11 ನೇ ಕಂತು ಮಹಿಳೆಯರ ಖಾತೆಗೆ ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡಿ!

<Gruhalakhmi> <Gruhalakhmi Jama status> <Gruhalakhmi amount> <Gruhalakhmi 11 istallament>

Jun 22, 2024 - 07:16
 0
11 ನೇ ಕಂತು ಮಹಿಳೆಯರ ಖಾತೆಗೆ ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡಿ!

ಆತ್ಮೀಯ ಗ್ರಾಹಕರೇ ಅಂದರೆ ಮಹಿಳೆಯರೇ ನಿಮ್ಮ ಖಾತೆಗೆ ಗೃಹಲಕ್ಷ್ಮಿ 11ನೇ ಕ್ರಾಂತಿನ ಹಣಜನ ಆಗಿದೆ ಅದನ್ನು ಅಧಿಕೃತವಾಗಿ ಸರ್ಕಾರವು ಪತ್ರಿಕೆಯಲ್ಲಿ ಪ್ರಕಟ ಮಾಡಿದೆ ನಿಮ್ಮ ಜಮಾ ಸ್ಟೇಟಸ್ ಅನ್ನು ಕೆಳಗಡೆ ನೀಡುವ ವಿಧಾನವನ್ನು ಬಳಸಿಕೊಂಡು ಮೊಬೈಲ್ ನಲ್ಲಿ ಏನು ಚೆಕ್ ಮಾಡಿಕೊಳ್ಳಬಹುದು ಆಗಿದೆ. ಕಳೆದ ಎಲೆಕ್ಷನ್ ಆದ ನಂತರ ಗ್ರಹಲಕ್ಷ್ಮಿ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿರಲಿಲ್ಲ ಅದಕ್ಕಾಗಿ ಜನರಲ್ಲಿ ಮತ್ತೆ ನಮ್ಮ ರಾಜ್ಯ ಸರ್ಕಾರವು ನೀಡುವ ಗ್ಯಾರಂಟಿಗಳನ್ನು ಬಂದು ಮಾಡುತ್ತದೆ ಎಂದು ತಿಳಿದುಕೊಂಡಿದ್ದರು.

ಆದರೆ ಇದೀಗ ಮತ್ತೆ ಹನ್ನೊಂದನೇ ಕಂತಿನ ಹಣ ಜಮಾ ಆಗಿರುವುದು ಎಮ್ಮೆಲ್ಲೆರಿಗೂ ಸಂತಸದ ಸುದ್ದಿಯಾಗಿದೆ ಹೀಗಾಗಿ ಹಣ ಜಮಾ ಆಗಿರುವುದನ್ನು ಕೂಡಲೇ ನಿಮ್ಮ ಬ್ಯಾಂಕಿಗೆ ಹೋಗಿ ಹಣವನ್ನು ಬಿಡಿಸಿಕೊಂಡು ನಿಮ್ಮ ನಿಮ್ಮ ಕೆಲಸ ಕಾರ್ಯಗಳಿಗೆ ಅವುಗಳನ್ನು ಬಳಸಬಹುದು ನಿಮಗೂ ಈಗಾಗಲೇ ಗೊತ್ತಿರುವ ಹಾಗೆ ಗೃಹಲಕ್ಷ್ಮಿ ಹಣ ಎರಡು ಸಾವಿರ ರೂಪಾಯಿಗಳು ತಿಂಗಳಿಗೆ ಜಮಾ ಆಗುತ್ತದೆ ಮತ್ತು ಮಹಿಳೆಯರಿಗೆ ಇದೊಂದು ಒಳ್ಳೆಯ ಹಣದ ಸೊರ್ಸ್ ಆಗಿದೆ.

ಎಷ್ಟೋ ಜನ ಮಹಿಳೆಯರು ತಮಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಈಗಾಗಲೇ ಹತ್ತು ಕಂತುಗಳೆಂದರೆ ಸುಮಾರು 20 ಸಾವಿರಕ್ಕೂ ಹೆಚ್ಚು ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ ನಾವು ಇದರಲ್ಲಿ ಪಕ್ಷವನ್ನು ಎತ್ತಿ ಮಾತನಾಡುತ್ತಿಲ್ಲ ಒರಟಾಗಿ ಅವರಿಗೆ ಉಪಯೋಗವಾಗುತ್ತಿದೆ. ಹೀಗಾಗಿ ಈ ಯೋಜನೆ ಹಣ ಬರುವುದು ಮತ್ತು ಬರದೇ ಇರುವುದು ನಾವು ನಿಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

 ಆನ್ಲೈನ್ ನಲ್ಲಿ ಹಣ ಜಮಾ ಸ್ಟೇಟಸ್ ಚೆಕ್ ಮಾಡಿ?

