8556 ಲಕ್ಷ ರೂಪಾಯಿಗಳು ಬೆಳೆವಿಮೆ ಬಿಡುಗಡೆ! ನಿಮಗೂ ಬಂತಾ ಚೆಕ್ ಮಾಡಿ ನೋಡಿ
<ಬೆಳೆ ವಿಮೆ> <ಬೆಳೆ ವಿಮೆ ಬಿಡುಗಡೆ> <ಬೆಳೆ ವಿಮೆ ಸ್ಟೇಟಸ್ಬೆ> <ಬೆಳೆ ವಿಮೆ ಹಣ ಜಮಾ> <ಬೆಳೆ ವಿಮೆ ನೋಡುವುದು ಹೇಗೆ>
ಮತ್ತೆ ರೈತರಿಗೆ ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿಗಳು ಬರುತ್ತವೆ ಕಾರಣ ಏಕೆಂದರೆ ಇದೀಗ 18 ನೇ ತಾರೀಖಿನಂದು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೂ. 2000 ಗಳು ಪಡೆದುಕೊಂಡ ನಂತರ ಮತ್ತೆ ಬೆಳೆ ವಿಮೆ ಕೂಡ ಹಂತ ಹಂತವಾಗಿ ಬಿಡುಗಡೆ ಮಾಡುತ್ತಾ ಹೋಗುತ್ತಿದ್ದಾರೆ ಕೆಲವೊಂದುನಾ ಕಂಪನಿಗಳು ತಮ್ಮ ಬೆಳೆ ವಿಮೆ ಪಾವತಿಸಿರುವ ರೈತರಿಗೆ ಬೆಳೆ ಹಾನಿಯಾದ ನಂತರ ತಮ್ಮ ನಿಗದಿಪಡಿಸಿರುವ ಮೊತ್ತವನ್ನು ಕಂಪನಿಗಳು ರೈತರ ಖಾತೆಗೆ ವರ್ಗಾವಣೆ ಮಾಡುತ್ತಿವೆ ಇದು ಒಂದೇ ಹಂತದಲ್ಲಿ ಆಗುತ್ತಿಲ್ಲ ದಿನ ದಿನ ನಡೆಯುತ್ತಿದೆ.
ಇದೀಗ ಮತ್ತೆ ಬಳ್ಳಾರಿ ಜಿಲ್ಲೆಗೆ ಪರಿಹಾರ ಹಣವನ್ನ ಅಂದರೆ ಬೆಳೆ ವಿಮೆ ಪರಿಹಾರ ಹಣವನ್ನು ವರ್ಗಾವಣೆ ಮಾಡಲಾಗಿದೆ ಹೀಗಾಗಿ ತುಂಬಾ ಹಣವನ್ನು ವರ್ಗಾವಣೆ ಮಾಡಲಾಗಿದ್ದು ಇದರಲ್ಲಿ ಯಾರು ಮಿಸ್ ಆಗಿರುವುದಿಲ್ಲ ಯಾರೆಲ್ಲ ನೀವು ಬೆಳೆ ವಿಮೆ ಪಾವತಿ ಮಾಡಿದ್ದೀರಿ ನೀವೆಲ್ಲರೂ ಬೆಳೆ ವಿಮೆಯನ್ನು ಚೆಕ್ ಮಾಡಬೇಕು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಿ ಮತ್ತು ಎಷ್ಟು ಜಮಾ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
ಬೆಳೆ ವಿಮೆ ಜಮಾ ಆಗಿರುವ ವಿವರಗಳು ಕೆಳಗಡೆ ನೀಡಲಾಗಿದೆ?
2023-24 ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಾಯಿಸಿದ ರೈತರಿಗೆ ಮೆಕ್ಕೆಜೋಳ, ಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ನವಣೆ, ರಾಗಿ ಈರುಳ್ಳಿ, ಟೊಮೊಟೊ ಬೆಳೆಗಳಿಗೆ ಬೆಳೆ ವಿಮೆ ಬಿಡುಗಡೆಯಾಗಿದೆ. 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಒಟ್ಟು 8576.68 ಲಕ್ಷ ರೂ. ಬೆಳೆ ವಿಮೆ ಬಿಡುಗಡೆಯಾಗಿದೆ.
ಹಡಗಲಿ ತಾಲೂಕಿಗೆ 1071.72 ಲಕ್ಷ ರೂ., ಹಗರಿಬೊಮ್ಮನಹಳ್ಳಿ ತಾಲೂಕಿಗೆ 256.62 ಲಕ್ಷ ರೂ., ಹರಪನಹಳ್ಳಿ ತಾಲೂಕಿಗೆ 6101.63 ಲಕ್ಷ ರೂ., ಹೊಸಪೇಟೆ ತಾಲೂಕಿಗೆ 38.05 ಲಕ್ಷ ರೂ., ಕೊಟ್ಟೂರು ತಾಲೂಕಿಗೆ 491.81 ಲಕ್ಷ ರೂ. ಕೂಡ್ಲಿಗಿ ತಾಲೂಕಿಗೆ 616.85 ಲಕ್ಷ ರೂ. ಬಿಡುಗಡೆಯಾಗಿದೆ.
