PM Kisan ಮೊಬೈಲ್ ನಂಬರ್ ಅಪ್ಡೇಟ್! ಹೊಸ ಸುದ್ದಿ ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವುದು ಹೇಗೆ ನೋಡಿ?
<ಮೊಬೈಲ್ ನಲ್ಲಿ ಪಿಎಂ ಕಿಸಾನ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ> < ಮೊಬೈಲ್ ನಂಬರ್ ಪಿಎಂ ಕಿಸಾನ್ ನಲ್ಲಿ ಅಪ್ ಡೇಟ್ ಮಾಡುವುದು ಹೇಗೆ>
ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪಿ. ಎಂ. ಕಿಸಾನ್ ಯೋಜನೆಯಲ್ಲಿ ಫಲಾನುಭವಿಗಳ ಅರ್ಜಿಗೆ ಸಂಬಂಧಿಸಿದ ಮಾಹಿತಿಯನ್ನು ಸುಲಭವಾಗಿ ರೈತರಿಗೆ ತಲುಪಿಸಲು ಅನುಕೂಲವಾಗಲು ಇನ್ನು ಮುಂದೆ ಭಾರತ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್ ನಲ್ಲಿ ನೋಂದಣಿಯಾಗುವ ಫಲಾನುಭವಿಗಳಿಗೆ Unique Mobile number ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಪ್ರಸ್ತುತ ಪಿ. ಎಂ. ಕಿಸಾನ್ ದತ್ತಾಂಶದಲ್ಲಿ ಈಗಾಗಲೇ ಹಲವಾರು ಫಲಾನುಭವಿಗಳು ನಕಲಿ ಹಾಗೂ ಅಮಾನ್ಯ Mobile Number ಉಪಯೋಗಿಸಿಕೊಂಡು ನೋಂದಣಿಯಾಗಿರುವುದು ಕಂಡು ಬಂದಿರುತ್ತದೆ.
ಆದ್ದರಿಂದ, ಎರಡಕ್ಕಿಂತ ಹೆಚ್ಚು ಫಲಾನುಭವಿಗಳು ಒಂದೇ ಮಾನ್ಯ Mobile Number ಉಪಯೋಗಿಸಿಕೊಂಡು ಅಥವಾ ಅಮಾನ್ಯ Mobile Number ಉಪಯೋಗಿಸಿಕೊಂಡು ಯೋಜನೆಯಡಿ ನೋಂದಣಿಯಾಗಿದ್ದಲ್ಲಿ, ಅಂತಹ ಫಲಾನುಭವಿಗಳಿಗೆ ಮುಂದಿನ ಕಂತುಗಳ ಆರ್ಥಿಕ ನೆರವು ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ. ರಾಜ್ಯದ ಒಟ್ಟು 30154 ಫಲಾನುಭವಿಗಳ ಪಟ್ಟಿಯನ್ನು ನೀಡಿ, ದಿನಾಂಕ: 31.08.2024 ರೊಳಗೆ ತಿದ್ದುಪಡಿಮಾಡಲು ತಿಳಿಸಿರುತ್ತಾರೆ (2)-1).
ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳ Mobile Number ಅನ್ನು ತಿದ್ದುಪಡಿಮಾಡಲು ಈಗಾಗಲೇ ಭಾತರ ಸರ್ಕಾರದ ಪಿ.ಎಂ. ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ Update Mobile Number" (https://pmkisan.gov.in/MobileUpdation_Pub.aspx) 2 ಆಯ್ಕೆಯನ್ನು ನೀಡಲಾಗಿದ್ದು, ಸದರಿ ಫಲಾನುಭವಿಗಳ ಮಾಹಿತಿಯನ್ನು ದಿನಾಂಕ: 31.08.2024 ರೊಳಗೆ ತಿದ್ದುಪಡಿಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ನಿರ್ದೇಶಿಸಿದೆ.
ಏನಿದು ಈಗಾಗಲೇ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಿ ಮತ್ತು ಮೊಬೈಲ್ ನಂಬರ್ ಲಿಂಕ್ ಮಾಡೋದು ಸಹ ಕಡ್ಡಾಯವೇ?
