ಇಲಾಖೆಯಿಂದ ಬೆಳೆಗಳಿಗೆ ಸಿಂಪರಣೆ ಮಾಡಲು ಪೆಟ್ರೋಲ್ ಪಂಪ್ ಮತ್ತು ಚಾರ್ಜರ್ ಪಂಪ್ ನೀಡಲು ಅರ್ಜಿ!

<ಸಿಂಪರಣೆಗೆ ಪೆಟ್ರೋಲ್ ಮತ್ತು ಚಾರ್ಜರ್ ಪಂಪ್> < ಸಬ್ಸಿಡಿಯಲ್ಲಿ ಸಿಂಪರಣೆ ಮಾಡಲು ಯಂತ್ರೋಪಕರಣಗಳು ನೀಡಲು ಅರ್ಜಿ>

Aug 25, 2024 - 07:43
 0
ಇಲಾಖೆಯಿಂದ ಬೆಳೆಗಳಿಗೆ ಸಿಂಪರಣೆ ಮಾಡಲು ಪೆಟ್ರೋಲ್ ಪಂಪ್ ಮತ್ತು ಚಾರ್ಜರ್ ಪಂಪ್  ನೀಡಲು  ಅರ್ಜಿ!

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಪ್ರಸ್ತುತ ದಿನಗಳಲ್ಲಿ ಎಲ್ಲರೂ ಬಿತ್ತನೆಯನ್ನು ಮಾಡಿದ್ದೀರಿ ಮತ್ತು ಬಿತ್ತನೆ ಬೆಳೆಗಳಿಗೆ ಈಗ ಸಿಂಪರಣೆ ಮಾಡುವ ಸಮಯ ಬಂದಿದೆ ಈ ರೀತಿ ವಾತಾವರಣ ಇರುವುದು ಕೀಡಿಗಳ ಹಾವಳಿ ಹೆಚ್ಚಾಗುತ್ತದೆ ಮತ್ತು ರಸ ಇರುವ ಕೀಟಗಳ ಹಾವಳಿ ಕಡಿಮೆಯಾಗುತ್ತದೆ ಅದಕ್ಕಾಗಿ ರೈತರು ಸಿಂಪರಣೆ ಯಂತ್ರಗಳನ್ನು ಕೆಲವೊಬ್ಬರ ಹತ್ತಿರ ಇರಬಹುದು ಮತ್ತು ಇನ್ನೂ ಕೆಲವೊಬ್ಬರನ್ನು ಹೊಸದಾಗಿ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಸ್ಪ್ರೇ ಮಾಡುವ ಯಂತ್ರಗಳನ್ನು ನೀಡಲಾಗುತ್ತಿದೆ.

ಸಬ್ಸಿಡಿ ದರದಲ್ಲಿ ಪೆಟ್ರೋಲ್ ಹಾಗೂ ಚಾರ್ಜರ್ ಸ್ಪ್ರೇಯರ್ ನೀಡಲು ಅರ್ಜಿ?

ಹೌದು ರೈತ ಬಾಂಧವರೇ ನೀವು ಈಗ ಅರ್ಜಿಯನ್ನು ಸಲ್ಲಿಸಲು ಸರಿಯಾದ ಅವಕಾಶ ನೀವು ಇಲಾಖೆಗೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸುವ ಬದಲು ಸಬ್ಸಿಡಿ ದರ ಮಾಡಿ ಕೊಡುವ ಅಧಿಕೃತ ವಿತರಕರ ಬಳಿ ಹೋಗಿ ಹಣವನ್ನು ಪಾವತಿಸಿ ನಂತರ ಅರ್ಜಿಯನ್ನು ಕೊಟ್ಟು ಬನ್ನಿ, ಇದು ತುಂಬಾ ಸುಲಭ ವಿಧಾನ ಮತ್ತು ಈ ವಿಧಾನದಿಂದ ನೀವು ನಿಮ್ಮ ಅರ್ಜಿ ಫೇಲಾಗದಂತೆ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ಅವಕಾಶ ಕೊನೆಯ ದಿನಾಂಕ ಯಾವಾಗಿದೆ ನಾವು ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಕರ್ನಾಟಕದಲ್ಲಿ ಇನ್ನೊಂದು 10 ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ ಮತ್ತು ಬಹಳಷ್ಟು ಕೃಷಿ ಇಲಾಖೆಗಳಲ್ಲಿ ಅಗಸ್ಟ್ 31ನೇ ಕೊನೆಯ ದಿನಾಂಕವಾಗಿದ್ದು ಬೇಗನೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು ಮತ್ತು ಕರ್ನಾಟಕದ ಬಹು ಕೃಷಿ ಇಲಾಖೆಗಳಲ್ಲಿ ಈ ಅರ್ಜಿಗಳನ್ನು ಕರೆಯಲಾಗಿದೆ ಇದರ ಜೊತೆಗೆ ಹನಿ ನೀರಾವರಿಗೆ ಮತ್ತು ಇನ್ನಿತರ ಸೌಲಭ್ಯಗಳಿಗೂ ಸಹ ಅರ್ಜಿಯನ್ನು ಕರೆಯಲಾಗಿದೆ ಬೇಗನೆ ಅರ್ಜಿ ಸಲ್ಲಿಸಿ ಇದರ ಉಪಯೋಗವನ್ನು ಪಡೆದುಕೊಳ್ಳಿ ತಾವೆಲ್ಲರೂ ತುಂಬಾ ಕಷ್ಟದಿಂದ ಇರುತ್ತೀರಿ ಅಂತ ಸಮಯದಲ್ಲಿ ಸರ್ಕಾರದ ಸಹಾಯಧನವನ್ನು ನೀವು ಪಡೆದರೆ ತುಂಬಾ ಉಪಯೋಗವಾಗುತ್ತದೆ.

