ಈ ರೈತರ ಖಾತೆಗೆ 2ನೇ ಕಂತಿನ ಪರಿಹಾರ ಹಣ ಜಮಾ ಆಗಿಲ್ಲ!
<Parihar> <parihara> <parihara payment status> <parihara payment>
ಆತ್ಮೀಯ ರೈತರೇ ಮೊದಲನೇ ಕಂತು ಹಣ ಜಮಾ ಆಗಿದೆ ಆದರೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ, ಕಾರಣ ಯಾಕೆ ಆಗಿಲ್ಲ ಮತ್ತು ಅದಕ್ಕೆ ನಿಖರವಾಗಿ ಆಗಿದ್ದಾದರೂ ಏನು ಅದನ್ನು ನಾವು ತಿಳಿದುಕೊಳ್ಳಬೇಕು ಮೊದಲಿಗೆ ಜನವರಿ ತಿಂಗಳಲ್ಲಿ ಹಾಕಿರುವ ಹಣ ಜಮಾ ಆಗಿದೆ ಆದರೆ ನಂತರ ಎರಡನೇ ಕಂತಿನ ಹಣ ಪರಿಹಾರ ಹಣ ಯಾರ ಖಾತೆಗೂ ಜಮಾ ಆಗಿಲ್ಲ ಅಂದರೆ ನಾವು ಎಲ್ಲರ ಬಗ್ಗೆ ಮಾತನಾಡುತ್ತಿಲ್ಲ ಕೆಲವೊಂದು ರೈತರಿಗೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ ಇನ್ನು ಕೆಲವರಿಗೆ ಆದರೂ ಕೂಡ ಕಡಿಮೆಯಾಗಿದೆ.
ಇಲ್ಲಿರುವ ರೈತರಿಗೆ ಕೇವಲ ಮೊದಲನೇ ಕಂತು ಜಮಾ ಆಗಿದೆ ಆದರೆ ಎರಡನೇ ಕಂತಿನ ಹಣ ಬಂದೇ ಇಲ್ಲ?
ಹೌದು ರೈತರೇ ನಾವು ಇದನ್ನು ಗಮನಿಸಬೇಕಾಗುತ್ತದೆ ಏಕೆಂದರೆ ರೈತರು ದಿನನಿತ್ಯ ನಮಗೆ ಮೊದಲನೇ ಕಂತಿನ ಹಣ ಬಂದಿದೆ, ಎರಡನೇ ಕಂತಿರ ಹಣ ಬಂದಿಲ್ಲ ಸರ್ ನಾವು ಏನು ಮಾಡಬೇಕು ಯಾರ ಹತ್ತಿರ ಹೋಗಿ ಕೇಳಬೇಕು ಅದರ ಬಗ್ಗೆ ಮಾಹಿತಿ ಕೊಡಿ ಎಂದು ಸಾಕಷ್ಟು ಮೆಸೇಜುಗಳು ಮಾಡುತ್ತಿದ್ದಾರೆ ನಾವು ಕೆಲವೊಂದು ರೈತರ ಸರ್ವೆ ನಂಬರಗಳನ್ನು ಬಳಸಿಕೊಂಡು ಸ್ಟೇಟಸ್ ಅನ್ನು ಚೆಕ್ ಮಾಡಿದಾಗ ಅವರಿಗೆ ನಿಜವಾಗಿಯೂ ಒಂದನೇ ಕಂತಿನ ಮಾತ್ರ ಜಮಾ ಆಗಿದೆ ಆದರೆ ಎರಡನೇ ಕಂತಿನ ಜಮಾನೇ ಆಗಿಲ್ಲ ಅಂದರೆ ನಾವು ಇಲ್ಲಿ ತಿಳಿದುಕೊಳ್ಳಬೇಕಾದದ್ದು ಏನು ಎಂದರೆ, ಮೊದಲನೇ ಕಂತು ಜಮಾ ಆಗಿರುವುದು ಜನವರಿ ತಿಂಗಳಲ್ಲಿ ಹಾಗೂ ಎರಡನೇ ಕಂತು ಜಮಾ ಆಗಿರುವುದು ಮೇ ತಿಂಗಳಲ್ಲಿ ಅಂದರೆ ಸುಮಾರು ನಾಲ್ಕು ತಿಂಗಳ ಆದ ನಂತರ ಎರಡನೇ ಕಂತು ಜಮಾ ಆಗಿದೆ ಈ ನಾಲ್ಕು ತಿಂಗಳ ಅವಧಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮತ್ತೆ ಬಿಟ್ಟು ಹೋಗಿದ್ದರೆ ಖಂಡಿತವಾಗಿಯೂ ಈ ತೊಂದರೆ ಅನುಭವಿಸುತ್ತೀರಿ ಇದಾದ ನಂತರ ಇನ್ನೊಂದು ನಿಮ್ಮ ಎಫ್ ಐ ಡಿ ಆಕ್ಟಿವ್ ಇದ್ದರೆ ಮಾತ್ರ ಹಣ ನೇರವಾಗಿ ಜಮಾ ಆಗುತ್ತದೆ ಇಲ್ಲವಾದರೆ ಆಗುವುದಿಲ್ಲ ಇದಾದ ನಂತರ ಕೆಲವೊಬ್ಬರ ಬ್ಯಾಂಕ್ ಖಾತೆ ಜನವರಿ ತಿಂಗಳ ಮೇ ತಿಂಗಳವರೆಗೆ ಏನಾದರೂ ಕ್ಲೋಸ್ ಆಗಿದ್ದರು ಸಹ ಈ ತೊಂದರೆಯನ್ನು ನೀವು ಅನುಭವಿಸುತ್ತೀರಿ.
