ ವೆಲ್ ಸಹಾಯಧನ> <ಬೋರ್ವೆಲ್ ಅಪ್ಲಿಕೇಶನ್ <ರಾಜ್ಯದಲ್ಲಿ ಬೋರ್ವೆಲ್ ಅಪ್ಲಿಕೇಶನ್ ಪ್ರಾರಂಭ> < ಬೋರ್ ವೆಲ್ ಸಹಾಯಧನ ಅರ್ಜಿ> < ಬೋರ್ ವೆಲ್ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿ> < ರೈತರಿಗೆ ಸಹಾಯಧನದಲ್ಲಿ ಬೋರ್ವೆಲ್ ನೀಡಲು ಅರ್ಜಿ>

Jul 8, 2024 - 08:26
Jul 8, 2024 - 08:28
 0
ರಾಜ್ಯದ ರೈತರಿಗೆ ಬೋರ್ವೆಲ್ ಕೊರೆಸಿಕೊಳ್ಳಲು  2.5 ಲಕ್ಷ ಆರ್ಥಿಕ ನೆರವು  4% ಬಡ್ಡಿ ದರದಲ್ಲಿ ನೀಡಲು ಅರ್ಜಿ ಆಹ್ವಾನ!

ಯೋಜನೆಯ ಉದ್ದೇಶ ಈ ಯೋಜನೆಯಡಿಯಲ್ಲಿ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಇಲ್ಲದಿದ್ದಲ್ಲಿ ಕೊಳವೆ ಬಾವಿ ಕೊರೆಯುವುದು, ಪಂಪ್ ಸೆಟ್ ಅಳವಡಿಸುವುದು ಮತ್ತು ವಿದ್ಯುದ್ಧೀಕರಣವನ್ನು ಮಾಡಿಸಲು ಅತೀ ಕಡಿಮೆ ಬಡ್ಡಿ ದರ ಶೇ. 4 ರಂತೆ ಗರಿಷ್ಠ ರೂ.2.00 ಲಕ್ಷ ಸಾಲ ಹಾಗೂ ವಿದ್ಯುದ್ಧೀಕರಣಕ್ಕೆ ರೂ.50,000/- ಸಹಾಯಧನ ನೀಡಿ ಕೃಷಿಗೆ ಅನುವಾಗುವಂತೆ ನೆರವು ನೀಡಲಾಗುವುದು.

ಅರ್ಜಿದಾರರು ಹೊಂದಿರಬೇಕಾದ ದಾಖಲೆಗಳು??

*ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿದ್ದು, ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

*ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/- ಗಳ ಮಿತಿ ಒಳಗಿರಬೇಕು.

*ಅರ್ಜಿದಾರರು 21 ವರ್ಷ ಮೇಲ್ಪಟ್ಟು 50 ವರ್ಷ ಒಳಗಿನವರಾಗಿರಬೇಕು.

*ಅರ್ಜಿದಾರರು ಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಸ್ಥಳದಲ್ಲಿ ಇರುವ ಕನಿಷ್ಠ 2 ಮತ್ತು ಗರಿಷ್ಠ 5 ಕರೆ ಜಮೀನು ಹೊಂದಿರಬೇಕು.

*ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.

ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶೇ.33 ರಷ್ಟು ಮಹಿಳಾ ಫಲಾನುಭವಿಗಳನ್ನು, ಶೇ.5 ರಷ್ಟು ವಿಶೇಷಚೇತನರಿಗೆ ಮತ್ತು ಶೇ.5 ರಷ್ಟು ತೃತೀಯ ಲಿಂಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

*ಈ ಯೋಜನೆಯಡಿಯಲ್ಲಿ ಸಾಲವನ್ನು ಭದ್ರತೆ ರಹಿತವಾಗಿ ನೀಡಲಾಗುವುದು.

*ಅರ್ಜಿದಾರರು ಸಣ್ಣ ರೈತರಾಗಿರುವ ಬಗ್ಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಧೃಡೀಕರಣ ಪತ್ರ.

