ಹಳ್ಳಿವಾರು ಬೆಳೆ ಪರಿಹಾರ ಜಮಾ ಆಗದವರ! ಪಟ್ಟಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಟ್ಟಿ ಪ್ರಕಟ!

<ಹಳ್ಳಿವರು ಬೆಳೆ ಪರಿಹಾರ> <ಬೆಳೆ ಹಾನಿ ಪರಿಹಾರ> <ಬೆಳೆವಿಮೆ ಪರಿಹಾರ> <ಬೆಳೆ ಪರಿಹಾರ ಸ್ಟೇಟಸ್> <ಬೆಳೆ ಪರಿಹಾರ ಹಣ ಜಮಾ>

Aug 27, 2024 - 06:57
 0
ಹಳ್ಳಿವಾರು  ಬೆಳೆ ಪರಿಹಾರ ಜಮಾ ಆಗದವರ! ಪಟ್ಟಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಪಟ್ಟಿ ಪ್ರಕಟ!

ಆತ್ಮೀಯ ರೈತ ಬಾಂಧವರೇ ಸಾಕಷ್ಟು ಪ್ರದೇಶಗಳಲ್ಲಿ ಬೆಳೆಗಳು ಮಳೆಯಿಂದ ಹಾನಿಯಾಗಿವೆ ಅಂತ ಪ್ರದೇಶಗಳಿಗೆ ಅಥವಾ ಅಂತ ರೈತರಿಗೆ ಈಗ ಪರಿಹಾರ ಹಣ ಶೀಘ್ರದಲ್ಲಿ ಜಮಾ ಆಗುತ್ತದೆ ಮತ್ತು ಪರಿಹಾರ ಹಣ ಜಮಾ ಆಗಬೇಕಾದರೆ ಸರ್ಕಾರದ ಎಲ್ಲ ಕಂಡೀಶನ್ ಗಳಲ್ಲಿ ರೈತರು ಪಾಸ್ ಆಗಬೇಕು ಮತ್ತು ಪಾಸ್ ಆಗಬೇಕಾದರೆ ಮೊದಲಿಗೆ ಬೆಳೆ ಸಮೀಕ್ಷೆ ಸರಿಯಾಗಿರಬೇಕು ಇದಾದ ನಂತರ ಸಮೀಕ್ಷೆ ಮಾಡಿದಂತೆ ಪಾಣಿಪತ್ರದಲ್ಲಿ ದಾಖಲೆಗಳು ಸರಿಯಾಗಿ ಹೊಂದಿರಬೇಕು ಮತ್ತು ನೀವು ಸರಿಯಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಲಿಂಕ್ ಮಾಡಿಸಬೇಕು.

ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರಕಟಿಸಿರುವ ಈ ಲಿಸ್ಟ್ ಏನು?

ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಣೆ ಮಾಡಿರುವ ಈ ಲಿಸ್ಟ್ ನಲ್ಲಿ ಯಾರು ಈ ಎಫ್ ಐಡಿ ಖಾತೆಯನ್ನು ಹೊಂದಿದ್ದಾರೆ ಅವರ ಹೆಸರಿನಲ್ಲಿ ಯಾವುದೇ ರೀತಿಯ ಬ್ಯಾಂಕ್ ಖಾತೆ ಲಿಂಕ್ ಆಗಿರುವುದಿಲ್ಲ ಹೀಗಾಗಿ ತಾತ್ಕಾಲಿಕವಾಗಿ ಇವರಿಗೆ ಬೆಲೆ ಪರಿಹಾರ ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ ಹೀಗಾಗಿ ಬೇಗನೆ ನಿಮ್ಮ ಬ್ಯಾಂಕುಗಳಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಅನ್ನು ನಿಮ್ಮ ಬ್ಯಾಂಕ್ ಶಾಖೆಗೆ ನೀಡಬೇಕು ಅಥವಾ ಇನ್ನೊಂದು ಸುಲಭ ವಿಧಾನದಿಂದ ನೀವು ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯವನ್ನು ಮಾಡುತ್ತಿದ್ದಾರೆ ಹೀಗಾಗಿ ಅವರಿಗೂ ಸಹ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ತೆಗೆದು ಬಂದು ಕೊಟ್ಟರು ಸಹ ನಡೆಯುತ್ತದೆ.

