361 ಕೋಟಿ ಪರಿಹಾರ ಮತ್ತೆ ಜಮಾ! ಚೆಕ್ ಮಾಡಿ ನೋಡಿ
<Parihar>
2.59 ಲಕ್ಷ ರೈತರ ಖಾತೆಗೆ ₹ 360.10 ಕೋಟಿ ಜಮೆ ಜಿಲ್ಲೆಯಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರವಾಗಿ ಅರ್ಹ ರೈತರಿಗೆ ಪಾವತಿಸಿರುವ 2 ಸಾವಿರ ರೂ. ಪರಿಗಣನೆಗೆ ತೆಗೆದುಕೊಂಡು ಇನ್ನುಳಿದ ಬಾಕಿ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಈವರೆಗೆ ಜಿಲ್ಲೆಯ 2,59,063 ರೈತರ 36,010.20 ಲಕ್ಷ ರೂ. ಡಿಬಿಟಿ ಮೂಲಕ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲೆಯ ಒಟ್ಟು 18,727 ಫಲಾನುಭವಿ ರೈತರಿಗೆ ಪರಿಹಾರ ಧನವು ಜಮೆಯಾಗಿಲ್ಲ. ಅಂತಹ ರೈತರಿಗೆ ತಿಳಿವಳಿಕೆ ನೀಡುವ ಮೂಲಕ ಅವಶ್ಯಕ ದಾಖಲೆ ಪಡೆದು ಪರಿಹಾರ ಧನ ಜಮೆ ಮಾಡಲು ಕ್ರಮ ವಹಿಸುವಂತೆ ಈಗಾಗಲೇ ಎಲ್ಲ ತಹಸೀಲ್ದಾರರಿಗೆ ಸೂಚಿಸಲಾಗಿದೆ.
ತ್ವರಿತವಾಗಿ ಬಾಕಿ ಫಲಾನುಭವಿಗಳ ಖಾತೆಗೆ ಪರಿಹಾರ ಧನ ಜಮೆಯಾಗಲಿದೆ. ಬೆಳೆಹಾನಿ ಪರಿಹಾರ ಧನ ಜಮೆ ಕುರಿತು ಫಲಾನುಭವಿಗಳಿಗೆ ಮಾಹಿತಿ ಒದಗಿಸಲು ತಾಲೂಕಾವಾರು ಸಹಾಯವಾಣಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಸಹ ಪರಿಹಾರ ಕಂಡುಕೊಳ್ಳಬಹುದಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾದ ಬಗ್ಗೆ https://parihara.karnataka.gov.in ಪರಿಶೀಲಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ತಾಲೂಕಾವಾರು ವಿವರ : ಆಲಮೇಲ ತಾಲೂಕಿನ 19295 ಫಲಾನುಭವಿಗಳ ಪೈಕಿ 18,186 ರೈತರ ಖಾತೆಗೆ 3545.24 ಲಕ್ಷ ರೂ., ಬಬಲೇಶ್ವರ ತಾಲೂಕಿನ 20020 ಫಲಾನುಭವಿಗಳ ಪೈಕಿ 19,294 ರೈತರ ಖಾತೆಗೆ 3136.02 ಲಕ್ಷ ರೂ., ಬಸವನಬಾಗೇವಾಡಿ ತಾಲೂಕಿನ 27174 ಫಲಾನುಭವಿಗಳ ಪೈಕಿ 25307 ರೈತರ ಖಾತೆಗೆ 3346.84ಲಕ್ಷ ರೂ.. ವಿಜಯಪುರ ತಾಲೂಕಿನ 18912 ಫಲಾನುಭವಿಗಳ ಪೈಕಿ 17743 ರೈತರ ಖಾತೆಗೆ 2388.49 ಲಕ್ಷ ರೂ.