*ಸಾಲವು ಘಟಕ ವೆಚ್ಚ ರೂ.2.00 ಲಕ್ಷಗಳಿಗಿಂತ ಹೆಚ್ಚದ್ದಲ್ಲಿ ಫಲಾನುಭವಿಯು ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡತಕ್ಕದ್ದು.

ಇತರೆ ಷರತ್ತುಗಳು??

*ಈ ಯೋಜನೆಯಲ್ಲಿ ನಿಗಮದಿಂದ ಸಾಲ/ಸಹಾಯಧನವನ್ನು ಪಡೆದ ಫಲಾನುಭವಿಯು ಕಡ್ಡಾಯವಾಗಿ ನಿಗಮದ ಹೆಸರು ಮತ್ತು ಲಾಂಛನವನ್ನು ಕೃಷಿ ಭೂಮಿಯಲ್ಲಿ ಫಲಕದಲ್ಲಿ ನಮೂದಿಸಿ ಪ್ರದರ್ಶಿಸಬೇಕಾಗಿರುತ್ತದೆ.

*ನಿಗಮದ ವತಿಯಿಂದ ಆಯೋಜಿಸುವ ಮಾರ್ಕೆಟಿಂಗ್ ತರಬೇತಿ ಅಥವಾ ಕೃಷಿಗೆ ಸಂಬಂಧಿಸಿದ ಟ್ರೈನಿಂಗ್ ಗಳಿಗೆ ಫಲಾನುಭವಿಯು ಕಡ್ಡಾಯವಾಗಿ ಹಾಜರಿರತಕ್ಕದ್ದು.

ಫಲಾನುಭವಿಯು ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಐ.ಎಸ್.ಐ ಗುರುತಿನ ಎಲ್ಲಾ ಕೃಷಿ ಉಪಕರಣಗಳನ್ನು ಬಳಸತಕ್ಕದ್ದು.

*ಫಲಾನುಭವಿಯು ಕಡ್ಡಾಯವಾಗಿ BEE (Bureau of Energy Efficiency) ರವರು ದೃಢೀಕರಿಸಿದ 4 ಅಥವಾ 5 ರೇಟಿಂಗ್ ಸಬ್ಮರ್ಸಿಬಲ್ ಪಂಪ್ಸೆಟ್ಗಳನ್ನು ಅಳವಡಿಸುವುದು ಪಂಪ್ಸೆಟ್ ಹಾಗೂ ಪೂರಕ ಸಾಮಗ್ರಿಗಳು ಐ.ಎಸ್.ಐ ಗುಣಮಟ್ಟದಾಗಿರಬೇಕು.

ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು??

ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯುವಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸಲ್ಲಿಸುವುದರೊಂದಿಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.

i. ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದಂತೆ "ನಮೂನೆ-ಜಿ” ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

ii. ಅರ್ಜಿದಾರರು ಸಣ್ಣ ರೈತರಾಗಿರುವ ಬಗ್ಗೆ ಹಾಗೂ ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಧೃಡೀಕರಣ ಪತ್ರ.

ii. ಅರ್ಜಿದಾರರು ಹೊಂದಿರುವ ಜಮೀನಿನ ಕಂದಾಯ ದಾಖಲೆಗಳಾದ ಆರ್.ಟಿ.ಸಿ/ಪಹಣಿ, ಖಾತಾ ಉತಾರ, ಪಟ್ಟಾಪುಸ್ತಕ, ಮ್ಯುಟೇಶನ್, ಇ.ಸಿ, ವಂಶವೃಕ್ಷ, ಜಮೀನಿನ ಚೆಕ್‌ಬಂದಿ ಹಾಗೂ ಅರ್ಜಿದಾರನು ತನ್ನ ಜಮೀನಿನಲ್ಲಿ ನಿಂತಿರುವ ಜಿಯೋ ಸ್ಟ್ಯಾಂಪ್ಸ್ ಫೋಟೋ.

iv. ಅರ್ಜಿದಾರರು ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವುದಕ್ಕೆ ಸಂಬಂಧಪಟ್ಟ ಕಂದಾಯ ಅಧಿಕಾರಿಯಿಂದ ದೃಢೀಕರಣ ಪತ್ರ.