ಹಣ ಜಮಾ ಸ್ಟೇಟಸ್ ಅನ್ನು ಎರಡು ವಿಧಾನಗಳಿಂದ ನೋಡಬಹುದು ಒಂದನೇ ವಿಧಾನದಿಂದ ನೀವು ಬ್ಯಾಂಕಿನ ಹತ್ತಿರ ಇದ್ದರೆ ಬ್ಯಾಂಕಿಗೆ ಹೋಗಿ ನಿಮ್ಮ ಪಾಸ್ ಪುಸ್ತಕವನ್ನು ಎಂಟ್ರಿ ಮಾಡುವ ಮೂಲಕ ಅಥವಾ ಬ್ಯಾಂಕಿನ ಅಧಿಕಾರಿಗಳಿಗೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ಕೊಟ್ಟು ನಮ್ಮ ಇತ್ತೀಚಿನ ಖಾತೆಗೆ ಹಣ ಎಷ್ಟು ಜಮಾ ಆಗಿದೆ ಅದನ್ನು ಮಾಹಿತಿ ಕೇಳಿ ತಿಳಿದುಕೊಳ್ಳಬಹುದು ಇನ್ನೊಂದು ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚು ಜನರು ಉಪಯೋಗಿಸುವ ಕರ್ನಾಟಕ ಡಿ ಬಿ ಟಿ ಮೊಬೈಲ್ ಅಪ್ಲಿಕೇಶನ್ ಇದರಲ್ಲಿಯೂ ಸಹ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಕೆಳಗಡೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ಅಥವಾ ಈಗಾಗಲೇ ನಿಮ್ಮ ಮೊಬೈಲ್ ನಲ್ಲಿ ಇದು ಇನ್ಸ್ಟಾಲ್ ಆಗಿರಬಹುದು ಅದಕ್ಕಾಗಿ ಮೊದಲಿಗೆ ನೀವು ಸೈನ್ ಅಪ್ ಆಗಬೇಕು ಸೈನ್ ಅಪ್ ಆಗಬೇಕಾದರೆ ಮೊದಲಿಗೆ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹಾಕಬೇಕು ಆಧಾರ್ ಕಾರ್ಡ್ ನಂಬರ್ ಹಾಕಿದಾಗ ಓ ಟಿ ಪಿ ಬರುತ್ತದೆ ಓಟಿಪಿ ಅನ್ನು ನಮೂದಿಸಿ ನೀವು ಸೈನ್ ಅಪ್ ಆಗಬೇಕು.

https://play.google.com/store/apps/details?id=com.dbtkarnataka

ಹಂತ 2: ಈಗ ನೀವು ನಾಲ್ಕು ಸಂಖ್ಯೆಯನ್ನು ಗುಪ್ತ ಸಂಖ್ಯೆಯನ್ನಾಗಿ ಇಡಬೇಕಾಗುತ್ತದೆ ಪ್ರತಿಬಾರಿ ಲಾಗಿನ್ ಆಗಬೇಕಾದರೆ ನೀವು ನಿಮ್ಮ ಆಧಾರ್ ಸಂಖ್ಯೆ ಹಾಕುವುದು ಅವಶ್ಯಕತೆ ಇಲ್ಲ ಕೇವಲ ನಾಲ್ಕು ನಿಮ್ಮ ಗುಪ್ತ ಸಂಖ್ಯೆಯನ್ನು ಎಂಟರ್ ಮಾಡುವ ಮೂಲಕ ಲಾಗಿನ್ ಆಗಬಹುದು ಇದಾದ ನಂತರ ಕೂಡಲೇ ನೀವು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿ ನಿಮಗೆ ಹಲವಾರು ರೀತಿ ಆಯ್ಕೆಗಳು ಕಾಣಬಹುದು ಅದರಲ್ಲಿ ಗೃಹಲಕ್ಷ್ಮಿಯೂ ಕೂಡ ಒಂದು ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ಖಾತೆಗೆ ರೂ. 2000 ಗಳು ಜಮಾ ಆಗಿರುವುದು ಖಚಿತಪಡಿಸಿಕೊಳ್ಳಿ.

ಇದನ್ನು ಓದಿ:ಕೇವಲ 5% ಬಡ್ಡಿ ಯಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನ

https://krushisanta.com/Application-invited-for-2-lakh-loan-at-5-percent-interest-rate-605

ಇದನ್ನು ಓದಿ:ಮತ್ತೆ ನಿನ್ನೆ ಬಹಳಷ್ಟು ಜನರಿಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ! ನಿನ್ನೆ ಬಂದ ಹಣದ ಸ್ಟೇಟಸ್ ಚೆಕ್ ಮಾಡಿ

https://krushisanta.com/PM-kisan-credited-to-Farmers

ಇದನ್ನು ಓದಿ:ನಾಳೆಯಿಂದ ಮತ್ತೆ ಮಳೆ ಶುರು! ಆರಿದ್ರಾ ಮಳೆ ಅಬ್ಬರ! ರೆಡ್ ಅಲರ್ಟ್ ನೀಡಿದ ಹವಾಮಾನ ಇಲಾಖೆ

https://krushisanta.com/Rainfall-report-from-IMD-Bengaluru

admin B.Sc(hons) agriculture College of agriculture vijayapura And provide consultant service