ಹಡಗಲಿ ತಾಲೂಕಿನಲ್ಲಿ 3382, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 708, ಹರಪನಹಳ್ಳಿ ತಾಲೂಕಿನಲ್ಲಿ 20394, ಹೊಸಪೇಟೆ ತಾಲೂಕಿನಲ್ಲಿ 212. ಕೊಟ್ಟೂರು ತಾಲೂಕಿನಲ್ಲಿ 2402, ಕೂಡ್ಲಿಗಿ ತಾಲೂಕಿನಲ್ಲಿ 2412 ರೈತರು ಈ ಬೆಳೆ ವಿಮೆ ಪಡೆಯುತ್ತಿದ್ದಾರೆ.
ಬೆಳೆ ವಿಮೆಗೆ ನೋಂದಾಯಿಸಿದ ರೈತರು ಬೆಳೆ ವಿಮಾ ಕಂತು ತುಂಬಿದ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಲು ಕೋ- ರಿದೆ. ಬೆಳೆ ವಿಮಾ ಜಮೆ ಆಗದಿದ್ದಲ್ಲಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೆಶಕರ ಕಚೇರಿಗಳಿಗೆ ಭೇಟಿ Dea ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಪ್ರಸಕ್ತ ಸಾಲಿನಲ್ಲಿಯೂ ಸಹ ಉತ್ತಮ ಮಳೆ ಆಗುವುದೆಂಬ ಅಂದಾಜಿರುವುದ- ರಿಂದ ಎಲ್ಲಾ ರೈತ ಬಾಂಧವರು ಕಡ್ಡಾಯವಾಗಿ ಬೆಳೆ ವಿಮೆಗ
ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ ನಲ್ಲಿ ನಿಮ್ಮ ಜಮಾ ಆಗಿರುವ ಹಣದ ಸ್ಟೇಟಸ್ ನೋಡಿ?
ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನೀವು 2023 ಮತ್ತು 24ನೇ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಅಥವಾ 2022 23 ಅಂದರೆ ನೀವು ಯಾವ ಸಮಯದಲ್ಲಿ ಬೆಳೆವಿಮೆ ಪಾವತಿ ಮಾಡಿದ್ದೀರಿ ಆ ವರ್ಷವನ್ನು ಆಯ್ಕೆ ಮಾಡಿಕೊಂಡು ಮತ್ತು ಹಿಂಗಾರು ಅಥವಾ ಮುಂಗಾರು ಹಂಗಾಮಿಗೆ ಯಾವುದಕ್ಕೆ ಬೆಳೆ ವಿಮೆ ಪಾವತಿ ಮಾಡಿದ್ದೀರಿ ಅದನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಿ.
https://samrakshane.karnataka.gov.in/
ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ಬಳಿಕ ಅದರಲ್ಲಿ ಚಕ ಸ್ಟೇಟಸ್ ಎಂದು ಒಂದು ಆಯ್ಕೆ ಕಾಣಿಸುತ್ತದೆ. ನೇರವಾಗಿ ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ಅಥವಾ ಬೆಳೆ ವಿಮೆ ಪಾವತಿ ಮಾಡಿರುವ ರೆಫರೆನ್ಸ್ ಐಡಿ ಯಾವುದಾದರು ಒಂದನ್ನು ಹಾಕಿ ಅಲ್ಲಿ ಕ್ಯಾಪ್ಚರ್ ಕೋಡ್ ನೀಡುತ್ತಾರೆ ಅದನ್ನು ಎಂಟರ್ ಮಾಡಿ ಮತ್ತು ಸರ್ಚ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದಾಗ ಈಗ ಕೆಳಗಡೆ ಮಾಹಿತಿ ಓಪನ್ ಆಗುತ್ತದೆ ಈ ಮಾಹಿತಿಯಲ್ಲಿ ನಿಮಗೆ ಬೆಳೆ ಹಾನಿ ಪರಿಹಾರ ಅಥವಾ ಬೆಳೆ ವಿಮೆ ಪರಿಹಾರ ಹಣ ಎಷ್ಟು ಜಮಾ ಆಗಿದೆ ತೋರಿಸುತ್ತದೆ.
ಇದನ್ನು ಓದಿ:ಕೇವಲ 5% ಬಡ್ಡಿ ಯಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನ
https://krushisanta.com/Application-invited-for-2-lakh-loan-at-5-percent-interest-rate-605
ಇದನ್ನು ಓದಿ:ಮತ್ತೆ ನಿನ್ನೆ ಬಹಳಷ್ಟು ಜನರಿಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ! ನಿನ್ನೆ ಬಂದ ಹಣದ ಸ್ಟೇಟಸ್ ಚೆಕ್ ಮಾಡಿ
https://krushisanta.com/PM-kisan-credited-to-Farmers
ಇದನ್ನು ಓದಿ:ನಾಳೆಯಿಂದ ಮತ್ತೆ ಮಳೆ ಶುರು! ಆರಿದ್ರಾ ಮಳೆ ಅಬ್ಬರ! ರೆಡ್ ಅಲರ್ಟ್ ನೀಡಿದ ಹವಾಮಾನ ಇಲಾಖೆ
https://krushisanta.com/Rainfall-report-from-IMD-Bengaluru