V. ಸಾಲವು ಘಟಕ ವೆಚ್ಚ ರೂ.2.00 ಲಕ್ಷಗಳಿಗಿಂತ ಹೆಚ್ಚಿದ್ದಲ್ಲಿ ಫಲಾನುಭವಿಯು ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಸ್ವಯಂ ಘೋಷಣಾ ಪತ್ರವನ್ನು ನೀಡತಕ್ಕದ್ದು.

vi. ಅರ್ಜಿದಾರರ ಜಮೀನಿನಲ್ಲಿ ಸೂಕ್ತ ಜಲಬಿಂಧು ದೊರೆಯುವ ಬಗ್ಗೆ ಭೂವಿಜ್ಞಾನಿಗಳು ಅಂತರ್ಜಲ ಇಲಾಖೆ ರವರು ನೀಡಿದ ಭೂಭೌತ ಸರ್ವೆ ವರದಿ ಸಲ್ಲಿಸಬೇಕು.

vii. ಯೋಜನೆಗೆ ಪೂರಕವಾದ ಮೇಲಿನಂತೆ ದಾಖಲೆಗಳನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ದಾಖಲಾತಿಗಳು ಅವಶ್ಯವಿದ್ದಲ್ಲಿ ಆಡಳಿತ ಮಂಡಳಿ ತೀರ್ಮಾನದಂತೆ ವ್ಯವಸ್ಥಾಪಕ ನಿರ್ದೇಶಕರು ಆಗಿಂದಾಗ್ಗೆ ಹೊರಡಿಸುವ ಆದೇಶಗಳನ್ವಯ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ನಿಮ್ಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಭೇಟಿ ನೀಡಬೇಕು ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದೆ ಹಾಗೂ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಅಥವಾ ಬೇಗನೆ ಅರ್ಜಿಗಳು ಬಂದರೆ ಜುಲೈ 31 ಕೊನೆಯ ದಿನಾಂಕವಾಗಿ ಪ್ರಕಟಣೆ ಮಾಡಬಹುದು ಹೀಗಾಗಿ ಕೂಡಲೇ ಸಂಪರ್ಕಿಸಿ ನೀವು ಕೂಡ ನಿಮ್ಮ ಜಮೀನಿನಲ್ಲಿ ಬೋರ್ ವೆಲ್ ಅಥವಾ ತೆರೆದ ಬಾವಿ ಮಾಡಿಕೊಳ್ಳಲು ಒಳ್ಳೆಯ ಅವಕಾಶವಿದೆ.

ಇದನ್ನು ಓದಿ:20+1 ಕುರಿ ಅಥವಾ ಮೇಕೆ ಘಟಕ ಸ್ಥಾಪನೆ ಮಾಡಲು ಅರ್ಜಿ ಆಹ್ವಾನ

https://krushisanta.com/Application-invited-for-Goat-shed-with-subsidiary-loan-amount

ಇದನ್ನು ಓದಿ:ರೈತರ ಖಾತೆಗೆ ಬೆಳೆ ಇನ್ಸೂರೆನ್ಸ್ ಹಣ ಜಮಾ! ನಿಮ್ಮ ಖಾತೆಗೆ ಅದೆಷ್ಟು ಬಂತು ಜಮಾ ಮೊಬೈಲ್ ನಲ್ಲೆ ಚೆಕ್ ಮಾಡಿ

https://krushisanta.com/Crop-insurance-amount-credited-to-farmers-account

ಇದನ್ನು ಓದಿ:ಮನೆಯಲ್ಲಿಯೇ ಖಾಲಿಯಾಗಿರುವ ರಸಗೊಬ್ಬರ ಚೀಲದಿಂದ ಉಡಿಚೀಲ ತಯಾರಿಸುವುದು ಹೇಗೆ?

https://krushisanta.com/How-to-make-fertilizer-applicator-bag--in-home

ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-Krushi-honda-in-Karnataka

admin B.Sc(hons) agriculture College of agriculture vijayapura And provide consultant service