ಈ ರೈತರಿಗೆ ಬರ ಪರಿಹಾರ 37 ಸಾವಿರ ರೂಪಾಯಿ ಜಮಾ ಆಗಲಿದೆ!

<Crop lose> <ಬೆಳೆ ಹಾನಿ> <ಪರಿಹಾರ> <ಬೆಳೆ ಪರಿಹಾರ> <ಬೆಳೆ ಹಾನಿ ಪರಿಹಾರ> <ಬೆಳೆ ಹಾನಿ>

May 26, 2024 - 07:40
 0
ಈ ರೈತರಿಗೆ ಬರ ಪರಿಹಾರ 37 ಸಾವಿರ ರೂಪಾಯಿ ಜಮಾ ಆಗಲಿದೆ!

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಕೆಲವೊಬ್ಬ ರೈತರಿಗೆ ಈ ವರ್ಷ ಏನೋ ಅದೃಷ್ಟನೋ ಗೊತ್ತಿಲ್ಲ ಬೆಳೆ ಪರಿಹಾರ ಸಿಕ್ಕಾಪಟ್ಟೆ ಹಣ ಜಮಾ ಆಗಿದೆ 34 ಸಾವಿರ ಪರಿಹಾರ ಹಣ ಜಮಾ ಆದರೆ ಮೂರನೇ ಕಂತು ಮೂರು ಸಾವಿರ ರೂಪಾಯಿಗಳು ಸೇರಿಸಿ ಒಟ್ಟಾರೆಯಾಗಿ ಈ ರೈತರಿಗೆಲ್ಲ 37 ಸಾವಿರ ರೂಪಾಯಿಗಳು ಪರಿಹಾರ ಹಣ ಜಮಾ ಆಗಿದೆ. ಈ ರೈತರ ಅದೃಷ್ಟ ಏನು ಅಥವಾ ಸರಕಾರವೇ ಇವರಿಗೆ ಹೆಚ್ಚಿಗೆ ಹಣ ಹಾಕಿದೆಯೋ ಇನ್ನು ಅವರಿಗೆ ನಮಗೆ ತಿಳಿತಾ ಇಲ್ಲ.

ಯಾರಿಗೆಲ್ಲ ರೂ.37 ಸಾವಿರ ರೂಪಾಯಿಗಳು ಪರಿಹಾರ ಹಣ ಜಮಾ ಆಗಲಿದೆ?

ಹೌದು ರೈತ ಬಾಂಧವರೇ ಜನವರಿ ತಿಂಗಳಲ್ಲಿ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳು ಜಮಾ ಆಗಿವೆ ಎರಡನೇ ಕಂತಿನಲ್ಲಿ 32 ಸಾವಿರ ರೂಪಾಯಿಗಳು ಜಮಾ ಆಗಿದೆ ಮೂರನೇ ಕಂತಿನಲ್ಲಿ 3000 ಗಳು ಜಮಾ ಆಗಲಿವೆ. ಒಟ್ಟಾರೆ ಸೇರಿ 37 ಸಾವಿರ ರೂಪಾಯಿಗಳು ಈ ರೈತರಿಗೆ ಬಂದಿದೆ. ಹೌದು, ಈ ರೈತರಿಗೆ ಯಾಕೆ ಇಷ್ಟು ಹಣ ಜಮಾ ಆಗಿದೆ ಉಳಿದವರಿಗೆ ಯಾಕೆ ಆಗಲಿಲ್ಲ ಅದನ್ನು ಕೂಡ ಕೆಳಗಡೆ ಸರಿಯಾಗಿ ಹೇಳುತ್ತೇವೆ ನೋಡಿ.

ಹೌದು ರೈತ ಬಾಂಧವರೇ, ಇವರು ಗ್ರಾಮ ಪಂಚಾಯಿತಿ ಕಡೆಯಿಂದ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ತಮ್ಮ ಜಮೀನಿನಲ್ಲಿ ಎಲ್ಲಾ ಬೆಳೆಗಳನ್ನು ದಾಖಲೆ ಮಾಡಿದ್ದಾರೆ ಉದಾಹರಣೆಗೆ ಇವರು ನಾಲ್ಕು ಬೆಳೆಗಳನ್ನು ದಾಖಲೆ ಮಾಡಿದ್ದಾರೆ, ನಾವು ಗಮನಿಸಿದಾಗ 15000ಗಳಿಗಿಂತ ಕಡಿಮೆ ಪರಿಹಾರ ಆದವರಲ್ಲಿ ಕೇವಲ ಮೂರು ಅಥವಾ ಎರಡು ಬೆಳೆಗಳು ದಾಖಲೆಯಾಗಿವೆ. ಆದರೆ ಇವರಿಗೆ ಹೆಚ್ಚಿಗೆ ಹಣ ಜಮಾ ಆಗಿದೆಯಲ್ಲ ಅವರ ಹೆಸರಿನಲ್ಲಿ ನಾಲ್ಕು ಅಥವಾ ಐದು ಬೆಳೆಗಳು ಮೂರರಿಂದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಹಾಳಾಗಿವೆ ಎಂದು ತೋರಿಸಿದ್ದಾರೆ ಹೀಗಾಗಿ ಅವರ ಖಾತೆಗೆ 32 ಸಾವಿರ ರೂಪಾಯಿಗಳು ಜಮಾ ಆಗಿವೆ.

