ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಉದ್ಯೋಗ ಪ್ರಾರಂಭಿಸಲು 50% ಸಬ್ಸಿಡಿಯಲ್ಲಿ ಲೋನ್

<ಮಹಿಳೆಯರಿಗೆ ಉದ್ಯೋಗ> <ಮಹಿಳೆಯರಿಗೆ ಉದ್ಯೋಗಾವಕಾಶ> <ಮಹಿಳೆಯರಿಗೆ ಉದ್ಯೋಗ ಮಾಡಲು ಅರ್ಜಿ> <ಮಹಿಳೆಯರಿಗೆ ಉದ್ಯೋಗ ಮಾಡಲು ಲೋನ್ ಸೌಲಭ್ಯ>

Aug 24, 2024 - 08:40
 0
ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಉದ್ಯೋಗ ಪ್ರಾರಂಭಿಸಲು 50% ಸಬ್ಸಿಡಿಯಲ್ಲಿ   ಲೋನ್

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಪ್ರಸಕ್ತ ಸಾಲಿಗೆ ಮಹಿಳಾ ಫಲಾನುಭವಿಗಳಿಗೆ ಸ್ವ- ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಸಿ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡಲು ಸಂಸ್ಥೆಯಿಂದ ಪಡೆಯುವ ಸಾಲದ ಘಟಕವೆಚ್ಚಕ್ಕೆ ಶೇ.50 ಅಥವಾ 2 ಲಕ್ಷದವರೆಗೆ ಸಹಾಯಧನ ಒದಗಿಸಲು ಅರ್ಹ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಮುದಾಯದವರಿಂದ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಈಗಾಗಲೇ ನಿಗದಿಂದ ಕುಟುಂಬದ ಸದಸ್ಯರು ಸಾಲ ಸೌಲಭ್ಯ ಪಡೆದಿರಬಾರದು. ಅರ್ಜಿಯನ್ನು ಕೊಟ ಆನ್‌ಲೈನ್ www.kmdconline.karnataka.gov.in ಮೂಲಕ ಆಗಸ್ಟ್ 31 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಮೌಲಾನಾ ಆಜಾದ್ ಭವನ, ಜಿಲ್ಲಾಡಳಿತ ಭವನದ ಆವರಣ, ನವನಗರ, ಬಾಗಲಕೋಟೆ 2,08354-236255 ಇವರನ್ನು ಸಂಪರ್ಕಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ??

ಅಲ್ಪಸಂಖ್ಯಾತ ಸಮುದಾಯದ ಸ್ವ-ಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾಲಂಬಿಯನ್ನಾಗಿ ಮಾಡುವ ಸಲುವಾಗಿ, ರಾಷ್ಟೀಕೃತ/ಶೆಡ್ಯೂಲ್‌ ಬ್ಯಾಂಕ್/RBI ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕವೆಚ್ಚದ ಶೇ.50 ಅಥವಾ ಗರಿಷ್ಠ ರೂ.2.00 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು. ಸಹಾಯಧನವು ಬ್ಯಾಕ್‌ಎಂಡ್‌ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕ ಬ್ಯಾಂಕ್‌ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು.

ಅರ್ಹತೆ?

ಯೋಜನೆಯಡಿ ಸಹಾಯಧನ ಪಡೆಯುವ ಸ್ವಸಹಾಯ ಸಂಘ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಾಗಿರತಕ್ಕದ್ದು

ಮಹಿಳಾ ಸ್ವಸಹಾಯ ಸಂಘದ ಸದಸ್ಯರು ರಾಜ್ಯದ ಖಾಯಂ ನಿವಾಸಿಗಳಾಗಿರತಕ್ಕದ್ದು.

ಮಹಿಳಾ ಸ್ವ-ಸಹಾಯ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20ರೊಳಗಿರಬೇಕು.

ಮಹಿಳಾ ಸ್ವಸಹಾಯ ಸಂಘದಲ್ಲಿ ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶವಿರುತ್ತದೆ.

ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಕುಟುಂಬದ ಆದಾಯ ರೂ.6.00 ಲಕ್ಷ ಮೀರಿರಬಾರದು

ಸ್ವಸಹಾಯ ಸಂಘದ ಸದಸ್ಯರ ವಯಸ್ಸು 18 ರಿಂದ 55 ವರ್ಷಗಳ ಒಳಗಿರತಕ್ಕದ್ದು.

ಸ್ವಸಹಾಯ ಸಂಘವು ಕಡ್ಡಾಯವಾಗಿ ಉಪನೊಂದಾವಣಿ ಅಧಿಕಾರಿಯವರಿಂದ ನೊಂದಣಿಯಾಗಿರತಕ್ಕದ್ದು.

ಸ್ವಸಹಾಯ ಸದಸ್ಯರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಗಳಾಗಿರಬಾರದು.

ಸಂಘದ ಸದಸ್ಯರು ಅಥವಾ ಅವರ ಕುಟುಂಬದ ಸದಸ್ಯರು ಅರಿವು ಮತ್ತು ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ ಹೊರತುಪಡಿಸಿ ಕಳೆದ 5 ವರ್ಷಗಳಲ್ಲಿ ನಿಗಮದಿಂದ ಯಾವುದೇ ಸಾಲ/ಸಹಾಯಧನ ಸೌಲಭ್ಯ ಪಡೆದಿರಬಾರದು.