ಈ ಸಮಸ್ಯೆಗೆ ಪರಿಹಾರ ಕಂಡಿಕೊಳ್ಳುವುದು ನಿಮ್ಮ ಕೆಲಸವಾಗಬೇಕಾಗುತ್ತದೆ ಅದನ್ನು ಹೇಗೆ ಚೆಕ್ ಮಾಡಿಕೊಳ್ಳಬೇಕು. ಮೊದಲಿಗೆ ಎರಡನೇ ಕಂತಿನ ಹಣ ಪರಿಹಾರ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗಿ ನಿಮ್ಮ ಖಾತೆಗೆ ಹಣ ಬಂದಿರದೆ ಇರಬಹುದು ಅಥವಾ ಎರಡನೇ ಕಂತಿನ ಹಣ ಪರಿಹಾರ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗದೇ ಇರಬಹುದು ಅದನ್ನು ಕೂಡಲೆ ಕೆಳಗಿನ ಲಿಂಕ್ ಬಳಸಿ ಚೆಕ್ ಮಾಡಿಕೊಳ್ಳಿ.
https://parihara.karnataka.gov.in/service92/ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ ನಾವು ಕಳೆದ ಲೇಖನಗಳಲ್ಲಿ ತಿಳಿಸಿದಂತೆ ನೀವು 2023 24 ಮತ್ತು ಋತುಮಾನ ಮುಂಗಾರು ಹಾಗೂ ಬೆಳೆ ವಿಪತ್ತಿನ ವಿಧ ಬರಗಾಲ ಹಾಗೂ ಗೆಟ್ ಡೇಟಾ ಎಂಬ ಬಟ್ಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಇದಾದ ನಂತರ ಕೆಳಗಡೆ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಿ ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಹಾಗೂ ಗ್ರಾಮ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಕೆಳಗಡೆ ಈಗ ಮಾಹಿತಿ ತೋರಿಸುತ್ತದೆ ಅದರಲ್ಲಿ ಒಂದನೇ ಕಂತು ರೂ.2000 ಗಳು ಬಿಟ್ಟು ನಂತರ ಯಾವುದೇ ರೀತಿ ಹಣ ಜಮಾ ಆಗದೇ ಇದ್ದಲ್ಲಿ ನಿಮಗೂ ಕೂಡ ಏನಾರ ತೊಂದರೆ ಆಗಿರಬಹುದು ತೊಂದರೆಯನ್ನು ನಾವು ಮೇಲೆ ನಿಮಗೆ ಏನಾಗಿರಬಹುದು ಎಂದು ಹೇಳಿದ್ದೇವೆ ಆ ತೊಂದರೆಯನ್ನು ಸರಿದು ಪಡಿಸಿಕೊಳ್ಳಲು ಕೂಡಲೇ ಕೆಲಸವನ್ನು ಮುಂದುವರಿಸಿ. ನಿಮ್ಮ ಬ್ಯಾಂಕ್ ಶಾಖೆ ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ತಲಾಟಿಯರನ್ನು ಸಂಪರ್ಕಿಸುವ ಮೂಲಕ ತಕ್ಷಣವೇ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ತುಂಬಾ ಒಳ್ಳೆಯದು.
ಇದನ್ನು ಓದಿ: ಇಂದಿನಿಂದ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ! https://krushisanta.com/Rain-weather-forecast-in-Karnataka
ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ
https://krushisanta.com/Bele-hani-Parihar-raitar-khatege-jama
ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ
https://krushisanta.com/Bele-hani-Parihar-raitar-khatege-jama
ಇದನ್ನು ಓದಿ: ಬಾಕಿ ಇರುವ ಎಲ್ಲ ಪರಿಹಾರ ಹಣ ಜಮಾ! ಒಂದೇ ನಿಮಿಷದಲ್ಲಿ ಚೆಕ್ ಮಾಡಲು ಕೆಳಗಡೆ ಕ್ಲಿಕ್ ಮಾಡಿ
https://krushisanta.com/All-pending-parihara-payment-released
ಇದನ್ನು ಓದಿ: ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇದ್ದೇ ಕೊನೆಯ ದಿನಾಂಕ
https://krushisanta.com/How-to-link-land-RTC-to-Aadhar-Card-immediately-last-date
ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ
https://krushisanta.com/Heavy-rain-alerts-in-Karnataka-today-news