ಹೌದು ಗ್ರಾಹಕರೇ, ಇದೀಗ ಬಂದಿರುವ ಹೊಸದಾದ ಸುದ್ದಿ ಏನೆಂದರೆ, ಪ್ರತಿಯೊಬ್ಬರೂ ನಿಮ್ಮ ಪಿಎಂ ಕಿಸಾನ್ ಖಾತೆಗೆ ನಿಮ್ಮ ಮೊಬೈಲ್ ನಂಬರನ್ನು ಅಪ್ಡೆಟ್ ಮಾಡಬೇಕು ಅಥವಾ ಲಿಂಕ್ ಮಾಡಬೇಕು ಇದನ್ನು ಆನ್ಲೈನ್ ನಲ್ಲಿ ಮಾಡಲು ಅವಕಾಶವನ್ನು ಮಾಡಿಕೊಟ್ಟಿದೆ ಮತ್ತು ಯಾರ ಹೆಸರಿನಲ್ಲಿ ಅಂದರೆ ಯಾರು ಎರಡು ಪಿಎಂ ಕಿಸಾನ್ ಖಾತೆಗಳಿಗೆ ಒಂದೇ ನಂಬರ್ ಲಿಂಕ್ ಆಗಿರುತ್ತದೆಯೋ ಅಂತಹವರಿಗೆ ಕೆಲವೊಂದು ನಾವು ಕಳಿಸುವ ಮಾಹಿತಿ ತಪ್ಪಾಗಿ ಹೋಗಬಹುದು ಅಥವಾ ಹೋಗದೆ ಇರಬಹುದು ಅದಕ್ಕಾಗಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ಒಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ಆಧಾರ್ ಸಂಖ್ಯೆ ಅಥವಾ ನಿಮ್ಮ ರಿಜಿಸ್ಟ್ರೇಷನ್ ಸಂಕೇ ಸಹಾಯದಿಂದ ನೀವು ನಿಮ್ಮ ಮೊಬೈಲ್ ನಂಬರ್ ಅಪ್ಡೇಟ್ ಮಾಡಬಹುದು.
https://pmkisan.gov.in/MobileUpdation_Pub.aspx
ಹಂತ 2: ನಿಮ್ಮ ಆಧಾರ್ ಸಂಖ್ಯೆಯನ್ನು ಸರಿಯಾಗಿ ಹಾಕಿ ನಂತರ ಮುಂದೆ ಒಂದು ಕ್ಯಾಪ್ಚರ್ ಕೋಡ್ ನೀಡಿರುತ್ತದೆ ಅದನ್ನು ಸರಿಯಾಗಿ ತುಂಬಿ ನಂತರ ಸರ್ಚ್ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ.
ಹಂತ 3: ನಿಮ್ಮ ಮೊಬೈಲ್ ನಂಬರ್ ಹಾಕಬೇಕು ನಂತರ ಒಟಿಪಿ ಪಡೆಯಬೇಕು ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು ಓಟಿಪಿ ಬರುತ್ತದೆ. ನಂತರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿ ಬಂದ ನಂತರ ನೀವು ಅದನ್ನು ಅಲ್ಲಿ ಸರಿಯಾಗಿ ನಂಬುಡಿಸಿ ಅದನ್ನು ವೇರಿಫೈ ಮಾಡಬೇಕು.
ಇಷ್ಟು ಮಾಡಿದರೆ ಸಾಕು ನಿಮ್ಮ ಪಿಎಂ ಕಿಸಾನ್ ಹೊಸದಾಗಿ ತೋರಿಸುತ್ತಿರುವ ಮೊಬೈಲ್ ಸಂಖ್ಯೆ ಅಪ್ಡೇಟ್ ಆಗುತ್ತದೆ ಮತ್ತು ನೀವು ನಿಮ್ಮ ಸ್ಟೇಟಸ್ಅನ್ನು ಯಾವಾಗಲೂ ಕೂಡ ವೀಕ್ಷಣೆ ಮಾಡಬಹುದು.
ಇದನ್ನು ಓದಿ:ಕರ್ನಾಟಕದಲ್ಲಿ ಮಳೆ ವರದಿ ಹಾಗೂ ಹವಾಮಾನ ಮುನ್ಸೂಚನೆ?
https://krushisanta.com/Rainfall-and-Climate-suggestion-for-Farmers
ಇದನ್ನು ಓದಿ:ಕೃಷಿ ಇಲಾಖೆಯಿಂದ ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಡೀಸೆಲ್ ಇಂಜಿನ್ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-farm-mechanization-from-department-of-agriculture
ಇದನ್ನು ಓದಿ:ರೇಷನ್ ತೆಗೆದುಕೊಳ್ಳುವ ವೇಳೆ ನಿಮ್ಮ ಬೆರಳು ತೆಗೆದುಕೊಳ್ಳುತ್ತಿಲ್ಲವೇ ಇದರಿಂದ ನಿಮಗೆ ರೇಷನ್ ತರಲು ಕಷ್ಟವಾಗುತ್ತಿದೆಯೇ??
https://krushisanta.com/Ekyc-is-mandatory-For-food-civil-supplies-and-consumer-affairs
ಇದನ್ನು ಓದಿ:ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುವ ಮಹಿಳೆಯರ ಪಟ್ಟಿ ಬಿಡುಗಡೆ
https://krushisanta.com/August-month-gruhalakshmi-eligible-list-Gram-Panchayat
ಇದನ್ನು ಓದಿ:ರೈತರಿಗೆ ತೋಟಗಾರಿಕೆ ವಾಣಿಜ್ಯ ತರಬೇತಿ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-commercial-Horticulture-training