 ಪ್ರತಿಯೊಬ್ಬರೂ ಕೂಡಲೇ ನಾಳೆಯಿಂದ ನೀವು ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಹೋಗಿ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪುಸ್ತಕವನ್ನು ತಪ್ಪದೇ ತೆಗೆದುಕೊಂಡು ಹೋಗಿ ನಿಮಗೆ ಈಗಾಗಲೇ ಯಾವುದೇ ರೀತಿಯ ಬೆಳೆ ಕಂತುಗಳು ಅಥವಾ ಬೆಳೆ ಪರಿಹಾರ ಹಣ ಜಮಾ ಆಗದೇ ಇದ್ದರೂ ಸಹ ನೀವು ಹೋಗಿ ಆಪೇಕ್ಷಣೆ ಕೋರಬಹುದು ಈಗಾಗಲೇ ಅವರು ಗ್ರಾಮ ಪಂಚಾಯಿತಿಗಳಲ್ಲಿ ಲಿಸ್ಟ್ ಅನ್ನು ಪ್ರಕಟಣೆ ಮಾಡಿದ್ದಾರೆ ಮತ್ತು ಈ ಲಿಸ್ಟ್ ಪ್ರಕಟಣೆಯಾಗಿ ಇನ್ನೂ ಬಹಳ ದಿನಗಳು ಕಳೆದು ಹೋಗಿಲ್ಲ ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಂದರೆ ಕಳೆದ ಎರಡು ದಿನಗಳಿಂದ ಕರ್ನಾಟಕದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಈ ಕಾರ್ಯವನ್ನು ವಹಿಸಿದ್ದಾರೆ ಹೀಗಾಗಿ ನೀವು ನಿಮ್ಮ ನಿಮ್ಮ ಊರಿನ ಯಾರೆಲ್ಲರಿಗೂ ಇನ್ನೂ ಪರಿಹಾರ ಹಣ ಬರುವುದು ಬಾಕಿ ಇದೆ ಮತ್ತು ಯಾವುದೋ ತೊಂದರೆಯಿಂದ ಇವರ ಖಾತೆಗೆ ಬ್ಯಾಂಕ್ ಖಾತೆ ಸಂಖ್ಯೆಗೆ ಇವರ ಆಧಾರ್ ಕಾರ್ಡ್ ಲಿಂಕ್ ಆಗಿರುವುದಿಲ್ಲ ಮತ್ತು ಆಧಾರ್ ಸೀಡಿಂಗ್ ತಪ್ಪಾಗಿದೆ ಎಂದು ತೋರಿಸುತ್ತಿವೆ.

 ಈ ಸೌಲಭ್ಯವನ್ನು ನಾವು ಉಚಿತವಾಗಿ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ನಡೆಸಿಕೊಡುತ್ತೇವೆ ಹೀಗಾಗಿ ಪ್ರತಿಯೊಬ್ಬರು ಸಹಕರಿಸಬೇಕು ಮತ್ತು ನಿಮ್ಮ ದಾಖಲೆಗಳನ್ನು ನೀವು ಲಿಸ್ಟ್ ಅನುಸಾರವಾಗಿ ತೆಗೆದುಕೊಂಡು ಬರಬೇಕಾಗಿ ವಿನಂತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಕರ್ನಾಟಕ ಸರಕಾರದವರು ಮಾಡಿದ್ದಾರೆ ಹೀಗಾಗಿ ಪ್ರತಿಯೊಬ್ಬರು ಈ ಕಾರ್ಯವನ್ನು ಬೇಗನೆ 2 ರಿಂದ 3 ದಿನಗಳಲ್ಲಿ ಮುಕ್ತಾಯಗೊಳಿಸಬೇಕು ಹೀಗಾಗಿ ಪ್ರತಿಯೊಬ್ಬರು ಸಹಕರಿಸಬೇಕು ಮತ್ತು ಬೇಗೆನೆ ಲಿಸ್ಟ್ ನೋಡಿ ನಿಮ್ಮ ದಾಖಲೆಗಳು ಪೆಂಡಿಂಗ್ ಇದ್ದರೆ ತಕ್ಷಣವಾಗಿ ತೆಗೆದುಕೊಂಡು ಬನ್ನಿ ಎಂದು ತಿಳಿಸಲಾಗಿದೆ.

ಇದನ್ನು ಓದಿ:ಹೊಸದಾಗಿ ಅಪ್ಡೇಟ್ ಆಗಿರುವ ನಿಮ್ಮ ಜಮೀನಿನ ಆಕಾರಬಂಧ ಸರ್ವೇ ನಂಬರ್ ಹಾಕಿ ಡೌನ್ಲೋಡ್ ಮಾಡಿಕೊಳ್ಳಿ

https://krushisanta.com/How-to-download-land-Akaraband-in-Mobile

ಇದನ್ನು ಓದಿ:ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ಟ್ರೋಲಿ ನೀಡಲು! ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಿರಿ ಮತ್ತು ಹತ್ತು ವರ್ಷಗಳ ವಾರಂಟಿ ನಿಮಗೆ ಯಾವ ರೀತಿ ಬೇಕೋ ಅದೇ ರೀತಿ ಮಾಡಿಸಿ

https://krushisanta.com/Get-tractor-trolley-subsidy-as-per-your-requirement-in-Annigeri-Dharwad-district

ಇದನ್ನು ಓದಿ:ನಿಮ್ಮ ಕೃಷಿ ಪಂಪ್ ಸೆಟ್ ಗಳಿಗೆ ಇನ್ನೂ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ನೀವು ದಂಡ ಕಟ್ಟಬೇಕಾಗುತ್ತದೆ?

https://krushisanta.com/Have-your-bore-well-pump-set-has-linked-with-Aadhar-Card-check-now

ಇದನ್ನು ಓದಿ:ಇಲಾಖೆಯಿಂದ ಬೆಳೆಗಳಿಗೆ ಸಿಂಪರಣೆ ಮಾಡಲು ಪೆಟ್ರೋಲ್ ಪಂಪ್ ಮತ್ತು ಚಾರ್ಜರ್ ಪಂಪ್ ಸಹಾಯಧನದಲ್ಲಿ ನೀಡಲು ಅರ್ಜಿ

https://krushisanta.com/Application-invited-for-sprayer-pumps-both-petrol-and-charger--pumps

admin B.Sc(hons) agriculture College of agriculture vijayapura And provide consultant service