ಅರ್ಜಿ ಸಲ್ಲಿಸಲು ನಿಮ್ಮಿಂದ ಬೇಕಾಗುವ ದಾಖಲೆಗಳನ್ನು ಇಲ್ಲಿ ಕೆಳಗಡೆ ನೀಡಲಾಗಿದೆ?

ಫಹಣಿ.

ಕೃಷಿ ಬೆಳೆ ದೃಢೀಕರಣ ಪತ್ರ.

ಕೊಳವೆಬಾವಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ನಿರಾಕ್ಷೇಪಣೆ ಪತ್ರ.

100ರೂ. ಸ್ಟಾಂಪ್ ಪೇಪರ್.

ಬ್ಯಾಂಕ್ ಪಾಸ್ ಪುಸ್ತಕ.

ಆಧಾರ್‌ಪ್ರತಿ.

4 ಪಾಸ್‌ಪೋರ್ಟ್ ಭಾವಚಿತ್ರ.

ಪ.ಜಾತಿ/ಪ.ಪಂಗಡ ರೈತರು ಜಾತಿ ಪ್ರಮಾಣ ಪತ್ರ, ಮತ್ತಿತರ ದಾಖಲೆ ಸಲ್ಲಿಸಬೇಕು.

ಇಲ್ಲಿ ನೀಡಿರುವ ದಾಖಲೆಗಳು ಯಾವುದು ಮಿಸ್ ಆಗದಂತೆ ನೀವು ಎಲ್ಲವನ್ನೂ ತೆಗೆದುಕೊಂಡು ಹೋಗಿ ಒಂದು ಅರ್ಜಿ ನಮೂನೆಯನ್ನು ಪಡೆದು ಇಲಾಖೆಯಿಂದ ಅದನ್ನು ಕಂಪ್ಯೂಟರ್ನಲ್ಲಿ ಹಾಕಿಕೊಂಡು ಬಂದು ನಿಮ್ಮ ಅಧಿಕೃತ ವಿತರಕರ ಬಳಿ ನೀಡಬೇಕು ಅದಾದ ನಂತರ ಹಣವನ್ನು ಪಾವತಿ ಮಾಡಿ ನಂತರ ನೀವು ಮಶೀನನ್ನು ಖರೀದಿ ಮಾಡಿ ನಂತರ ಸ್ಕೀಮ್ ಇದ್ದಾಗ ಅವರೇ ಅಪ್ಲೈ ಮಾಡಿಕೊಳ್ಳುತ್ತಾರ.

ಇದನ್ನು ಓದಿ:ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಿಜಿನೆಸ್ ಮಾಡಿಕೊಳ್ಳಲು 50% ಸಬ್ಸಿಡಿಯಲ್ಲಿ ಲೋನ್ ನೀಡಲು ಅರ್ಜಿ ಆಹ್ವಾನ 

https://krushisanta.com/Application-invited-from-womens-to-get-business-loan--from-Karnataka-government-department

ಇದನ್ನು ಓದಿ:ಬೆಳೆ ವಿಮೆ ಬೆಳೆ ಪರಿಹಾರ ಮತ್ತು ಬರಗಾಲ ಪರಿಹಾರ? ಇನ್ನುವರೆಗೆ ಜಮಾ ಆಗದೇ ಇದ್ದಲ್ಲಿ? ನಿಮ್ಮ ಬೆಳೆಗಳು ಮಿಸ್ ಮ್ಯಾಚ್ ಆಗಿದ್ದರೆ ಸರಿಪಡಿಸಲು ತಿದ್ದುಪಡಿಗೆ ಅವಕಾಶ ನೀಡಿದೆ

https://krushisanta.com/Invited-for-crops-survey-edit-details-in-RTC-and-Crop-survey-app

ಇದನ್ನು ಓದಿ:ಮಿನಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಕ್ಟರ್ ಆಧಾರಿತ ನೇಗಿಲು ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ

https://krushisanta.com/Application-invited-for--MB-Plough-and-Mini-Tractors

admin B.Sc(hons) agriculture College of agriculture vijayapura And provide consultant service