Aadhar mismatched in fruits Update name| ಈ ತರಹ ಬಂದರೆ ಪರಿಹಾರ ಹಣ ಯಾರಿಗೂ ಜಮಾ ಆಗಲ್ಲ!
<Fid> <FID> <Fruits Id> <Fruits portal> < ಎಫ್ ಐ ಡಿ> < ಎಫ್ ಐ ಡಿ ಹೆಸರು ಮಿಸ್ ಮ್ಯಾಚ್ ಆದರೆ ಪರಿಹಾರ ಹಣ ಜಮಾ ಆಗಲ್ಲ> < ಎಫ್ ಐ ಡಿ ಮಿಸ್ ಮ್ಯಾಚ್> <Parihar> <Bara-Parihar>
ರೈತ ಬಾಂಧವರೇ ನಾವು ದಿನನಿತ್ಯ ನಿಮಗೆ ಪರಿಹಾರ ಹಣ ಜಮಾ ಆಗಿದೆ ಜಮಾ ಆಗಿದೆ ಎಂದು ಹೇಳಿ ಮಾಹಿತಿ ಹಾಕುತ್ತಿದ್ದೇವೆ ಆದರೆ ದಿನ ದಿನ ಹಾಕುವ ಮಾಹಿತಿಗಳು ಯಾವುದೂ ಕೂಡ ಒಂದೇ ಆಗಿಲ್ಲ ಏನಾದರೂ ಒಂದೊಂದು ಲೇಖನಗಳಲ್ಲಿ ಒಂದೊಂದು ಹೊಸ ವಿಚಾರವನ್ನು ಹಂಚಿಕೊಂಡಿದ್ದೇವೆ ಅದೇ ರೀತಿಯಾಗಿ ಇಲ್ಲೊಂದು ವಿಚಾರ ಏನೆಂದರೆ ಯಾರ ಹೆಸರಿನಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಈಗಾಗಲೇ ನೊಂದಣಿ ಆಗಿರಬಹುದು. ಆ ಹೆಸರು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಇಲ್ಲದಿದ್ದರೆ ಅದಕ್ಕೂ ಕೂಡ ಪರಿಹಾರ ಹಣ ಜಮಾ ಮಾಡಿಲ್ಲ.
ಇದರ ಬಗ್ಗೆ ಸ್ವಲ್ಪ ಗಮನಿಸಬೇಕಾದ ವಿಚಾರ ಏಕೆಂದರೆ ಕರ್ನಾಟಕದಲ್ಲಿ 20% ರೈತರ ಖಾತೆಗೆ ಹಣ ವರ್ಗಾವಣೆ ಆಗದೆ ಇರುವುದಕ್ಕೆ ಕಾರಣವೇ ಇದಾಗಿದೆ ಎಂದು ತಿಳಿದುಬಂದಿದೆ ಅಂದರೆ ಈಗಾಗಲೇ 32 ಲಕ್ಷ ಕೋಟಿ ರೈತರು ಫಲಾನುಭವಿಗಳಾಗಿದ್ದು ಅದರಲ್ಲಿ 20 ಪರ್ಸೆಂಟ್ ರೈತರಿಗೆ ಹಣ ಮುಟ್ಟಿಲ್ಲ, ಮುಟ್ಟಿಲ್ಲ ಎಂದರೆ ಇದು ಸರ್ಕಾರದ ತಪ್ಪಲ್ಲ ಅಥವಾ ಅಥವಾ ಇಲಾಖೆಯ ತಪ್ಪಲ್ಲ ಇದು ಒಂದು ಕಾರಣದಿಂದಾಗಿ ಹಣವನ್ನು ವರ್ಗಾವಣೆ ಮಾಡಿಲ್ಲ ಅದನ್ನು ರೈತರಿಗೆ ಮನಿಸಿಕೊಳ್ಳಬೇಕು ನಿಮಗೂ ಈಗಾಗಲೇ ಗೊತ್ತಿದೆ ಸರ್ಕಾರವು ಯಾವುದೇ ಕೆಲಸ ಮಾಡಬೇಕಾದರೆ ಅಷ್ಟೊಂದು ತನ್ನ ಕಾಳಜಿ ವಹಿಸಿಕೊಂಡು ಮಾಡುವುದಿಲ್ಲ ಅದಕ್ಕಾಗಿ ಕೆಲವೊಂದು ತಪ್ಪಾಗಿದ್ದಲ್ಲಿ ಕೂಡ ನೀವು ಪರಿಹಾರ ಪಡೆಯುವುದರಿಂದಾಗಿ ವಂಚಿತರಾಗುತ್ತೀರಿ ಅದೇ ಮೇಲೆ ನೀಡಿರುವ ತೊಂದರೆ ಕೂಡ ಒಂದು.
ಏನಿದು ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುವ ಹೆಸರು ಬದಲಾಗಿದೆ?
