ಉಚಿತ ಊಟವಸ್ತಿಯೊಂದಿಗೆ 30 ದಿನಗಳ ಬೈಕ್ ರಿಪೇರಿ ತರಬೇತಿ ಮತ್ತು ಸೇವೆ ಅರ್ಜಿ ಆಹ್ವಾನ! ತರಬೇತಿ ಮಾಡಿ ನಿಮ್ಮದೇ ಗ್ಯಾರೇಜ್ ಓಪನ್ ಮಾಡಿ!
<ಬೈಕ್ ರಿಪೇರಿ ತರಬೇತ> <ಉಚಿತ ಊಟವಸತಿ ಬೈಕ್ ರಿಪೇರಿ ತರಬೇತಿ > < 30 ದಿನಗಳ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ>
ಬೈಕ್ ರಿಪೇರಿ ಮತ್ತು ಸೇವೆ ಉಚಿತ ತರಬೇತಿ:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ಬೈಕ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್ 21 ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.
ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ?
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9740982585, 9380162042 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಇದೊಂದು ಅತ್ಯಂತ ದೊಡ್ಡ ಉದ್ಯಮವಾಗಿದೆ ಯಾಕೆಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನಾವು ಎರಡು ವೀಲರ್ ಬೈಕ್ ನೋಡಬಹುದು, ಏನಾದರೂ ಸಮಸ್ಯೆ ಆಗೇ ಆಗಿರುತ್ತದೆ ಹೀಗಾಗಿ ಇದನ್ನು ರಿಪೇರಿ ಮಾಡುವ ಕಲೆಗೆ ಬಹಳ ಬೆಲೆ ಇದೆ ಅದಾದ ನಂತರ ಅವರು ಇಂತಿಷ್ಟ ಎಂದು ಹಣ ಇರುವುದಿಲ್ಲ ಅವರು ಎಷ್ಟು ಹೇಳುತ್ತಾರೋ ಅಷ್ಟೇ ನೀಡಿ ಬರಬೇಕಾಗುತ್ತದೆ ಇಲ್ಲದಿದ್ದರೆ ನಮ್ಮ ಬೈಕ್ ರಿಪೇರಿ ಆಗುವುದಿಲ್ಲ.
ಇಂತಹ ತರಬೇತಿಗಳನ್ನು ಪಡೆದು ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ತುಂಬಾ ಸಹಕಾರಿಯಾಗುತ್ತದೆ ಅದಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ನೀವು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಈ ತರಬೇತಿ ನಂತರ ನಿಮಗೆ ಸರ್ಟಿಫಿಕೇಟ್ ತರ ದೊರೆಯುತ್ತದೆ.
ನಾವು ಬಹಳಷ್ಟು ನೋಡಿದ್ದೇವೆ ಈ ಧರ್ಮಸ್ಥಳ ಟ್ರಸ್ಟ್ ನಿಂದ ಬಹಳಷ್ಟು ಉದ್ಯೋಗಗಳ ತರಬೇತಿಗಳನ್ನು ಆರಂಭಿಸುತ್ತಾರೆ ಮತ್ತು ಪ್ರತಿ ತಿಂಗಳು 2 ರಿಂದ 3 ತರಬೇತಿಗಳು ಬೇರೆ ಬೇರೆ ಗುರಿಯನ್ನು ಹೊಂದಿರುವ ಎರಡರಿಂದ ಮೂರು ತರಬೇತಿಗಳು ಪ್ರತಿ ತಿಂಗಳು ನಡೆಸಿಕೊಡುತ್ತಾರೆ ಮತ್ತು ತರಬೇತಿಗಳು ಉಚಿತವಾಗಿದ್ದು ಮತ್ತು ನಿಮಗೆ ವಸತಿಯುತವಾಗಿರುತ್ತವೆ.
ಇದನ್ನು ಓದಿ:ಪಿಎಂ ಕಿಸಾನ್ 18ನೇ ಕಂತಿನ ಹಣ ಪಡೆದುಕೊಳ್ಳುವ ಅರ್ಹ ರೈತರ ಪಟ್ಟಿ ಬಿಡುಗಡೆ
https://krushisanta.com/Pm-Kisan-18-installment-beneficiary-list
ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ಮಾಡಿಕೊಳ್ಳಲು ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನ
https://krushisanta.com/Application-invited-for-Krishi-Bhagya-scheme--in-karnataka
ಇದನ್ನು ಓದಿ:ಮುಂಗಾರು ಹಂಗಾಮಿನಿಂದ ಹಾಳಾದ ಬೆಳೆಗಳಿಗೆ 775 ಕೋಟಿ ಪರಿಹಾರ ಬಿಡುಗಡೆ
https://krushisanta.com/Government-has-released--flood-crop-lose-relief-to-Farmers
ಇದನ್ನು ಓದಿ:ಎಮ್ಮೆ ಅಥವಾ ಹಸು ಖರೀದಿ ಮಾಡಲು 65,000 ನೀಡಲು ಅರ್ಜಿ ಆಹ್ವಾನ