ಸ್ವಸಹಾಯ ಸಂಘದ ಸದಸ್ಯರು ನಿಗಮದ ಸುಸ್ಥಿದಾರರಾಗಿರಬಾರದು

ಮಹಿಳಾ ಸ್ವಸಹಾಯ ಗುಂಪು ನಿಯಮಿತವಾಗಿ ಸಭೆಗಳನ್ನು ನಡೆಸತಕ್ಕದ್ದು (ಕನಿಷ್ಠ ತಿಂಗಳಿಗೆ ಒಂದು ಸಭೆ).

ಸ್ವಸಹಾಯ ಗುಂಪು ನಿಗದಿತವಾಗಿ ಉಳಿತಾಯ ಮಾಡುವುದು ಮತ್ತು ಸ್ವಸಹಾಯ ಗುಂಪಿನ ಉಳಿತಾಯದ ಮೊತ್ತದಿಂದ ಗುಂಪಿನ ಸದಸ್ಯರಿಗೆ ಅವಶ್ಯಕತೆಗೆ ತಕ್ಕಂತೆ ಆಂತರಿಕ ಸಾಲವನ್ನು ನೀಡುವುದು.

ಆಂತರಿಕ ಸಾಲದ ಮರುಪಾವತಿಗೆ ಒತ್ತುನೀಡಿ ಸಾಲದ ಮರುಪಾವತಿ ಉತ್ತಮವಾಗಿರುವ ಸ್ವಸಹಾಯ ಸಂಘಗಳಿಗೆ ನಿಗಮದಿಂದ ಸಹಾಯಧನ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?

ಸ್ವಸಹಾಯ ಗುಂಪಿನ, ದಾಖಲೆ ಪುಸ್ತಕಗಳನ್ನು ಸಮರ್ಪಕವಾಗಿ ನಿರ್ವಹಿಸುವುದು. ನಿಗಮದ ಸಹಾಯಧನ ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 6 ತಿಂಗಳಾಗಿರಬೇಕು.

ಸ್ವಸಹಾಯ ಸದಸ್ಯರ ಗುಂಪಿನ ಪ್ರತಿ ಸದಸ್ಯರ 2 ಪಾಸ್ ಪೋರ್ಟ್‌ ಅಳತೆಯ ಭಾವ ಚಿತ್ರ.

ಸ್ವಸಹಾಯ ಗುಂಪಿನ ಸದಸ್ಯರ ಅಲ್ಪಸಂಖ್ಯಾತರ ಪ್ರಮಾಣ ಪತ್ರ.

ಸ್ವಸಹಾಯ ಗುಂಪಿನ ಸದಸ್ಯರ ಆದಾಯ ಪ್ರಮಾಣ ಪತ್ರ.

ಪ್ರತಿ ಸದಸ್ಯರ ಆಧಾರ್‌ ಕಾರ್ಡ್‌ ಪ್ರತಿ.

ಸ್ವಸಹಾಯ ಗುಂಪಿನ ಸ್ವಯಂ ಉದ್ಯೋಗ ಚಟುವಟಿಕೆಯ.

ಯೋಜನಾ ವರದಿ.

ಸ್ವಸಹಾಯ ಗುಂಪಿನ ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ.

ಸ್ವಸಹಾಯ ಸಂಘದ ಸದಸ್ಯರ ಗ್ರೋಪ್‌ ಪೋಟೋ.

ಸ್ವಸಹಾಯ ಸಂಘದ ಸಾಮಾನ್ಯ ಸಭೆ ನಡವಳಿಪುಸ್ತಕದ ಪ್ರತಿ.

ಸ್ವಯಂ ಘೋಷಣೆ ಪತ್ರ.

Apply Link - https://kmdconline.karnataka.gov.in/Portal/home

ಇದನ್ನು ಓದಿ:ಕರ್ನಾಟಕದಲ್ಲಿ ಮಳೆ ವರದಿ ಹಾಗೂ ಹವಾಮಾನ ಮುನ್ಸೂಚನೆ?

https://krushisanta.com/Rainfall-and-Climate-suggestion-for-Farmers

ಇದನ್ನು ಓದಿ:ಕೃಷಿ ಇಲಾಖೆಯಿಂದ ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಡೀಸೆಲ್ ಇಂಜಿನ್ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-farm-mechanization-from-department-of-agriculture

ಇದನ್ನು ಓದಿ:ಮಿನಿ ಟ್ರ್ಯಾಕ್ಟರ್ ಮತ್ತು ಟ್ರ್ಯಾಕ್ಟರ್ ಆಧಾರಿತ ನೇಗಿಲು ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ

https://krushisanta.com/Application-invited-for--MB-Plough-and-Mini-Tractors

ಇದನ್ನು ಓದಿ:PM Kisan ಹೊಸ ಅಪ್ಡೇಟ್! ಪ್ರಧಾನಿಯಿಂದ ಹೊಸ ಬದಲಾವಣೆಗೆ ಕರೆ! ಮೊಬೈಲ್ ನಂಬರ್ ಅಪ್ಡೇಟ್ ಮಾಡದೇ ಇದ್ದರೆ? ಹಣ ಬಂದ!

https://krushisanta.com/Mobile-number-update-in-pm-Kisan-is-mandatory-to-get-next-PM-Kisan-installment

admin B.Sc(hons) agriculture College of agriculture vijayapura And provide consultant service