ಈ ಒಂದು ತಪ್ಪಾದ ಸೂಚನೆಯಿಂದ ಅಂದರೆ ಈ ಒಂದು ಕಾರಣದಿಂದಾಗಿಯೂ ಕೂಡ ಬಹಳಷ್ಟು ರೈತರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ ಹಣ ಜಮಾನೇ ಮಾಡುವುದಕ್ಕೆ ಹೋಗಿಲ್ಲ ಏಕೆಂದರೆ ತಪ್ಪು ಎಂದರೆ ತಪ್ಪು ಅದು ಏನಾದರೂ ಆಗಿರಬಹುದು ಏಕೆಂದರೆ ಆಧಾರ್ ಕಾರ್ಡ್ ಮೇಲೆ ಹಣವನ್ನ ವರ್ಗಾವಣೆ ಮಾಡುತ್ತಾರೆ ಇದು ತಮ್ಮೆಲ್ಲರಿಗೂ ಗೊತ್ತಾಗಿದೆ ಏಕೆಂದರೆ ಕರ್ನಾಟಕ ಸರ್ಕಾರ ನೇರ ನಗದು ವರ್ಗಾವಣೆ ಮೂಲಕ ನಿಮ್ಮ ಆಧಾರ್ ಸಂಖ್ಯೆ ಮೇಲೆ ಹಣವನ್ನು ಹಾಕುತ್ತಾರೆ ಆಧಾರ್ ಸಂಖ್ಯೆ ಯಾವುದಕ್ಕೆ ಲಿಂಕ್ ಆಗಿದೆ ಆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಹಣ ವರ್ಗಾವಣೆಯಾಗಬೇಕಾದರೆ ರೈತರ ದಾಖಲೆಗಳಾದ fid ಕೂಡ ಒಂದು ಈ ಎಫ್ ಐ ಡಿ ಇದರಲ್ಲಿ ಸಹ ರೈತನ ಹೆಸರಿರುತ್ತದೆ ಸಾಮಾನ್ಯವಾಗಿ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಇದರಲ್ಲಿಯೂ ಸಹ ಇರುತ್ತದೆ ಆದರೆ ಕಾರಣಾಂತರಗಳಿಂದ ಮತ್ತು ಅಧಿಕಾರಿಗಳ ತಪ್ಪಿನಿಂದಾಗಿ ಏಕೆಂದರೆ ರೈತರಿಗೆ ಏನು ಮಾಹಿತಿ ಗೊತ್ತಿರುವುದಿಲ್ಲ ಅವರು ಆಧಾರ್ ಕಾರ್ಡ್ ಕೊಡು ಎಂದರೆ ಇಲಾಖೆಗೆ ಹೋಗಿ ಆಧಾರ್ ಕಾರ್ಡ್ ಕೊಟ್ಟು ಬರುತ್ತಿರಿ ಆದರೆ ಅಲ್ಲಿ ನಿಜವಾದ ತಪ್ಪು ಏನಾಗಿದೆ ಎಂಬುದನ್ನು ಮರಳಿ ನೀವು ಗಮನಿಸುವುದಿಲ್ಲ.
ಈಗ ತೊಂದರೆಯನ್ನು ಸರಿಪಡಿಸುವುದು ಹೇಗೆ?
ರೈತರು ಆಧಾರ್ ಕಾರ್ಡ್ ಜೆರಾಕ್ಸ್ ಅಥವಾ ಒರಿಜಿನಲ್ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಬೇಕು ನೀವು ರೈತಸಂಪರ್ಕ ಕೇಂದ್ರಕ್ಕೆ ಹೋಗಬೇಕು ಅಲ್ಲಿ ಎಫ್ಐಡಿನಲ್ಲಿ ನಿಮ್ಮ ಹೆಸರು ಏನಿದೆ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರು ಏನಿದೆ ಚೆಕ್ ಮಾಡಿಕೊಳ್ಳಬೇಕು. ಮತ್ತು ಎರಡಕ್ಕೂ ಹೆಸರು ಮ್ಯಾಚ್ ಆಗುತ್ತದೆಯೋ ಅಂದರೆ ಎರಡು ಹೆಸರು ಒಂದೇ ಆಗಿರಬೇಕು. ಆ ರೀತಿ ಹೆಸರು ಒಂದೇ ಆಗಿದ್ದರೂ ಕೂಡ ಹಣ ಜಮಾ ಆಗದೇ ಇಲ್ಲದಿದ್ದರೆ ನೀವು ನಿಮ್ಮ ತಸಿಲ್ದಾರ್ ಆಫೀಸ್ ಡಿಸಿ ಅವರಿಗೆ ರಿಕ್ವೆಸ್ಟ್ ವರದಿಯನ್ನು ನೀಡಬೇಕು. ತಹಶೀಲ್ದಾರ್ ಅಥವಾ ನಿಮ್ಮ ರೈತ ಸಂಪರ್ಕ ಕೇಂದ್ರ ಅಥವಾ ತಲಾಟಿ ಆಫೀಸ್ ಹೆಚ್ಚಿನ ಮಾಹಿತಿಗಾಗಿ ಇವುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು.
