ನಿಮ್ಮ ಕೃಷಿ ಪಂಪ್ಸೆಟ್ಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಇಲ್ಲದಿದ್ದರೆ ಈಗ ಮಾಡಿ!
<ಆಧಾರ್ ಕಾರ್ಡ್ ಲಿಂಕ್ > <ಆಧಾರ್ ಕಾರ್ಡ್ ಸ್ಟೇಟಸ್ > <ಕೃಷಿ ಪಂಪ್ಸೆಟ್ಗೆ ಆಧಾರ್ ಕಾರ್ಡ್ ಲಿಂಕ್> < ಕೃಷಿ ಪಂಪ್ಸೆಟ್ಟುಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ>
ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್‌ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸೂಚನೆ ನೀಡಿದೆ.
ಆಯೋಗ 2024-25ನೇ ಸಾಲಿನಲ್ಲಿ ದರ ಪರಿಷ್ಕರಣೆ ಮಾಡುವ ಆದೇಶದಲ್ಲಿ ಕೃಷಿ ಪಂಪ್ ಸೆಟ್ಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿತ್ತು. ಕೃಷಿ ಚಟುವಟಿಕೆಗೆ ನೀರು ಒದಗಿಸಲು 10 ಎಚ್ ಪಿ ಪಂಪ್‌ಸೆಟ್ ಹೊಂದಿರುವ ರೈತರು ಕಡ್ಡಾಯವಾಗಿ ಆರ್‌ಆರ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಾಗಿದೆ.
ಪಹಣಿಯಲ್ಲಿ ಹೆಸರು ಇರುವ ಜಮೀನಿನ ವಾರಸುದಾರರು ಮರಣ ಹೊಂದಿದ್ದಲ್ಲಿ ಆಧಾರ್ ಜೋಡಣೆ ಸಮಸ್ಯೆಯಾಗುತ್ತಿತ್ತು. ಇದನ್ನು ನಿವಾರಣೆ ಮಾಡಲು ಮರಣ ಹೊಂದಿದ ವಾರಸುದಾರರ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಿ ಪ್ರಸ್ತುತ ಜಮೀನಿನ ವಾರಸುದಾರರಾಗಿರುವ ವ್ಯಕ್ತಿಗಳು ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಳ್ಳಬಹುದಾಗಿದೆ.
ಜಂಟಿ ಖಾತೆ ಹೊಂದಿದ್ದರೆ ಅಂತ ರೈತರು ಛಾಪಾಕಾಗದದಲ್ಲಿ ಉಳಿದ ಖಾತೆದಾರರ ಒಪ್ಪಿಗೆ ಪಡೆದು ಜೋಡಣೆ ಮಾಡಿಕೊಳ್ಳಬೇಕು. ಅಲ್ಲದೆ ಜಮೀನಿನ ಕ್ರಯಪತ್ರ ಸೇರಿದಂತೆ ಹಲವು ದಾಖಲೆಗಳನ್ನು ನೀಡಿ ಜೋಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಪದೇ ಪದೇ ಸರ್ಕಾರ ಇದನ್ನು ಒತ್ತಿ ಒತ್ತಿ ಹೇಳುತ್ತಿದೆ ಜನರು ತಿಳಿದುಕೊಳ್ಳುತ್ತಿಲ್ಲ ಮತ್ತು ಇದನ್ನು ಸಹ ಲಿಂಕ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರೈತರು ಯಾವುದೇ ಸೌಲಭ್ಯದಿಂದ ವಂಚಿತರಾಗಬಹುದು ಅದಕ್ಕಾಗಿ ಬೇಗನೆ ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ ಹಾಗೂ ಈ ಕೆಲಸವೂ ಕೂಡ ನಿಮಗೆ ಹಣ ಖರ್ಚು ಮಾಡಬೇಕಾಗಿಲ್ಲ ಸಂಪೂರ್ಣವಾಗಿ ಉಚಿತವಾಗಿದೆ ಕೇವಲ ನೀವು ನಿಮ್ಮ ಲೈನ್ ಮ್ಯಾನ್ ಗಳಿಗೆ ಈ ವಿಷಯವನ್ನು ತಿಳಿಸಿದರೆ ಸಾಕು ಅವರೇ ಬಂದು ಈ ಲಿಂಕ್ ಮಾಡಿಕೊಡುವ ಕಾರ್ಯವನ್ನು ಮಾಡಿಕೊಡುತ್ತಾರೆ.
ಸರ್ಕಾರ ಇದನ್ನು ಕಡ್ಡಾಯಗೊಳಿಸುತ್ತಿರುವುದು ಏಕೆ?
