ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಹಾನಿ ಚೆಕ್ ಮಾಡಿ!18400/- ಜಮಾ

<ಬರ> < ಬರಗಾಲ> <ಬರಗಾಲ ಪರಿಹಾರ> <ಬರಗಾಲ ಪರಿಹಾರ ಹಣ> <ಬರಗಾಲ ಪರಿಹಾರ> <ಬರಗಾಲ ಪರಿಹಾರ ಜಮಾ>

May 22, 2024 - 06:34
 0
ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಹಾನಿ ಚೆಕ್ ಮಾಡಿ!18400/- ಜಮಾ

ಆತ್ಮೀಯ ರೈತ ಬಾಂಧವರೇ ಬಹಳಷ್ಟು ಜನರು ಕೇಳುತ್ತಿದ್ದೀರಿ, ಸರ್ ನಮಗೆ ಸುಲಭದ ರೀತಿಯಲ್ಲಿ ಪರಿಹಾರ ಹಣ ಚೆಕ್ ಮಾಡುವುದು ಹೇಳಿ ನಮಗೆ ಡಿಬೀಟಿ ಅಪ್ಲಿಕೇಶನ್ ನಲ್ಲಿ ಹಣ ನೋಡಲು ಬರುತ್ತಿಲ್ಲ ಸುಲಭವಾಗಿ ಮೊಬೈಲ್ ನಂಬರ್ ಸಹಾಯದಿಂದ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಬಹುದು ಎಂದು ಕೇಳುತ್ತಿದ್ದೀರಿ ಅದಕ್ಕೆ ನಾವು ಇಲ್ಲಿ ನಿಮಗೆ ಉತ್ತರಿಸುತ್ತೇವೆ ಮತ್ತು ಸುಲಭದ ವಿಧಾನವನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಮೊಬೈಲ್ ನಂಬರ್ ಹಾಕಿ ಬೆಳೆ ಪರಿಹಾರ ಸ್ಟೇಟಸ್ ನೋಡುವುದು ಹೇಗೆ.?

 ಹೌದು ರೈತರೇ ನೀವು ಕೇಳಿದ ಹಾಗೆ ಮೊಬೈಲ್ ನಂಬರ್ ಸಹಾಯದಿಂದ ಬೆಳೆ ಪರಿಹಾರ ಸ್ಟೇಟಸ್ ಅನ್ನು ನೋಡಬಹುದು ಅದು ಆನ್ಲೈನಲ್ಲಿಯೇ ನೋಡಬಹುದು ನಿಮ್ಮ ಹತ್ತಿರ ಆಂಡ್ರಾಯ್ಡ್ ಮೊಬೈಲ್ ಅಥವಾ ಗೂಗಲ್ ಇದ್ದರೆ ಸಾಕು ಅದರಲ್ಲಿ ನಿಮಗೆ ಮೊಬೈಲ್ ನಂಬರ್ ಹಾಕಿ ಇಲ್ಲಿಯವರೆಗೆ ಎಷ್ಟು ಬೆಳೆ ಪರಿಹಾರ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.

ಚೆಕ್ ಮಾಡಿಕೊಳ್ಳಲು ಮೊದಲಿಗೆ ನಿಮ್ಮ ಗೂಗಲ್ ಅನ್ನು ಓಪನ್ ಮಾಡಿಕೊಳ್ಳಿ ಅದರಲ್ಲಿ ಪರಿಹಾರ ಎಂದು ಟೈಪ್ ಮಾಡಿಕೊಳ್ಳಿ ಅದಾದ ನಂತರ ಮೊದಲನೇ ಲಿಂಕು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ ಒಂದು ಈ ವರ್ಷದ ಪರಿಹಾರ ಲಿಂಕ್ ಆಗಿರುತ್ತದೆ ಎರಡನೇ ಲಿಂಕು ಕಳೆದ ವರ್ಷ ಪರಿಹಾರದಲ್ಲಿ ಇರುತ್ತದೆ ಮೂರನೇ ಲಿಂಕು ಹಳ್ಳಿವಾರು ಪಟ್ಟಿಯನ್ನು ಸಹ ನೀವು ಚೆಕ್ ಮಾಡಿಕೊಳ್ಳಬಹುದು.

ಹಂತ 1: https://parihara.karnataka.gov.in/service92/

 ಇಲ್ಲಿ ನೀಡಿರುವ ಲಿಂಕೆನ ಮೇಲೆ ಕ್ಲಿಕ್ ಮಾಡಿ ನೇರವಾಗಿ ನಿಮಗೆ ಪರಿಹಾರ ಹಣ ಚೆಕ್ ಮಾಡುವ ಪೋರ್ಟಲ್ ಗೆ ಕರೆದುಕೊಂಡು ಹೋಗುತ್ತದೆ.

