ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ! ನಿಮ್ಮ ಜಮಾ ಹೀಗೆ ಚೆಕ್ ಮಾಡಿ
<gruha lakshmi status> <gruha lakshmi apply online> <gruha lakshmi scheme official website> <gruha lakshmi amount check><gruha lakshmi application>
ಆತ್ಮೀಯ ಗ್ರಾಹಕರ ಕರ್ನಾಟಕದ ಅತ್ಯಂತ ಗೃಹಲಕ್ಷ್ಮಿ ಯೋಜನೆ ಎಲ್ಲರ ಮನವನ್ನು ಗೆದ್ದಿರುವ ಯೋಜನೆಯಾಗಿದೆ ಪ್ರತಿ ತಿಂಗಳು 2000 ತಪ್ಪದೇ ಮಹಿಳೆಯರ ಖಾತೆಗೆ ವರ್ಗಾವಣೆಯಾಗುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ ಆದರೆ ಸತತವಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಯಲ್ಲಿ ಕನಿಷ್ಠ 20,000 ಗಿಂತ ಹೆಚ್ಚು ಹಣ ಜಮಾ ಆಗಿವೆ. ಇದೆಲ್ಲ ಮಹಿಳೆಯರಿಗೆ ಸಂತೋಷ ಕೊಡುವ ಸುದ್ದಿಯಾಗಿದ್ದು ಅದೇ ರೀತಿಯಾಗಿ ಕಳೆದ ತಿಂಗಳ ಅಕ್ಟೋಬರ್ ತಿಂಗಳ ಹಣ ಕೂಡ ನಿನ್ನೆ ಮತ್ತೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ.
ಅಕ್ಟೋಬರ್ ತಿಂಗಳ 2000 ಗಳು ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಅಕ್ಟೋಬರ್ ತಿಂಗಳ ಹಣ ಜಮಾ ಸ್ಟೇಟಸ್ ಅನ್ನು ಚೆಕ್ ಮಾಡುವುದು ತುಂಬಾ ಸುಲಭವಾಗಿದೆ ಏಕೆಂದರೆ ನಮಗೆ ತಿಳಿದ ಹಾಗೆ ನಿನ್ನೆ ಪ್ರತಿ ಒಬ್ಬರಿಗೂ ಕೂಡ ಮೆಸೇಜ್ ಬಂದೇ ಬಂದಿರುತ್ತದೆ. ತಾವೆಲ್ಲರೂ ಅಂದರೆ ತಮ್ಮ ಮನೆಯಲ್ಲಿ ನಿಮ್ಮ ಹೆಂಡತಿಯರಿಗೆ ಅಥವಾ ತಾಯಿಯರಿಗೆ ಅಥವಾ ಅಕ್ಕ-ತಂಗಿಯರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಪ್ರತಿ ತಿಂಗಳು 2000 ಗಳು ಅವರಿಗೆ ಜಮಾ ಆಗುತ್ತವೆ, ಅದೇ ರೀತಿಯಾಗಿ ಅಕ್ಟೋಬರ್ ತಿಂಗಳಿನ ಕಂತು ಕೂಡ ನಿನ್ನೆ ನಮ್ಮ ಖಾತೆಗೆ ಜಮಾ ಆಗಿದೆ.
ನಿಮಗೆ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಸುವ ಮೂಲಕ ತಿಳಿದುಕೊಳ್ಳಬಹುದು ಅಥವಾ ನಿಮ್ಮ ಮೊಬೈಲ್ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ಲಿಂಕ್ ಇದ್ದರೆ ಮೆಸೇಜ್ ಕೂಡ ಬಂದಿರುತ್ತದೆ ಅದನ್ನು ಚೆಕ್ ಮಾಡಿ ಸಹ ನಿಮ್ಮ ಖಾತೆಗೆ ಹಣ ಬಂದಿರುವುದನ್ನ ನೀವು ಖಚಿತಪಡಿಸಿಕೊಳ್ಳಬಹುದು ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ಸಹ ನೀವು ನಿಮ್ಮ ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.
ಆಧಾರ್ ಕಾರ್ಡ್ ಮೂಲಕ ಗೃಹಲಕ್ಷ್ಮಿ ಹಣ ಸ್ಟೇಟಸ್ ಚೆಕ್ ಮಾಡಿ?
ಮೊಟ್ಟಮೊದಲಿಗೆ ನಿಮ್ಮ ಮೊಬೈಲ್ ಅಥವಾ ನಿಮ್ಮ ಡಿಜಿಟಲ್ ಮೊಬೈಲ್ ಇದ್ದರೆ ಅಥವಾ ಸ್ಕ್ರೀನ್ ಟಚ್ ಮೊಬೈಲ್ ಇದ್ದರೆ ತುಂಬಾ ಸುಲಭ ವಿಧಾನದಿಂದ ನೀವು ನಿಮ್ಮ ಗೃಹಲಕ್ಷ್ಮಿಯ ಹಣ ಜಮಾ ಆಗಿರುವುದನ್ನು ತಿಳಿದುಕೊಳ್ಳಬಹುದು ಕರ್ನಾಟಕದ ಅಧಿಕೃತ ಡಿಬೀಟಿ ಅಪ್ಲಿಕೇಶನ್ ಮೂಲಕ ಯಾವುದೇ ರೀತಿ ಸರ್ಕಾರದಿಂದ ನೇರನಗದು ವರ್ಗಾವಣೆಯನ್ನು ಚೆಕ್ ಮಾಡಿಕೊಳ್ಳಬಹುದು ಮೊಟ್ಟಮೊದಲಿಗೆ ನೀವು ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಲ್ಲಿ ಹೋಗಿ ಅಲ್ಲಿ ಡಿ ಬಿ ಟಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ಇನ್ಸ್ಟಾಲ್ ಮಾಡಿಕೊಂಡ ನಂತರ ಮುಂದೆ ಸೈನ್ ಅಪ್ ಆಗಿ.