ಸಾಕಷ್ಟು ರೈತರು ಅನಧಿಕೃತ ಪಂಪ್ಸೆಟ್ಟುಗಳನ್ನು ಅಳವಡಿಕೆ ಮಾಡಿದ್ದಾರೆ ಮತ್ತು ಕೇವಲ ಒಂದು ಆಧಾರ್ ಕಾರ್ಡ್ ಲಿಂಕ್ ಮಾಡಿದರೂ ಸಹ ತಮ್ಮ ಆರ್ ಆರ್ ನಂಬರ್ ಗೆ ಅಂದರೆ ನಿಮ್ಮ ಬೋರ್ವೆಲ್ ಅಥವಾ ಬಾವಿ ಅಥವಾ ಕೆನಲ್ ಪಂಪುಗಳಿಗೆ ಆರ್‌ಆರ್ ನಂಬರ್ ಇರುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಕೇವಲ ಒಂದು ಮೋಟಾರ್ ಗೆ ಲಿಂಕ್ ಮಾಡಿ ಅಥವಾ ಇದು ರಾಜ್ಯ ಸರ್ಕಾರಕ್ಕೆ ಎಣಿಕೆ ಮಾಡಲು ಸಹಾಯಕಾರಿಯಾಗಿದೆ.
ಈ ಒಂದು ಆಧಾರದಿಂದ ಎಷ್ಟು ವಿದ್ಯುತ್ ಸರಬರಾಜು ಮಾಡಬಹುದು ಮತ್ತು ನೀರಿನ ಸೌಕರ್ಯ ಎಷ್ಟಿರಬೇಕು ಎಂದು ಅಂದಾಜು ಮಾಡಿ ಮುಂದಿನ ವರ್ಷ ಇದರ ಬಗ್ಗೆ ಹೆಚ್ಚು ಕ್ರಮವನ್ನು ಕೈಗೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಲಾಗುತ್ತದೆ. ನೀವು ಕರೆಂಟು ಜಾಸ್ತಿ ಬೇಕು ಲೈನ ಕಡಿಮೆ ಬೀಳುತ್ತಿದೆ ಮತ್ತು ನಮ್ಮ ಜಮೀನುಗಳಿಗೆ ನೀರು ಹಾಯಿಸಲು ಆಗುತ್ತಿಲ್ಲ ಎನ್ನುವವರಿಗೆ ಈ ಕಾರ್ಯವನ್ನು ಮೊದಲು ಮಾಡಿ ಏಕೆಂದರೆ ನಿಮ್ಮ ನೀವು ಅನಧಿಕೃತವಾಗಿ ಬಳಸುತ್ತಿರುವ ಪಂಪ್ಸೆಟ್ಟುಗಳಿಗೆ ಯಾರೋ ಹೊಣೆ ಇರುವುದಿಲ್ಲ ಅದರಿಂದ ನೀವು ಕರೆಂಟ್ ಬಳಕೆ ಮಾಡುತ್ತಿದ್ದೀರಿ ಆದರೆ ನೀವು ಅದು ಕರೆಂಟ್ ಬಳಕೆ ಮಾಡಿರುವುದು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ ಹೀಗಾಗಿ ಅವರಿಗೆ ಎಷ್ಟು ವಿದ್ಯುತ್ ಸರಬರಾಜು ಮಾಡಬೇಕು ಮತ್ತು ಎಷ್ಟು ನೀರು ಮಾಡಿದರೆ ಸರಿಯಾಗಿ ಆಗುತ್ತದೆ, ಇದರ ಬಗ್ಗೆ ಗೊಂದಲವನ್ನು ಹೊಂದಿದ್ದಾರೆ.
ಇದನ್ನು ಓದಿ:ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಿಜಿನೆಸ್ ಮಾಡಿಕೊಳ್ಳಲು 50% ಸಬ್ಸಿಡಿಯಲ್ಲಿ ಲೋನ್ ನೀಡಲು ಅರ್ಜಿ ಆಹ್ವಾನ
ಇದನ್ನು ಓದಿ:ಬೆಳೆ ವಿಮೆ ಬೆಳೆ ಪರಿಹಾರ ಮತ್ತು ಬರಗಾಲ ಪರಿಹಾರ? ಇನ್ನುವರೆಗೆ ಜಮಾ ಆಗದೇ ಇದ್ದಲ್ಲಿ? ನಿಮ್ಮ ಬೆಳೆಗಳು ಮಿಸ್ ಮ್ಯಾಚ್ ಆಗಿದ್ದರೆ ಸರಿಪಡಿಸಲು ತಿದ್ದುಪಡಿಗೆ ಅವಕಾಶ ನೀಡಿದೆ
https://krushisanta.com/Invited-for-crops-survey-edit-details-in-RTC-and-Crop-survey-app
ಇದನ್ನು ಓದಿ:ಮಿನಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಕ್ಟರ್ ಆಧಾರಿತ ನೇಗಿಲು ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ
https://krushisanta.com/Application-invited-for--MB-Plough-and-Mini-Tractors