ಹಂತ 2: ಮೊದಲಿಗೆ ಇದರಲ್ಲಿ "Year/ವರ್ಷ

2023-24" ನಂತರ ಋತುಮಾನವನ್ನು ಆಯ್ಕೆ ಮಾಡಲು ಕೇಳುತ್ತದೆ ರುತುಮಾನವನ್ನು ಆಯ್ಕೆ ಮಾಡಲು ಇಲ್ಲಿ "Season/ಋತು Kharif / ಮುಂಗಾರು" ಬೆಳೆ ಹಾನಿ ವಿಧ ಅಥವಾ ವಿಪತ್ತಿನ ವಿಧ ಎಂದು ಕೇಳುತ್ತದೆ ಅದನ್ನು "Calamity Type/ವಿಪತ್ತಿನ ವಿಧ Drought / ಬರ" ಈ ರೀತಿಯಾಗಿ ಆಯ್ಕೆ ಮಾಡಿಕೊಂಡು ನಂತರ ಗೆಟ್ ಡೇಟ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಕೆಳಗಡೆ ನಿಮಗೆ ನಾಲ್ಕು ರೀತಿ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು.

ಹಂತ 3: ನಾಲ್ಕು ಆಪ್ಷನ್ಗಳಲ್ಲಿ ಸರ್ವೆ ನಂಬರ್, ಎಫ್ ಐ ಡಿ, ಮೊಬೈಲ್ ನಂಬರ್, ಆಧಾರ್ ನಂಬರ್ ಇದರಲ್ಲಿ ನೀವು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮ ಮೊಬೈಲ್ ನಂಬರ್ ಹಾಕಿ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಈಗ ನಿಮಗೆ ರಿಪೋರ್ಟ್ ಓಪನ್ ಆಗುತ್ತದೆ.

ರೈತರಿಗೆ ವಿಶೇಷ ಸೂಚನೆ ಏನೆಂದರೆ ಪ್ರಸ್ತುತವಾಗಿ ಈಗಾಗಲೇ ರೈತರಿಗೆ ಎರಡು ಕಂತುಗಳು ಹಣ ಜಮಾ ಆಗಿದ್ದು ಮೂರನೇ ಕಂತಿನ ಹಣ ಕೂಡ ಜಮಾ ಆಗಲಿದೆ ಎಂದು ಮಾಹಿತಿ ತಿಳಿದು ಬಂದಿದೆ ಇದಾದ ನಂತರ ಇದರಲ್ಲಿ ಕೇವಲ ನಿಮಗೆ ಒಂದು ಕಂತಿನ ಹಣ ಕೂಡ ಅಂದರೆ ರೂ.2000 ಗಳು ಜಮಾ ಆಗಿದ್ದರೂ ಕೂಡ, ನಿಮಗೆ ಉಳಿದ ಪರಿಹಾರ ಮತ್ತು ಜಮಾ ಆಗಿರುತ್ತದೆ.

ಇದನ್ನು ಓದಿ:ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಮಾತ್ರ ಪರಿಹಾರ ಜಮಾ ಆಗುತ್ತದೆ ಇಲ್ಲದಿದ್ದರೆ ಬರಂಗಿಲ್ಲ

https://krushisanta.com/RTC-and-Aadhar-linking-procedure

ಇದನ್ನು ಓದಿ:16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಜಮಾ

https://krushisanta.com/3-rd-installment-Bara-Parihar

ಇದನ್ನು ಓದಿ:ರೈತರೇ ಕನ್ಫ್ಯೂಸ್ ಆಗಬೇಡಿ ! ಪರಿಹಾರ ಅಪ್ಡೇಟ್ ಆಗಿರುವುದು ಇಲ್ಲಿ ಮಾತ್ರ? ಚೆಕ್ ಮಾಡುವ ಒಂದೇ ವಿಧಾನ-ಸಿದ್ದರಾಮಯ್ಯ

https://krushisanta.com/Parihar-hana-Updated-on-Karnataka-DBT-App

ಇದನ್ನು ಓದಿ:ಈ ಪಟ್ಟಿನಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮಾ ಮಾಡಿಲ್ಲ

https://krushisanta.com/Bara-Parihar-hani-not-credited-for-these-farmers

admin B.Sc(hons) agriculture College of agriculture vijayapura And provide consultant service