ಚಡಚಣ ತಾಲೂಕಿನ 19840 ಫಲಾನುಭವಿಗಳ ಪೈಕಿ 18409 ರೈತರ ಖಾತೆಗೆ 2497.3 ಲಕ್ಷ ರೂ., ದೇವರಹಿಪ್ಪರಗಿ ತಾಲೂಕಿನ 21088 ಫಲಾನುಭವಿಗಳ ಪೈಕಿ 19452 ರೈತರ ಖಾತೆಗೆ 2295.77 ಲಕ್ಷ ರೂ., ಇಂಡಿ ತಾಲೂಕಿನ 45542 ಫಲಾನುಭವಿಗಳ ಪೈಕಿ 42320 ರೈತರ ಖಾತೆಗೆ 6471.97 ಲಕ್ಷ ರೂ., ಕೊಲ್ದಾರ ತಾಲೂಕಿನ 10336 ಫಲಾನುಭವಿಗಳ ಪೈಕಿ 9783 ರೈತರ ಖಾತೆಗೆ 1919.03 ಲಕ್ಷ ರೂ., ಮುದ್ದೇಬಿಹಾಳ ತಾಲೂಕಿನ 21860 ಫಲಾನುಭವಿಗಳ ಪೈಕಿ 20035 ರೈತರ ಖಾತೆಗೆ 2569.17 ಲಕ್ಷ ರೂ., ನಿಡಗುಂದಿ ತಾಲೂಕಿನ 7785 ಫಲಾನುಭವಿಗಳ ಪೈಕಿ 7246 ರೈತರ ಖಾತೆಗೆ 1158.83 ಲಕ್ಷ ರೂ.. ಸಿಂದಗಿ ತಾಲೂಕಿನ 25203 ಫಲಾನುಭವಿಗಳ ಪೈಕಿ 23324 ರೈತರ ಖಾತೆಗೆ 3387.24 ಲಕ್ಷ ರೂ., ತಾಳಿಕೋಟೆ ತಾಲೂಕಿನ 20516 ಫಲಾನುಭವಿಗಳ ಪೈಕಿ 19,438 ರೈತರ ಖಾತೆಗೆ 2147.34 ಲಕ್ಷ ರೂ. ಮತ್ತು ತಿಕೋಟಾ ತಾಲೂಕಿನ 10149 ಫಲಾನುಭವಿಗಳ ಪೈಕಿ 9526 ರೈತರ ಖಾತೆಗೆ 1146.96 ಲಕ್ಷ ರೂ. ಜಮೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ರೈತರೇ ಕನ್ಫ್ಯೂಸ್ ಆಗಬೇಡಿ ! ಪರಿಹಾರ ಅಪ್ಡೇಟ್ ಆಗಿರುವುದು ಇಲ್ಲಿ ಮಾತ್ರ? ಚೆಕ್ ಮಾಡುವ ಒಂದೇ ವಿಧಾನ-ಸಿದ್ದರಾಮಯ್ಯ
https://krushisanta.com/Parihar-hana-Updated-on-Karnataka-DBT-App
ಇದನ್ನು ಓದಿ:ಈ ಪಟ್ಟಿನಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮಾ ಮಾಡಿಲ್ಲ
https://krushisanta.com/Bara-Parihar-hani-not-credited-for-these-farmers
ಇದನ್ನು ಓದಿ:ಮಳೆ ಬಂತು ಮಳೆ ರಾಜ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ ಇಂದಿನಿಂದ? ಒಂದು ವಾರಗಳ ಕಾಲ ಎಲ್ಲೆಲ್ಲಿ ಮಳೆ ಆಗಲಿದೆ ಬೆಂಗಳೂರು ಮಳೆ ಮುನ್ಸೂಚನೆ ಇಲಾಖೆ ವರದಿ ನೋಡಿ
https://krushisanta.com/Mansun-rainfall-in-Karnataka
ಇದನ್ನು ಓದಿ:21000/- ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದೇವೆ
https://krushisanta.com/21000-credited-to-bank-account-siddaramaiah