Aadhar to RTC linking Status| ಇಲ್ಲದಿದ್ದರೆ ಜಮಾ ಆಗಲ್ಲ ಬರ ಪರಿಹಾರ

<Rtc> <RTC Online> <Bhoomi online> <Aadhar to rtc link>

May 21, 2024 - 09:40
 0
Aadhar to RTC linking Status| ಇಲ್ಲದಿದ್ದರೆ ಜಮಾ ಆಗಲ್ಲ ಬರ ಪರಿಹಾರ

ಆಧಾರ್ ಕಾರ್ಡ ಮತ್ತು ಆರ್ ಟಿ ಸಿ ಲಿಂಕ್ ಮಾಡುವುದು ಈಗಾಗಲೇ ಕಡ್ಡಾಯ ಮಾಡಿದ್ದು ಮತ್ತು ಇದನ್ನೇ ನಿಮಗೆ ಪರಿಹಾರ ಜಮಾ ಆಗುವ ವಿಳಂಬವಾಗಬಹುದು, ಇದೀಗ ದೊರತ ಮಾಹಿತಿ ಪ್ರಕಾರ ನಿಮ್ಮ ಆರ್‌ಟಿಸಿಗೆ ಅಂದರೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮಾತ್ರ ಪರಿಹಾರ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಸಹ ಮಾಹಿತಿಗಳು ತಿಳಿದು ಬರುತ್ತಿವೆ. ಹೀಗಾಗಿ ನಿಮಗೆ ಇನ್ನೂವರೆಗೂ ಹಣ ಬಂದಿಲ್ಲ ಎಲ್ಲರಿಗೂ ಬಂದು ನಿಮಗೆ ಮಾತ್ರ ಬಂದಿಲ್ಲವಾದರೆ ಒಂದು ಬಾರಿ ನಿಮ್ಮ ಪಾಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಚೆಕ್ ಮಾಡಿಕೊಳ್ಳಿ.

ನಿಮ್ಮ ಜಮೀನಿನ ಉತಾರಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ?

ಉತಾರಿ ಅಥವಾ ಪಹಣಿ ಪತ್ರ ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಲು ಎರಡು ವಿಧಾನಗಳಿವೆ ಒಂದು ನೀವು ಇಲ್ಲೇ ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಅಥವಾ ಆನ್ಲೈನ್ ಮೂಲಕವೇ ಲಿಂಕ್ ಮಾಡಲು ರಿಕ್ವೆಸ್ಟ್ ಮಾಡಬಹುದು. ಇದಾದ ನಂತರ ನೀವು ಸ್ವತಹ ಹೋಗಿ ನಿಮ್ಮ ತಲಾಟಿ ಹತ್ತಿರ ಅಂದರೆ ನಿಮ್ಮ ಊರಿನ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒಂದು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಇರುತ್ತದೆ ಅವರು ಕೂಡ ಇದನ್ನು ಲಿಂಕ್ ಮಾಡಬಹುದು ಯಾವುದಾದರೂ ಎರಡು ವಿಧಾನಗಳ ಸಹಾಯದಿಂದ ನೀವು ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಕೊಳ್ಳಬಹುದು.

ಆನ್ಲೈನ್ ನಲ್ಲಿ ಪಹಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಚೆಕ್ ಮಾಡುವುದು ಹೇಗೆ?

 ಆನ್ಲೈನ್ ನಲ್ಲಿ ಚೆಕ್ ಮಾಡಲು ಇಲ್ಲಿ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಸರ್ಕಾರದ ಒಂದು ಅಧಿಕೃತ ಜಾಲತಾಣ ಓಪನ್ ಆಗುತ್ತದೆ ಉಪನಾದ ನಂತರ ಇಲ್ಲಿ ಕೆಳಗಡೆ ನೀಡಿರುವಂತೆ ವಿಧಾನಗಳನ್ನು ಬಳಸಿಕೊಂಡು ನೀವು ನಿಮ್ಮ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ರಿಕ್ವೆಸ್ಟ್ ಮಾಡಬಹುದು ಅಥವಾ ಈಗಾಗಲೇ ನೀವು ಲಿಂಕ್ ಆಗಿದ್ದರೆ ಅದು ನಿಮಗೆ ಲಿಂಕ್ ಆಗಿದೆ ಎಂದು ತೋರಿಸುತ್ತದೆ.

