ಕೃಷಿ ಇಲಾಖೆಯಿಂದ ವಿವಿಧ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ!

ಮೇವು ಕತ್ತರಿಸುವ ಯಂತ್ರ ಡೀಸೆಲ್ ಇಂಜಿನ್ ಮೇವು ಕತ್ತರಿಸುವ ಯಂತ್ರಕ್ಕೆ ಸಬ್ಸಿಡಿ ಮೇವು ಕತ್ತರಿಸುವ ಯಂತ್ರ <ಸಬ್ಸಿಡಿಯಲ್ಲಿ ಎಂತೋಪಕರಣಗಳು ನೀಡಲು ಅರ್ಜಿ > <ಡೀಸೆಲ್ ಇಂಜಿನ್ > <ಡೀಸೆಲ್ ಇಂಜಿನ್ ಪಡೆದುಕೊಳ್ಳುವುದು ಹೇಗೆ> <ಡೀಸೆಲ್ ಇಂಜಿನ್ ನೀಡಲು ಅರ್ಜಿ>

Aug 22, 2024 - 07:10
 0
ಕೃಷಿ ಇಲಾಖೆಯಿಂದ ವಿವಿಧ  ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ!

ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆಯಡಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಟ್ರ್ಯಾಕ್ಟರ್‌ಚಾಲಿತ ಉಪಕರಣಗಳಾದ ರೋಟಾವೇಟರ್, ಕಲ್ಟಿವೇಟರ್, ಎಂ.ಬಿ.ಪ್ಲೋ, ಬಿತ್ತನೆ ಕೂರಿಗೆ, ಡಕ್‌ಪೂಟ್, ಡಿಸ್ ಹ್ಯಾರೋ ಮತ್ತು ಸ್ವಯಂಚಾಲಿತ ಉಪಕರಣಗಳಾದ ಪವರ್‌ವೀಡ‌ರ್, ಬ್ರೆಶ್‌ಕಟರ್, ಪವರ್‌ಟಿಲ್ಲರ್, ಚಾಫ್ ಕಟರ್, ಡೀಸೆಲ್ ಇಂಜಿನ್ ಇತ್ಯಾದಿ ಉಪಕರಣಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50ರ (ಎಲ್-1 ದರಕ್ಕೆ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90 (ಎಲ್-1 ದರಕ್ಕೆ) ಸಹಾಯಧನದಲ್ಲಿ ಅರ್ಹ ರೈತರಿಗೆ ಸೌಲಭ್ಯ ಒದಗಿಸಲಾಗುವುದು.

ತುಂತುರು ನೀರಾವರಿ ಯೋಜನೆ?

ರೈತ ಬಾಂಧವರು ತಮ್ಮ ಕೊಳವೆ ಬಾವಿಗಳ ಮೂಲಕ ಬೆಳೆಗೆ ತುಂತುರು ನೀರಾವರಿ ನೀಡಲು ಘಟಕಗಳನ್ನು ಎಲ್ಲಾ ವರ್ಗದ ರೈತರಿಗೆ ಶೇ.90 ರ ಸಹಾಯಧನದಲ್ಲಿ ಅರ್ಹ ರೈತರಿಗೆ ನೀಡಲಾಗುವುದು.

ಕೃಷಿ ಭಾಗ್ಯ ಯೋಜನೆ?

