ನರ್ಸರಿ ಸರ್ಟಿಫಿಕೇಟ್ ಕೋರ್ಸ್ ತರಬೇತಿ ನೀಡಲು ಅರ್ಜಿ ಆಹ್ವಾನ!

<Nursery course> <nursery certificate course> <land nursery course> <how to apply for nursery certificate> <nursery certificate course>

Sep 16, 2024 - 07:09
 0
ನರ್ಸರಿ ಸರ್ಟಿಫಿಕೇಟ್ ಕೋರ್ಸ್ ತರಬೇತಿ ನೀಡಲು ಅರ್ಜಿ ಆಹ್ವಾನ!

ಆತ್ಮೀಯ ರೈತ ಬಾಂಧವರೇ ನರ್ಸರಿಗಳ ಬಗ್ಗೆ ನೀವು ಮಾಹಿತಿ ತಿಳಿದುಕೊಂಡಿರಬಹುದು ಕೆಲವೊಂದು ನರ್ಸರಿ ಗಳಿಂದ ಎಷ್ಟೋ ರೈತರು ಕೋಟ್ಯಾಧಿಪತಿ ಆಗಿದ್ದಾರೆ ನಿಮಗೂ ಕೂಡ ಅದೇ ಕನಸು ಇದ್ದರೆ, ಖಂಡಿತವಾಗಿಯೂ ನೀವು ಅದನ್ನು ಪೂರೈಸಿಕೊಳ್ಳಬಹುದು ಅದರಲ್ಲಿ ಪ್ರಮುಖವಾಗಿ ನಿಯಮ ಕರ್ನಾಟಕದ ಯಾವುದೇ ಭಾಗಗಳಲ್ಲಿ ಇದ್ದರೂ ಕೂಡ ನರ್ಸರಿಯನ್ನು ತುಂಬಾ ಚೆನ್ನಾಗಿ ನಡೆಸಬಹುದು ಮತ್ತು ನರ್ಸರಿಗಳಲ್ಲಿ ನೀವು ಸಸಿಗಳನ್ನು ಬೆಳೆದು ಅವುಗಳನ್ನು ಮಾರಾಟ ಮಾಡಿ ಕೋಟಿ ವ್ಯವಹಾರವನ್ನು ಮಾಡುವವರು ಉದಾರಣೆಗೆ ನಮ್ಮ ಮುಂದೆ ಸಾಕಷ್ಟು ಜನರಿದ್ದಾರೆ.

ನಿಮಗೆ ನರ್ಸರಿ ಸರ್ಟಿಫಿಕೇಟ್ ಇಲ್ಲದಿದ್ದರೂ ಸಹ ನೀವು ನರ್ಸರಿಯನ್ನು ನಿರ್ಮಾಣ ಮಾಡಬಹುದು ಆದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನಿಮಗೆ ದೊರೆಯುವುದಿಲ್ಲ ಆದರೆ ನಾವು ಈ ಒಂದು ಮಾಹಿತಿ ನಿಮಗೆ ನೀಡುವುದರಿಂದ ಕೃಷಿ ತೋಟಗಾರಿಕೆ ವಿಶ್ವವಿದ್ಯಾಲಯವಾಗಿರುವ ಶಿವಮೊಗ್ಗ ಜಿಲ್ಲೆಯಿಂದ ಒಳ್ಳೆಯ ಮಾಹಿತಿ ಬಂದಿದೆ ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಈ ಸರ್ಟಿಫಿಕೇಟ್ ನೀಡುವ ಫೋರ್ಸ್ ಅನ್ನು ತೆಗೆದಿದ್ದಾರೆ ಮತ್ತು ಈ ಸರ್ಟಿಫಿಕೇಟ್ ಕೋರ್ಸ್ ಅನ್ನು ಪಡೆದುಕೊಳ್ಳಲು ನೀವು ಅರ್ಜಿಯನ್ನು ಆನ್ಲೈನಲ್ಲಿ ಇದೆ ಸೆಪ್ಟೆಂಬರ್ 23ರ ಒಳಗಾಗಿ ಸಲ್ಲಿಸಬೇಕಾಗಿದೆ.

ನರ್ಸರಿ ಸರ್ಟಿಫಿಕೇಟ್ ಕೋರ್ಸ್ ಹೆಚ್ಚಿನ ಮಾಹಿತಿಗಾಗಿ?

ತೋಟಗಾರಿಕೆ ನರ್ಸರಿ ಸರ್ಟಿಫಿಕೇಟ್ ಕೋರ್ಸ್‌ಗಾಗಿ ಅರ್ಜಿ ಆಹ್ವಾನ ಶಿವಮೊಗ್ಗ (ಹೊಸನಾವಿಕ): ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಸೆ. 30 ರಿಂದ ತೋಟಗಾರಿಕೆಯಲ್ಲಿ ನರ್ಸರಿ ಬಗ್ಗೆ ಮೂರು ತಿಂಗಳುಗಳ ಸರ್ಟಿಫಿಕೇಟ್ ಕೋರ್ಸ್ ನಡೆಸ ಲು ಉದ್ದೇಶಿಸಿದ್ದು, ಅರ್ಹ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಸೆ. 23 ರೊಳಗಾಗಿ ಅರ್ಜಿ ಸಲ್ಲಿಸುವಂತೆ ವಿವಿಯ ಸಹಾಯಕ ಪ್ರೋಫೆಸರ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ವಿಜ್ಞಾನಿ ಗಳಾದ ಡಾ. ಬಿ.ವಿ ಚಂಪ- 7338582371, ಡಾ. ಭರತ್ ಕುಮಾರ್ ಎಂ.ವಿ.-82772065 49 ಮತ್ತು ಡಾ. ರವಿಶಂಕರ್ 20.-9916426892 ಇವರುಗಳನ್ನು ಸಂಪರ್ಕಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನು ಓದಿ:ಈ ರೈತರಿಗೆ 18ನೇ ಕಂತು ಶೀಘ್ರದಲ್ಲಿ ಜಮಾ ಆಗಲಿದೆ! ಹೆಸರು ಚೆಕ್ ಮಾಡಿ

https://krushisanta.com/P-M-kisan-Hana-18-ne-kantu-Jama-agalide

ಇದನ್ನು ಓದಿ:ಪಹಣಿ ಪತ್ರಿಕೆ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲವೇ? ಈ ಹೊಸ ವಿಧಾನದಿಂದ ಮನೆಯಲ್ಲಿ ಕುಳಿತು ಲಿಂಕ್ ಮಾಡಿ? ಮತ್ತು ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.

https://krushisanta.com/How-to-link-Aadhaar-card-to-land-Pahani-at-home

ಇದನ್ನು ಓದಿ:ಬಿಡದೆ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರಾಜ್ಯದಲ್ಲಿ ಇನ್ನೂ ಎಷ್ಟು ದಿನ ಇರಲಿದೆ?

https://krushisanta.com/Rainfall-Report-in-Karnataka-for-next-week

ಇದನ್ನು ಓದಿ:ಕೃಷಿಯಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ ಮಾಡಲು ಅರ್ಜಿ! ಸಿಗಲಿದೆ ಒಂದು ಕೋಟಿವರೆಗೆ ಸೌಲಭ್ಯ

https://krushisanta.com/Application-invited-for-hitech-harvester-hub-for-1-crore

admin B.Sc(hons) agriculture College of agriculture vijayapura And provide consultant service