ಈ ರೈತರ ಖಾತೆಗೆ ಮಧ್ಯಂತರ ಬೆಳೆವಿಮೆ ಜಮಾ ಆಗಿಲ್ಲ! ಏನು ತಪ್ಪಾಗಿದೆ? ಚೆಕ್ ಮಾಡಿ
<Crop Insurance > <Crop Insurance news> <crop insurance status>
ಬರದಿಂದಾದ ನಷ್ಟಕ್ಕೆ ನಾಲ್ಕು ತಿಂಗಳ ಬಳಿಕ ಪರಿಹಾರ ಪಡೆಯಲು ಮುಂದಾಗಿದ್ದ 8 ಲಕ್ಷ ರೈತರಿಗೆ ಆಘಾತ ಎದುರಾಗಿದೆ. ಫೂಟ್ಸ್ ಐಡಿ, ಆಸ್ತಿ ಹಕ್ಕಿನ ತಾಂತ್ರಿಕ ಸಮಸ್ಯೆ ಪರಿಹಾರ ವಿತರಣೆಗೆ ತೊಡಕಾಗಿ ಪರಿಣಮಿಸಿದೆ. ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫೂಟ್ಸ್) ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಲಕ್ಷಾಂತರ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಆಸ್ತಿ ದಾಖಲೆ ಸಮಸ್ಯೆ: ಮಳೆ ಕೊರತೆ, ತೀವ್ರ ಬರದಿಂದಾಗಿ ರೈತರು ಮಧ್ಯಂತರ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೀಗ ಕೆಲ ಕಾನೂನು ತೊಡಕು, ಕೃಷಿ ಭೂಮಿ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆಯಾಗಿರುವುದು, ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡಿರುವುದು, ಅಸ್ತಿ ದಾಖಲೆ ಸಮಸ್ಯೆಯಿಂದ ಯಾರಿಗೆ ಪರಿಹಾರ ವಿತರಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ. ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಎಂದೋ ಮೃತರಾಗಿದ್ದಾರೆ. ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯೂ ಆಗಿಲ್ಲ.
ಮಾಹಿತಿ ಸಂಗ್ರಹ ನಿರ್ಲಕ್ಷ್ಯ ಫೂಟ್ಸ್ ಡೇಟಾಬೇಸ್‌ನಲ್ಲಿ 8 ಲಕ್ಷ ರೈತರ ಮಾಹಿತಿಯೇ ಇಲ್ಲ. ಬಿಟ್ಟುಹೋಗಿರುವ ಅರ್ಹ ರೈತರ ಮಾಹಿತಿ ಮತ್ತೆ ದಾಖಲಿಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂಬುದು ರೈತರ ಆರೋಪ.
ಮುಂದಿನವಾರ ನೆರವು ನಿರೀಕ್ಷೆ
ಈಗಾಗಲೇ ರಾಜ್ಯ ಸರ್ಕಾರ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಬರದಿಂದಾಗಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಅಲ್ಲದೆ, 48.19 ಲಕ್ಷ ಹೆಕ್ಟೇರ್‌ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 18,177.44 ಕೋಟಿ ರೂ. ಪರಿಹಾರ ನೀಡುವಂತೆ 2023 ಸೆಪ್ಟೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ. ಬಳಿಕ 2023 ಅಕ್ಟೋಬರ್‌ನಲ್ಲಿ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ, ವರದಿಯನ್ನೂ ಸಲ್ಲಿಸಿದೆ. ಕೇಂದ್ರ ಸರ್ಕಾರದ ಪರಿಹಾರ ಮುಂದಿನ ವಾರ ಬಿಡುಗಡೆಗೊಳ್ಳುವ ನಿರೀಕ್ಷೆ ಇದ್ದು, ಮಧ್ಯಂತರವಾಗಿ ರಾಜ್ಯ ಸರ್ಕಾರ 34 ಲಕ್ಷ ರೈತರಿಗೆ ಮೊದಲ ಕಂತಿನಲ್ಲಿ ತಲಾ 2,000 ರೂ. ನೀಡುತ್ತಿದೆ. ಆದರೆ, ದಾಖಲೆಗಳ ಸಮಸ್ಯೆ, ಪೂಟ್ಸ್ ಐಡಿ ಕಗ್ಗಂಟು ಫಲಾನುಭವಿಗಳಿಗೆ ತೊಡಕಾಗಿದೆ.
ಸಮಸ್ಯೆಗೆ ಏನು ಕಾರಣ?
ಸಾವಿರಾರು ರೈತ ಕುಟುಂಬದಲ್ಲಿ ಕದನಪೂರ್ವಜರ ಹೆಸರಲ್ಲೇ ಆಸ್ತಿ ಉಳಿದಿದೆ ಆಸ್ತಿ ಹಕ್ಕುದಾರರಿಗಷ್ಟೇ ಪರಿಹಾರ ನೀಡಿಕೆ ಆಸ್ತಿ ಹಂಚಿಕೆಗಾಗಿ ಕುಟುಂಬದಲ್ಲಿ ಗಲಾಟೆ ಹೀಗಾಗಿ ಹಲವರು ಫೂಟ್ಸ್ ಐಡಿ ಮಾಡಿಲ್ಲ ಪ್ರತಿ ಗ್ರಾಪಂನಲ್ಲಿ ಇಂತಹ ಕನಿಷ್ಠ 30 ಕೇಸ್ ಇವೆ ಒಬ್ಬರೇ ಹಕ್ಕುದಾರರಿರುವೆಡೆ ಸಮಸ್ಯೆ ಇಲ್ಲ ಇಬ್ಬರಿಗಿಂತ ಹೆಚ್ಚು ಹಕ್ಕುದಾರರಿದ್ದರೆ ಸಮಸ್ಯೆ ಯಾರಿಗೆ ಪರಿಹಾರ ಕೊಡಬೇಕೆಂಬ ಗೊಂದಲ.
ರೈತರಿಗೆ ಮಧ್ಯಂತರ ಬರ ಪರಿಹಾರವಾಗಿ ತಲಾ 2 ಸಾವಿರ ರೂ.ನಂತೆ ಜಿಲ್ಲೆಯ 3.75 ಲಕ್ಷ ರೈತರಿಗೆ 69.21 ಕೋಟಿ ರೂ. ಪರಿಹಾರ ನೀಡಲಾಗಿದೆ. ವಾರಸಾ, ದಾಖಲೆ ಇತರ ಸಮಸ್ಯೆ ಕಾಡುತ್ತಿದೆ. ಇದನ್ನು ಪರಿಹರಿಸುವಂತೆ ಕೃಷಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ಒಂದೇ ವಾರದಲ್ಲಿ ಉಳಿದ ಪರಿಹಾರ ಜಮಾ! ಈ ರೈತರಿಗೆ ಮಾತ್ರ ದೊರೆಯಲಿದೆ ಉಳಿದ ಬರಗಾಲ ಪರಿಹಾರ ಪೇಮೆಂಟ್
https://krushisanta.com/Baragala-Parihar-payment
ಇದನ್ನು ಓದಿ:ಐದೇ ನಿಮಿಷದಲ್ಲಿ ಬೇಸಿಗೆ ಬೆಳೆ ಸರ್ವೆ ಮಾಡುವುದು ಹೇಗೆ? ಬೆಳೆ ಪರಿಹಾರ ಪಡೆಯಬೇಕಾದರೆ ಕಂಪಲ್ಸರಿ ಆಗಿ ಮಾಡಲೇಬೇಕು.
https://krushisanta.com/How-to-do-summer-crop-survey-using-Summer-crop-survey-2023-24-Mobile-App