ಇಲಾಖೆಯಿಂದ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಅರ್ಜಿ ಆಹ್ವಾನ!

<Solar pump set> <Invited for solar pump set> <solar pump set application> <solar pump set application in Karnataka>

Aug 28, 2024 - 07:22
 0
ಇಲಾಖೆಯಿಂದ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಅರ್ಜಿ ಆಹ್ವಾನ!

ಅಗಸ್ಟ 26: 2024- 25ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಯೋಜನೆಗಳ ಸೌಲಭ್ಯ ಸದುಪಯೋಗಪಡಿಸಿಕೊ ಳ್ಳಬಹುದಾಗಿದೆ.

ಯಾವ ಯಾವ ಯೋಜನೆಗಳಿಗೆ ಅರ್ಜಿ ಕರೆಯಲಾಗಿದೆ? ಗೊತ್ತ?

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಾರ್ಮ್ ಗೇಟ್, ಹಣ್ಣು ಮಾಗಿಸುವ ಘಟಕ, ಕೃಷಿಹೊಂಡ ಮತ್ತು ಕೀಟ ಬಲೆಗಳ ಅಳವಡಿಕೆ ಕಾರ್ಯಕ್ರಮಗಳಡಿ ಸಹಾಯಧನ ; ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತರಕಾರಿ ಬೀಜಗಳ ಕಿಟ್ ವಿತರಣೆ, ನೀರಿನಲ್ಲಿ ಕರಗುವ ರಸಗೊಬ್ಬರ, ಸೋಲಾರ್ ಮೋಟಾ‌ರ್ ಪಂಪ್‌ಸೆಟ್ ಅಳವಡಿಕೆ ಕಾರ್ಯಕ್ರಮಗಳಡಿ ಸಹಾಯಧನ, ತೋಟಗಾರಿಕೆಯಲ್ಲಿ ಯಾಂಶೀಕರಣ ಉಕರಣಗಳ ಖರಿದಿಗೆ ಸಹಾಯಧನ,ತಾಳೆ ಬೆಳೆ ಯೋಜನೆಯಡಿ ತಾಳೆ ಬೆಳೆ ಹೊಸಪ್ರದೇಶ ವಿಸ್ತರಣೆಗೆ ಸಹಾಯಧನ ; ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಘಟಕ ಅಳವಡಿಕೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿರುತ್ತದೆ.

ಸಹಾಯಧನ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು?

 ಪಹಣಿ ಪತ್ರ

 ಖಾತೆ ಉತಾರಿ

 ನಾಲ್ಕು ಭಾವಚಿತ್ರ

 ರೂ. 100 ಬಾಂಡ್ 

 ಅರ್ಜಿ ನಮೂನೆ.

ಅರ್ಜಿ ನಮೂನೆನೂ ಇಲಾಖೆಯಲ್ಲಿ ನೀಡಲಾಗುವುದು ಮತ್ತು ಇಲಾಖೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಸರಿಯಾಗಿ ತಪ್ಪದೇ ತುಂಬಬೇಕು ಇದನ್ನು ಸಾಮಾನ್ಯವಾಗಿ ರೈತರು ತುಂಬುವುದಿಲ್ಲ ಹೀಗಾಗಿ ಇದು ಇಲಾಖೆ ಅವರೇ ತುಂಬಿಕೊಳ್ಳುತ್ತಾರೆ ಹೀಗಾಗಿ ಅಗತ್ಯ ಮೇಲೆ ನೀಡಿರುವ ದಾಖಲೆಗಳ ಆದ ಪಹಣಿ ಪತ್ರ ಖಾತೆ ಉತಾರಿ ಹಾಗೂ ನಾಲ್ಕು ಭಾವಚಿತ್ರ ಹಾಗು ನೂರು ರೂಪಾಯಿ ಬಾಂಡನ್ನು ನೀವು ತಪ್ಪದೆ ನೀಡಬೇಕಾಗುತ್ತದೆ.

ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಆಸಕ್ತರೈತರು ಅರ್ಜಿಯನ್ನು ಸಲ್ಲಿಸಲು ಸೆಪ್ಟೆಂಬರ್ 10 ಕೊನೆಯ ದಿನವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಶಿರಹಟ್ಟಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅರ್ಜಿ ಆಯ್ಕೆಯನ್ನು ನಂತರ ತಿಳಿಸಲಾಗುತ್ತದೆ ಸಾಮಾನ್ಯವಾಗಿ ಸೋಲಾರ್ ಪಂಪ್ಸೆಟ್ಟುಗಳ ಅಳವಡಿಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಸತತವಾಗಿ ಪ್ರಯತ್ನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ವಿದ್ಯುತ್ ಸಂಪೂರ್ಣವಾಗಿ ನೀಡಲು ಸಾಧ್ಯವಾಗುವುದಿಲ್ಲ ಹೀಗಾಗಿ ತಾವೆಲ್ಲರೂ ಮಾಡಬೇಕಾದ ಆದ್ಯ ಕರ್ತವ್ಯ ಏನೆಂದರೆ ನೀವು ಯಾವುದೇ ರೀತಿ ವಿದ್ಯುತ್ ಶಕ್ತಿ ಕೆಇಬಿ ಗಳ ಮೇಲೆ ಅವಲಂಬನೆ ಯಾಗದೆ ವೈಯಕ್ತಿಕವಾಗಿ ಸೋಲಾರ್ ಪಂಪ್ಸೆಟ್ಟುಗಳನ್ನು ಅಳವಡಿಸುವ ಮೂಲಕ ನಿಮ್ಮ ಬಳಿ ಸೂರ್ಯನ ಬಿಸಿಲಿನಿಂದ ತಯಾರು ಮಾಡುವ ಇದ್ದು ಶಕ್ತಿಯನ್ನು ನೀವು ನೀರು ಎತ್ತಲು ಬಳಸಬಹುದು.

ಇದನ್ನು ಓದಿ:ಈ ರೈತರ ಖಾತೆಗೆ ಹಳ್ಳಿವಾರು ಬೆಳೆ ಪರಿಹಾರ ಜಮಾ ಆಗಿಲ್ಲ ಈ ಪಟ್ಟಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಪ್ರಕಟ ಮಾಡಿದ್ದಾರೆ ಬೇಗನೆ ದಾಖಲೆಗಳು ಸಲ್ಲಿಸಿ ನೀವು ಕೂಡ ಬೆಳೆ ಪರಿಹಾರ ಪಡೆಯಿರಿ

https://krushisanta.com/For-the-village-farmers-parihara-amount-will-not-credited-because-of-Aadhar-seeding-issue

ಇದನ್ನು ಓದಿ:ಹೊಸದಾಗಿ ಅಪ್ಡೇಟ್ ಆಗಿರುವ ನಿಮ್ಮ ಜಮೀನಿನ ಆಕಾರಬಂಧ ಸರ್ವೇ ನಂಬರ್ ಹಾಕಿ ಡೌನ್ಲೋಡ್ ಮಾಡಿಕೊಳ್ಳಿ

https://krushisanta.com/How-to-download-land-Akaraband-in-Mobile

ಇದನ್ನು ಓದಿ:ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಟ್ರೋಲಿ ನೀಡಲು! ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ ಮತ್ತು ಹತ್ತು ವರ್ಷಗಳ ವಾರಂಟಿ ನಿಮಗೆ ಯಾವ ರೀತಿ ಬೇಕೋ ಅದೇ ರೀತಿ ಮಾಡಿಸಿ

https://krushisanta.com/Get-tractor-trolley-subsidy-as-per-your-requirement-in-Annigeri-Dharwad-district

ಇದನ್ನು ಓದಿ:ನಿಮ್ಮ ಕೃಷಿ ಪಂಪ್ ಸೆಟ್ ಗಳಿಗೆ ಇನ್ನೂ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ನೀವು ದಂಡ ಕಟ್ಟಬೇಕಾಗುತ್ತದೆ?

https://krushisanta.com/Have-your-bore-well-pump-set-has-linked-with-Aadhar-Card-check-now

admin B.Sc(hons) agriculture College of agriculture vijayapura And provide consultant service