ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕೊನೆ ದಿನ! ಲಿಂಕ್ ಆಗಿದೆ ನಾ ಚೆಕ್ ಮಾಡಿ!

<ಪಹಣಿ ಪತ್ರ> < ಆಧಾರ್ ಕಾರ್ಡ್ ಲಿಂಕ್> < ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್> < ಆನ್ಲೈನ್ ನಲ್ಲಿ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?>

Jun 6, 2024 - 07:16
 0
ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕೊನೆ ದಿನ! ಲಿಂಕ್ ಆಗಿದೆ ನಾ ಚೆಕ್ ಮಾಡಿ!

ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ನಾಳೆ ಕೊನೆಯ ದಿನಾಂಕವಾಗಿದ್ದು , ಜೂನ್ ಆರು ಕರ್ನಾಟಕದ ಅತ್ಯಂತ ಕೊನೆಯ ದಿನಾಂಕವಾಗಿದ್ದು ಇನ್ನೂ ಕೇವಲ ಹಿಂದು ಮತ್ತು ನಾಳೆ ಎರಡೇ ದಿನ ಬಾಕಿ ಉಳಿದಿವೆ ಯಾರೆಲ್ಲ ಪಾಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಿ ಅವರು ಮರೂ ಲಿಂಕ್ ಮಾಡುವುದು ಅವಶ್ಯಕತೆ ಇಲ್ಲ ಹಾಗೂ ಈಗಾಗಲೇ ಲಿಂಕ್ ಮಾಡದೆ ಇದ್ದರೆ ತಕ್ಷಣವಾಗಿ ಲಿಂಕ್ ಮಾಡಿಸಬೇಕು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇದು ಕಡ್ಡಾಯವಾಗಿದೆ.

ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಇದನ್ನು ಆನ್ಲೈನ್ ಮೂಲಕ ಮಾಡಬಹುದಾಗಿತ್ತು ಆದರೆ ಬಹಳಷ್ಟು ಜನರ ಆನ್ಲೈನ್ ಮೂಲಕ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದಾಗಿ ಲಿಂಕ್ ಸರಿಯಾಗಿ ಆಗುತ್ತಿಲ್ಲ ಕೆಲವೊಂದು ಬಾರಿ ಸರ್ವರ್ ಬಿಜಿ ಇರುವುದರಿಂದಾಗಿ ಈಗ ನೀವು ನೇರವಾಗಿ ನಿಮ್ಮ ತಲಾಟಿ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಕಳೆದ ನಾಲ್ಕಾರು ದಿನಗಳಿಂದ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿದ್ದಾರೆ ನೀವು ಕೂಡ ಬೇಗನೆ ಹೋಗಿ ಲಿಂಕ್ ಮಾಡಿಸಿ.

ಪಹಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಬೇಕಾಗುವ ದಾಖಲೆಗಳು ಯಾವುವು?

ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರ ಎರಡು ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ ಇದರ ಜೊತೆಗೆ ಒಂದು ನಿಮ್ಮ ಭಾವಚಿತ್ರದ ಫೋಟೋ ಬೇಕಾಗುತ್ತದೆ. ಎಲ್ಲ ದಾಖಲೆಗಳೊಂದಿಗೆ ಕೂಡಲೇ ನಿಮ್ಮ ತಲಾಟಿಯವರನ್ನು ಸಂಪರ್ಕಿಸಬೇಕು ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅದನ್ನು ಲಿಂಕ್ ಮಾಡುತ್ತಿದ್ದಾರೆ ಇವರಿಗಾದರೂ ನೀವು ಸಂಪರ್ಕಿಸಿ ಕೆಲಸವನ್ನು ಮಾಡಿಕೊಳ್ಳಬೇಕು.

ಆನ್ಲೈನಲ್ಲಿನು ಲಿಂಕ್ ಮಾಡಬಹುದೇ?

https://landrecords.karnataka.gov.in/service4

ಹೌದು ಲಿಂಕ್ ಮಾಡಬಹುದು ಆದರೆ ಇದೀಗ ಕೊನೆಯ ದಿನಾಂಕ ಇರುವುದರಿಂದ ಈ ಸರ್ವರ್ ಬಿಜಿ ಬರುತ್ತಿದೆ ಆದರೆ ಒಂದು ಬಾರಿ ಪ್ರಯತ್ನಿಸಿ. ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಮೊಬೈಲ್ ನಂಬರ್ ಹಾಕಲು ಕೇಳುತ್ತದೆ ಮೊಬೈಲ್ ನಂಬರ್ ಹಾಕಿ ಮೊಬೈಲ್ ನಂಬರ್ ಹಾಕಿದ ನಂತರ ಓಟಿಪಿ ಬರುತ್ತದೆ ನಿಮ್ಮ ಹೆಸರು ಮತ್ತು ಆಧಾರ ಸಂಖ್ಯೆಯನ್ನು ಸರಿಯಾಗಿ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ನಮೂದಿಸಿ ನಂತರ ವೇರಿಫೈ ಬಟನ್ ಮೇಲೆ ಕ್ಲಿಕ್ ಮಾಡಿ ಅದಾದ ನಂತರ ಕೆಳಗಡೆ ಒಂದು ಹಸಿರು ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಿ.

ಕ್ಲಿಕ್ ಮಾಡಿದ ನಂತರ ಆಧಾರ್ ಕಡೆಯಿಂದ ಒಟಿಪಿ ಬರುತ್ತದೆ ಓಟಿಪಿಸಿ ನಂತರ ಸರ್ವೇ ನಂಬರ್ ಆಯ್ಕೆ ಮಾಡಿ ನಿಮ್ಮ ಸರ್ವೇ ನಂಬರ್ ಹಾಕಿ ನಿಮ್ಮ ಭಾವಚಿತ್ರ ಮತ್ತು ಆಧಾರ್ ಕಾರ್ಡನ್ನು ಅಪ್ಲೋಡ್ ಮಾಡಿ. ನಂತರ ನಿಮ್ಮ ಪಹಣಿ ಪತ್ರಿಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲಾಗುತ್ತದೆ.

ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ

https://krushisanta.com/Heavy-rain-alerts-in-Karnataka-today-news

ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದರೆ? ಎಷ್ಟು ಹಣ ಬರುತ್ತದೆ ಚೆಕ್ ಮಾಡಿ

https://krushisanta.com/Crop-insurance-for-KHARIF-season-2024-25-village-wise-list

ಇದನ್ನು ಓದಿ:PM Kisan ಫಲಾನುಭವಿಗಳಿಗೆ 17ನೇ ಕಂತಿನ ಹಣ ಜಮಾ ದಿನಾಂಕ ಫಿಕ್ಸ್

https://krushisanta.com/pm-Kisan-17th-installment-date-is-fixed-That-is-first-or-second-week-of-June

ಇದನ್ನು ಓದಿ:ಪರಿಹಾರ ಚೆಕ್ ಮಾಡಲು ಆರು ವಿಧಾನಗಳಿವೆ, ಯಾವುದಾದರೂ ಒಂದು ವಿಧಾನದ ಬಳಸಿ ಹಣ ಬಂತಾ ಈಗಲೇ ಚೆಕ್ ಮಾಡಿಕೊಳ್ಳಿ https://krushisanta.com/There-is-6-methods-to-check-Parihar-hani-in-Karnataka

admin B.Sc(hons) agriculture College of agriculture vijayapura And provide consultant service