ಸೈನ್ ಅಪ್ ಆಗಲು ನಿಮ್ಮ ಆಧಾರ್ ಸಂಖ್ಯೆ ಕೇಳುತ್ತದೆ ಆಧಾರ್ ಸಂಖ್ಯೆ ಕಡೆಯಿಂದ ಓಟಿಪಿ ಬರುತ್ತದೆ ಒಟಿಪಿಯನ್ನು ನಮೂದಿಸಿ ಹಾಗೂ ಒಂದು ಸುಲಭ ನಾಲ್ಕು ಅಂಕಿಯ ಪಿನ್ ಸೆಟ್ ಮಾಡಲು ಕೇಳುತ್ತದೆ ಅದನ್ನು ಸಹ ಸೆಟ್ ಮಾಡಿ ನಂತರ ನೀವು ಅದೇ ನಾಲ್ಕು ಅಂಕೆ ಪಿನ್ನಿನ ಸಹಾಯದಿಂದ ಪ್ರತಿ ಬಾರಿ ನಿಮ್ಮ ಅಕೌಂಟ್ ಅನ್ನು ಲಾಗಿನ್ ಮಾಡಲು ಬಳಕೆ ಮಾಡಬಹುದು ಇದರಲ್ಲಿ ನೀವು ನಿಮ್ಮ ಆಧಾರ್ ಸೀಡಿಂಗ್ ಆಗಿರುವ ಬ್ಯಾಂಕ್ ಯಾವುದು ಎಂದು ತಿಳಿದುಕೊಳ್ಳಬಹುದು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದಾಗ ಇತ್ತೀಚಿನದಲ್ಲಿ ಸರ್ಕಾರದಿಂದ ನೇರ ನಗದು ವರ್ಗಾವಣೆ ಯಾವುದು ಆಗಿದೆ ಅಂದರೆ ಗೃಹಲಕ್ಷ್ಮಿ ಹಣ ಜಮಾ ಆಗಿರುವ ಸ್ಟೇಟಸ್ ಕಾಣಿಸುತ್ತದೆ.
ಈ ರೀತಿಯಾಗಿ ಸುಮಾರು ಎರಡರಿಂದ ಮೂರು ವಿಧಾನಗಳಿಂದ ನಿಮಗೆ ಜಮಾ ಆಗಿರುವ ಹಣವನ್ನು ಸುಲಭ ವಿಧಾನದಿಂದ ಸ್ಟೇಟಸ್ ಮೂಲಕ ತಿಳಿದುಕೊಳ್ಳಬಹುದು ಇಲ್ಲಿಯವರೆಗೆ ನಿಮಗೆ ಎಷ್ಟು ಗೃಹಲಕ್ಷ್ಮಿ ಕಂತುಗಳು ಜಮಾ ಆಗಿವೆ ಅವುಗಳನ್ನ ವಾಟ್ಸಪ್ ಮೂಲಕ ತಿಳಿಸಬಹುದು. ಹಣ ಬರೋದೇ ನಿಂತಿದ್ದರೆ ತಕ್ಷಣವಾಗಿ ನಿಮ್ಮ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಮತ್ತು ಒಂದು ಬಾರಿ ಬ್ಯಾಂಕಿಗೂ ಸಹ ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆ ನಿಮ್ಮ ಆಧಾರ್ ಕಾರ್ಡ್ ಗೆ ಸರಿಯಾಗಿ ಲಿಂಕ್ ಆಗಿದೆ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
ಇದನ್ನು ಓದಿ:ಭಾಗ್ಯಲಕ್ಷ್ಮಿ ಬಾಂಡ್ ಹಣ ಸ್ಟೇಟಸ್? ನೀವು ಹಣ ಕಟ್ಟಿದ್ದೀರಾ? ಹಾಗಿದ್ದರೆ ಚೆಕ್ ಮಾಡಿ
https://krushisanta.com/Bhagyalaxmi-bond-status-Karnataka
ಇದನ್ನು ಓದಿ:ರಾಜ್ಯದಲ್ಲಿ ವಖ್ಫ್ ಆಸ್ತಿ ಪಟ್ಟಿ ಬಿಡುಗಡೆ! ಪಹಣಿ ಸಂಖ್ಯೆ ಹಾಕಿ ಚೆಕ್ ಮಾಡಿ
https://krushisanta.com/Waqf-property-in-Karnataka