ಕೃಷಿಹೊಂಡ ಕಾಮಗಾರಿ ಕೈಗೊಂಡ ಪ್ರತಿ ರೈತರಿಗೆ 1.25 ಲಕ್ಷ ಸಹಾಯಧನ ಗುರಿ ನಿಗದಿಪಡಿಸಲಾಗಿದ್ದು ಅರ್ಹ ರೈತರು ಅರ್ಜಿ ಸಲ್ಲಿಸಲು ಕೋರಿದೆ. ಹಾರ್ವೆಸ್ಟರ್‌ಹಬ್ ಯೋಜನೆಯಡಿ ರೈತರು ತಾವು ಬೆಳೆದಂತ ಬೆಳೆಯನ್ನು ಕಟಾವು ಮಾಡಲು ಕಂಬೈನಡ್ ಹಾರ್ವೆಸ್ಟರ್, ಶುಗರ್‌ಕೇನ್ ಹಾರ್ವೆಸ್ಟರ್ ಇತ್ಯಾದಿ ಕಡ್ಡಾಯ ಮತ್ತು ಐಚ್ಚಿಕ ಯಂತ್ರೋಪಕರಣಗಳ ನೈಜ ಬೆಲೆಯನ್ನು ಆಧರಿಸಿ ಫಲಾನುಭವಿ ವರ್ಗವಾರು/ ಸಂಘ ಸಂಸ್ಥೆಗಳನ್ನು ಒಳಗೊಂಡಂತೆ ನಿಗದಿಗೊಳಿಸಿದ ಗರಿಷ್ಠ ಸಹಾಯಧನ ಮೊತ್ತವನ್ನು ಕ್ರೆಡಿಟ್ ಲಿಂಕ್ಸ್ ಬ್ಯಾಕ್ a ಇಂಡೆಂಟ್ ಸಬ್ಸಿಡಿ ಮುಖಾಂತರ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ದಿ.31-08-2024 ಕೊನೆಯ ದಿನವಾಗಿರುತ್ತದೆ. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಕೃಷಿ ಸಂಸ್ಕರಣೆ ಯೋಜನೆ?

ರೈತರು ತಾವು ಬೆಳೆದ ಬೆಳೆಯನ್ನು ಒಕ್ಕಲು ಮಾಡಲು ತಾಡಪತ್ರೆ, ಹಿಟ್ಟಿನಗಿರಣಿ, ರಾಗಿ ಮಿಶನ್, ಖಾರಕುಟ್ಟುವ ಮಿಶನ್, ರೊಟ್ಟಿ ಮಿಶನ್ ಇನ್ನೂ ಮುಂತಾದ ಉಪಕರಣಗಳನ್ನು ಸಾಮಾನ್ಯ ವರ್ಗದ ರೈತರಿಗೆ ಶೇ.50 ರ (ಎಲ್.-1 ದರಕ್ಕೆ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರ (ಎಲ್ -1 ದರಕ್ಕೆ) ಸಹಾಯಧನದಲ್ಲಿ ಸೌಲಭ್ಯ ಒದಗಿಸಲಾಗುವುದು. ಮೇಲ್ಕಂಡ ಯೋಜನೆಗಳ ಪ್ರಯೋಜನ ಪಡೆಯಲು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಸಹಾಯಕ ಕೃಷಿ ನಿರ್ದೇಶಕಿ ಶಾಂತಮನಿ ಜಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ರೇಷನ್ ತೆಗೆದುಕೊಳ್ಳುವ ವೇಳೆ ನಿಮ್ಮ ಬೆರಳು ತೆಗೆದುಕೊಳ್ಳುತ್ತಿಲ್ಲವೇ ಇದರಿಂದ ನಿಮಗೆ ರೇಷನ್ ತರಲು ಕಷ್ಟವಾಗುತ್ತಿದೆಯೇ??

https://krushisanta.com/Ekyc-is-mandatory-For-food-civil-supplies-and-consumer-affairs

ಇದನ್ನು ಓದಿ:ಅಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗುವ ಮಹಿಳೆಯರ ಪಟ್ಟಿ ಬಿಡುಗಡೆ

https://krushisanta.com/August-month-gruhalakshmi-eligible-list-Gram-Panchayat

ಇದನ್ನು ಓದಿ:ರೈತರಿಗೆ ತೋಟಗಾರಿಕೆ ವಾಣಿಜ್ಯ ತರಬೇತಿ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-commercial-Horticulture-training

ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ

https://krushisanta.com/Get-your-Tractor-in-subsidy-apply-before-last-date

admin B.Sc(hons) agriculture College of agriculture vijayapura And provide consultant service