 ಈ ತಪ್ಪು ಈ ವರ್ಷ ಮಾಡಿದ್ದೀರಿ ಆದರೆ ಮುಂದಿನ ವರ್ಷ ಈ ತಪ್ಪು ಮಾಡಬೇಡಿ ಬೆಳೆ ಸಮೀಕ್ಷೆ ಮಾಡುವವರು ಬಂದಾಗ ಅವರು ಬೆಳೆ ಸಮೀಕ್ಷೆ ಮಾಡಿದ ನಂತರ ನಮ್ಮ ಜಮೀನಿನಲ್ಲಿರುವ ಎಷ್ಟು ಬೆಳೆಗಳನ್ನು ನೀವು ದಾಖಲಿಸಿದ್ದೀರಿ, ಅದನ್ನು ಮೊದಲಿಗೆ ನೀವು ಬೆಳೆ ಸಮೀಕ್ಷೆ ಮಾಡುವವರಿಗೆ ಕೇಳಿ ತಿಳಿದುಕೊಳ್ಳಬೇಕು ಒಂದು ವೇಳೆ ನೀವೇ ಸ್ವತಃ ಬೆಳೆ ಸಮೀಕ್ಷೆ ಮಾಡಿದರು ಸಹ ಎಲ್ಲಾ ಬೆಳೆಗಳನ್ನು ದಾಖಲಿಸಬೇಕು.

ಬೆಳೆಗಳು ದಾಖಲಿಸುವಲ್ಲಿ ಏನಾದರೂ ಸ್ವಲ್ಪ ವಿಚಿತ್ರ ಅಥವಾ ತಪ್ಪಾಗಿ ಎಂಟ್ರಿ ಮಾಡಿದರೆ ನಿಮಗೆ ಯಾವುದೇ ರೀತಿ ಹಣ ಜಮೆ ಆಗುವುದಿಲ್ಲ ಜಮಾ ಆದರೂ ಸಹ ಕಡಿಮೆ ಆಗುತ್ತದೆ ಈಗ ಅದೇ ಹಿಂದಿನ ದಾಖಲೆಗಳು ಅವರು ಇಟ್ಟುಕೊಂಡು ಈಗ ಹಣವನ್ನು ಜಮಾ ಮಾಡಿದ್ದಾರೆ ಇದೇ ತಪ್ಪನ್ನು ನೀವು ಮುಂದಿನ ಬಾರಿ ಮಾಡಬಾರದು, ಎಷ್ಟು ಬೆಳೆಗಳಿವೆ, ಎಷ್ಟು ಎಕರೆ ಇವೆ ನಿಖರವಾಗಿ ದಾಖಲೆಗಳಲ್ಲಿ ನೀವು ಎಂಟ್ರಿ ಮಾಡಿದರೆ ಸಾಕು ನಿಖರವಾಗಿ ಬೆಳೆ ಪರಿಹಾರ ಸಹ ನಿಮ್ಮ ಖಾತೆಗೆ.

ಇದನ್ನು ಓದಿ:ಎಲ್ಲಾ ಪರಿಹಾರ ಜಮಾ! ನಿಮ್ಮ ಗ್ರಾಮಪಂಚಾಯಿತಿಯಲ್ಲಿ ಹಚ್ಚಿರುವ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡಿ

https://krushisanta.com/Final-list-village-wise-Parihar-input-subsidy-amount

ಇದನ್ನು ಓದಿ:ನಿಮ್ಮ ಮೊಬೈಲ್ ನಂಬರ್ ಹಾಕಿ ಮೊದಲು ಮತ್ತು ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗಿದೆ ಚೆಕ್ ಮಾಡಿ

https://krushisanta.com/Check-first-and-second-Parihar-installment-In-Mobile

ಇದನ್ನು ಓದಿ:ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿದೆ ಇದೀಗ ಬಂದ   

https://krushisanta.com/Second-parihara-installment-has-updated-on-input-subsidy-link

ಇದನ್ನು ಓದಿ:ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಜಮಾ ಆಗಿವೆ ಮೊಬೈಲ್ ನಂಬರ್ ಹಾಕಿ ಈಗಲೇ ಚೆಕ್ ಮಾಡಿ

https://krushisanta.com/Both-crop-insurance-and-drought-relief-is-credited

admin B.Sc(hons) agriculture College of agriculture vijayapura And provide consultant service