ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ! ಒಂದನೇ ಮತ್ತು ಎರಡನೇ ಪರಿಹಾರ ಹಣ ಜಮಾ ಆಗಿದೆ ಚೆಕ್ ಮಾಡಿ!

<ಮೊದಲ ಪರಿಹಾರ ಕಂತು ಜಮಾ> < ಎರಡನೇ ಕಂತು ಪರಿಹಾರ ಜಮಾ> < ಮೂರನೇ ಕಂತು ಪರಿಹಾರ ಜಮಾ ಲಿಸ್ಟ್> < ಪರಿಹಾರ ಹಣ ಸ್ಟೇಟಸ್>

May 24, 2024 - 06:24
 0
ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ! ಒಂದನೇ ಮತ್ತು ಎರಡನೇ ಪರಿಹಾರ ಹಣ ಜಮಾ ಆಗಿದೆ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಹಾಗೂ ಈಗಾಗಲೇ ನಾವು ಕಳೆದ ಲೇಖನದಲ್ಲಿ ತೋರಿಸಿದಂತೆ ನಿಮಗೆ ಯಾವ ಬ್ಯಾಂಕಿಗೆ ಹಣ ಬಂತು ಮತ್ತು ಎಷ್ಟು ಬೆಳೆ ಹಾನಿ ಆಗಿದೆ ಮತ್ತು ಎಷ್ಟೋ ಬೆಳೆಗಳ ಎಷ್ಟು ಎಕರೆ ಹಾನಿಯಾಗಿರುವುದರಿಂದ ನಿಮಗೆ ಪರಿಹಾರ ಹಣ ಎಷ್ಟು ಜಮಾ ಆಗಿದೆ ಇಲ್ಲಿಯವರೆಗೂ ನಿಖರವಾದ ಮಾಹಿತಿ ಯಾರಿಗೂ ಸಿಕ್ಕಿಲ್ಲ ಆದರೆ ನಾವು ಈ ಲೇಖನದಲ್ಲಿ ನಿಮಗೆ ಅದನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳುವುದು ಮತ್ತು ಇದೀಗ ನೆನ್ನೆ ಪರಿಹಾರ ಪೋರ್ಟಲ್ ಸಂಪೂರ್ಣವಾಗಿ ಅಪ್ಡೇಟ್ ಆಗಿದ್ದು ಇದರಲ್ಲಿ ಎರಡು ಕಂತುಗಳ ಹಣಜನಾಗಿರುವುದನ್ನು ಸಹ ನಮಗೆ ಕಾಣಿಸುತ್ತದೆ.

ಮೊಬೈಲ್ ನಂಬರ್ ಹಾಕಿ ಮೊದಲನೇ ಮತ್ತು ಎರಡನೇ ಕಂತಿನ ಪರಿಹಾರ ಹಣ ನೋಡುವುದು ಹೇಗೆ?

ಮೊಬೈಲ್ ನಂಬರ್ ಹಾಕಿ ನೀವು ಮೊದಲೇ ಮತ್ತು ಎರಡನೇ ಕಂತಿನ ಹಣ ಜಮಾ ಆಗಿದೆ ಮತ್ತು ಜಮಾ ಆಗುವುದು ಅಷ್ಟೇ ಅಲ್ಲ ಯಾವ ಬೆಳೆಗೆ ಬಂತು ಮತ್ತು ನಿಜವಾಗಿಯೂ ಹಾನಿಯಾಗಿರುವ ಬೆಳೆ ಎಷ್ಟು ಮತ್ತು ಒಟ್ಟಾರೆ ನಮ್ಮ ಜಮೀನು ಎಷ್ಟಿದೆ ಅದರಲ್ಲಿ ಹಾನಿಯಾಗಿರೋದು ಸಮೀಕ್ಷೆ ಮುಖಾಂತರ ಎಷ್ಟು ಬಂದಿದೆ, ಎಲ್ಲದರ ವಿವರವನ್ನು ನಿಮಗಿಲ್ಲಿ ತಿಳಿಸಿ ಕೊಡುತ್ತೇವೆ ಸರಿಯಾಗಿ ನೋಡಿಕೊಳ್ಳಿ ಮತ್ತು ವಿಧಾನವನ್ನು ಸರಿಯಾಗಿ ನೀವು ಸಹ ಚೆಕ್ ಮಾಡಿಕೊಳ್ಳಿ.

ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡುವಾಗ ನಿಮಗೆ ಇದರಲ್ಲಿ ರಿಪೋರ್ಟ್ ಓಪನ್ ಆದ ನಂತರ ಕೊನೆಯದಲ್ಲಿ ನೀವು ಗಮನಿಸಬೇಕಾದ ವಿಷಯ ಏನೆಂದರೆ ಬೆಳೆಯ ಹೆಸರು ಮತ್ತು ಮಳೆ ಆಶ್ರಿತ ಇದೇನಾ ಅಥವಾ ನೀರಾವರಿ ಇದೇನಾ ಇದಾದ ನಂತರ ಎಷ್ಟು ವಿಸ್ತರಣದಲ್ಲಿ ಬೆಳೆ ಹಾನಿಯಾಗಿದೆ ಮತ್ತು ಪರಿಹಾರ ಹಣದ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಲು ಸರ್ಕಾರಾನೂ ಮಾಡಿಕೊಟ್ಟಿದ್ದು ಬೇಗನೆ ನೀವು ಸಹ ಚೆಕ್ ಮಾಡಿಕೊಳ್ಳಿ.

ಹಂತ 1: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ ಋತುಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ರುತುಮಾನವನ್ನು ಆಯ್ಕೆ ಮಾಡಿಕೊಂಡ ನಂತರ ಬೆಳೆ ವಿಪತ್ತಿನ ವಿಧ ಅಂದರೆ ಬರ ಎಂದು ಆಯ್ಕೆ ಮಾಡಿಕೊಂಡು ನಂತರ ಗೆಟ್ ಡೀಟೇಲ್ಸ್ ಎಂಬ ಒಂದು ಬಟನ್ ಕಾಣಿಸುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.

https://parihara.karnataka.gov.in/service92/

ಹಂತ 2: ಗೆಟ್ ಡಿಟೈಲ್ಸ್ ಮೇಲೆ ನೀವು ಕ್ಲಿಕ್ ಮಾಡಿದಾಗ ಈಗ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. ನಾಲ್ಕು ಆಯ್ಕೆಗಳಲ್ಲಿ ನೀವು ಮೊಬೈಲ್ ನಂಬರ್ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು ಕ್ಲಿಕ್ ಮಾಡಿಕೊಂಡ ನಂತರ.

ಹಂತ 3: ಈಗ ಅಂತ ಮೂರರಲ್ಲಿ ನೀವು ಕ್ಲಿಕ್ ಮಾಡಿಕೊಂಡ ನಂತರ ಕೆಳಗಡೆ ಅಲ್ಲಿ ಮೊಬೈಲ್ ನಂಬರ್ ಹಾಕಲು ಕೇಳುತ್ತದೆ ನಿಮ್ಮ ಸರಿಯಾದ ಮೊಬೈಲ್ ಸಂಖ್ಯೆ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ಇದರಲ್ಲಿ ಹಾಕಬೇಕು ಹಾಕಿದ ನಂತರ "ಪಡೆಯಿರಿ" ಬಟನ್ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಪರಿಹಾರ ಹಣ ಓಪನ್ ಆಗುತ್ತದೆ ಇದರಲ್ಲಿ ಎರಡು ರೀತಿಯ ಪರಿಹಾರ ಹಣವು ನಿಮಗೆ ಕಾಣಿಸುತ್ತದೆ ಅದರಲ್ಲಿ ಮೊದಲನೆಯದು ಮೊದಲನೇ ಕಂತ ಹಾಗೂ ಇತ್ತೀಚಿನ ದಿನಗಳಲ್ಲಿ ಜಮಾ ಆಗಿರುವುದು ಎರಡನೇ ಕಂತ ಇದಾದ ನಂತರ ನಿಮಗೆ ಯಾವ ಬೆಳೆಗೆ ಎಷ್ಟು ಹಾನಿಯಾಗಿದೆ ಅದು ಸಹ ಕೆಳಗಡೆ ಇನ್ನೊಂದು ಬಾಕ್ಸ್ ಗಳಲ್ಲಿ ನೀಡುತ್ತಾರೆ.

ಇದನ್ನು ಓದಿ:ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿದೆ ಇದೀಗ ಬಂದ   

https://krushisanta.com/Second-parihara-installment-has-updated-on-input-subsidy-link

ಇದನ್ನು ಓದಿ:ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಜಮಾ ಆಗಿವೆ ಮೊಬೈಲ್ ನಂಬರ್ ಹಾಕಿ ಈಗಲೇ ಚೆಕ್ ಮಾಡಿ

https://krushisanta.com/Both-crop-insurance-and-drought-relief-is-credited

ಇದನ್ನು ಓದಿ:NPCI Seeding Issue| ಈ ತೊಂದರೆ ಇರುವವರಿಗೆ ಪರಿಹಾರ ಹಣ ಜಮಾ ಆಗಿಲ್ಲ!

https://krushisanta.com/Aadhar-Npci-seeding-issue

ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ? ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?

https://krushisanta.com/Mobile-number-based--Bara-hani-Parihar-status

admin B.Sc(hons) agriculture College of agriculture vijayapura And provide consultant service