ಹಂತ 1: ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಮಾಡಲು ಅಧಿಕೃತ ಜಾಲತಾಣಕ್ಕೆ ಭೇಟಿ ಮಾಡುವ ಆನ್ಲೈನ್ ಲಿಂಕ್. https://www.landrecords.karnataka.gov.in/service4/

ಭೂಮಿ ನಾಗರಿಕ ಸೇವೆಗಳು

Bhoomi Citizen Services

Mobile No

Enter Captcha

ಹಂತ 2: ಮೇಲೆ ತಿಳಿಸಿದಂತೆ ನಿಮ್ಮ ಮೊಬೈಲ್ ನಂಬರ್ ಹಾಗೂ ಕೆಳಗಡೆ ನೀಡಿರುವ ಕ್ಯಾಪ್ಚರ್ ಕೋಡ್ ಹಾಕಿದ ನಂತರ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಬೇಕು ಈಗ ಓಟಿಪಿ ಬರುತ್ತದೆ ನಂತರ ಲಾಗಿನ್ ಆಗುತ್ತದೆ ಲಾಗಿನ್ ಆದ ನಂತರ ಮುಂದೆ ನಮಗೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಟೈಪ್ ಮಾಡಲು ಕೇಳುತ್ತದೆ ಅದನ್ನು ಟೈಪ್ ಮಾಡಿಕೊಳ್ಳಿ.

ಹಂತ 3: ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರನ್ನು ಹಾಕಿ ನಂತರ ಕೆಳಗಡೆ ವೆರಿಫೈ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಸಂಖ್ಯೆಯನ್ನು ಆರ್ ಟಿ ಸಿ ಯೊಂದಿಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ತೋರಿಸುತ್ತದೆ ಒಂದು ವೇಳೆ ಲಿಂಕ್ ಆಗದಿದ್ದರೆ ಯಶಸ್ವಿಯಾಗಿ ಎಸ್ಎಂಎಸ್ ಕಳುಹಿಸಲಾಗಿದೆ ಅಂದರೆ ರಿಕ್ವೆಸ್ಟ್ ಮಾಡಲಾಗಿದೆ ಎಂದು ತೋರಿಸುತ್ತದೆ.

ಇಲ್ಲಿ ಮೇಲೆ ನೀಡಿರುವ ಹಂತಗಳನ್ನು ನೀವು ಕೂಡ, ಈಗ ನೀವು ಮಾಡಬೇಕಾದ ಕೆಲಸ ಏನೆಂದರೆ ಮೇಲ್ಗಡೆ ಯಾವ ರೀತಿ ತೋರಿಸಿದೆಯೋ ಅಂದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಯಶಸ್ವಿಯಾಗಿ ಕಳಿಸಲಾಗಿದೆ ಎಂದು ತೋರಿಸಿದ್ದಾರೆ, ಅಂದರೆ ನಿಮ್ಮ ಆಧಾರ್ ಕಾರ್ಡ್ ಇನ್ನು ಆರ್ ಟಿ ಸಿ ಯೊಂದಿಗೆ ಲಿಂಕ್ ಆಗಿಲ್ಲ ಎಂದರ್ಥ ಅದೇ ರೀತಿಯಾಗಿ ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ತೋರಿಸುತ್ತದೆ.

ಇದನ್ನು ಓದಿ:ರೈತರೇ ಕನ್ಫ್ಯೂಸ್ ಆಗಬೇಡಿ ! ಪರಿಹಾರ ಅಪ್ಡೇಟ್ ಆಗಿರುವುದು ಇಲ್ಲಿ ಮಾತ್ರ? ಚೆಕ್ ಮಾಡುವ ಒಂದೇ ವಿಧಾನ-ಸಿದ್ದರಾಮಯ್ಯ

https://krushisanta.com/Parihar-hana-Updated-on-Karnataka-DBT-App

ಇದನ್ನು ಓದಿ:ಈ ಪಟ್ಟಿನಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮಾ ಮಾಡಿಲ್ಲ

https://krushisanta.com/Bara-Parihar-hani-not-credited-for-these-farmers

ಇದನ್ನು ಓದಿ:ಮಳೆ ಬಂತು ಮಳೆ ರಾಜ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ ಇಂದಿನಿಂದ? ಒಂದು ವಾರಗಳ ಕಾಲ ಎಲ್ಲೆಲ್ಲಿ ಮಳೆ ಆಗಲಿದೆ ಬೆಂಗಳೂರು ಮಳೆ ಮುನ್ಸೂಚನೆ ಇಲಾಖೆ ವರದಿ ನೋಡಿ

https://krushisanta.com/Mansun-rainfall-in-Karnataka

ಇದನ್ನು ಓದಿ:21000/- ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದೇವೆ

https://krushisanta.com/21000-credited-to-bank-account-siddaramaiah

admin B.Sc(hons) agriculture College of agriculture vijayapura And provide consultant service