ಎಫ್ ಐಡಿ ಫ್ರುಟ್ಸ್ ಅಂತಾ ಅಂಶದಲ್ಲಿ ರಿಜಿಸ್ಟರ್ ಆಗಿರುತ್ತದೆ. ಇದನ್ನು ಕಳೆದ ನಾಲ್ಕು ವರ್ಷಗಳಿಂದ ರೈತ ಸಂಪರ್ಕ ಕೇಂದ್ರದವರೇ ಇದನ್ನು ಸರಿಯಾಗಿ ತಿದ್ದುಪಡಿಯಾಗಲಿ ಅಥವಾ ಹೊಸದಾಗಿ ಎಫ್ ಐಡಿ ಮಾಡುವುದಾಗಲಿ ಮಾಡುತ್ತಿದ್ದಾರೆ ಅವರ ಹತ್ತಿರ ಹೋದರೆ ನಿಮಗೆ ಇದಕ್ಕೆ ತುಂಬಾ ಸುಲಭ ಮತ್ತು ತಕ್ಷಣ ಪರಿಹಾರ ದೊರೆಯುತ್ತದೆ.
ನಿಮಗೂ ಇದೇ ಸಮಸ್ಯೆ ಆಗಿರಬಹುದು, ಚೆಕ್ ಮಾಡಿ?
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ನಾವು ತಿಳಿಸಿದ ಹಾಗೆ ನೀವು ಈಗಿನ ವರ್ಷ ಅಂದರೆ 202324 ಹಾಗೂ ಅದೇ ರೀತಿಯಾಗಿ ಋತುಮಾನವನ್ನು ಮುಂಗಾರು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ವಿಪತ್ತಿನ ವೇಗ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಿ.
https://parihara.karnataka.gov.in/service92/
ಹಂತ 2: ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ಅಥವಾ ಸರ್ವೇ ನಂಬರ್ ಯಾವುದಾದರು ಒಂದನ್ನು ಬಳಸಿ ಅಲ್ಲಿ ಎಂಟರ್ ಮಾಡಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಈಗ ನಿಮಗೆ ಇದರಲ್ಲಿ ಏನು ಗೊತ್ತಾಗುತ್ತದೆ ಎಂದರೆ ಒಂದು ವೇಳೆ ನಿಮಗೂ ಕೂಡ ಇದೇ ಸಮಸ್ಯೆ ಆಗಿದ್ದರೆ ಮುಂದೆ ಕೆಳಗಡೆ ಮಾಹಿತಿ ರಿಪೋರ್ಟ್ ಓಪನ್ ಆಗುತ್ತದೆ ಓಪನ್ ಆದ ನಂತರ ಕೊನೆಯ ಡಿಬಿಟಿ ಸ್ಥಿತಿ ನೋಡಿದಾಗ ಅದರಲ್ಲಿ ಆಧಾರ್ ಪ್ರೋಟ್ಸ್ ಐಡಿ ಒಂದಿಗೆ ಮಿಸ್ ಮ್ಯಾಚ್ ಆಗಿದೆ ಎಂದು ತೋರಿಸುತ್ತದೆ.
ಇದನ್ನು ಓದಿ:ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರ ಯಾವ ರೀತಿ ಲೆಕ್ಕಾಚಾರ ಮಾಡಿ ಹಾಕಿದೆ ಕೊನೆಗೂ ಸಿಕ್ತು ಮಾಹಿತಿ?
https://krushisanta.com/How-baragala-parihara-is-calculated--2024-drought-year
ಇದನ್ನು ಓದಿ:ರೈತರೇ ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ ಮೂರನೇ ಕಂತಿನ ಪರಿಹಾರ ಹಣ ಚೆಕ್ ಮಾಡಿ
https://krushisanta.com/Check-third-installment--bele-hani-directly-from-Parihar-Portal
ಇದನ್ನು ಓದಿ:ರೈತರೇ ಪದೇ ಪದೇ ಕನ್ಫ್ಯೂಸ್ ಆಗಬೇಡಿ! ಸರ್ವೆ ನಂಬರ್ ಹಾಕಿ ಪರಿಹಾರ ಚೆಕ್ ಮಾಡುವುದು ಹೇಗೆ ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಿ
https://krushisanta.com/Video-on-How-to-check-Parihar-online
ಇದನ್ನು ಓದಿ:ಈ ರೈತರ ಖಾತೆಗೆ ಬರ ಪರಿಹಾರ 37 ಸಾವಿರ ರೂಪಾಯಿ ಜಮಾ ಆಗಲಿದೆ
https://krushisanta.com/For-these-farmers-crop-lose-will-credit-upto-37-thousands