30 ದಿನಗಳ ಉಚಿತ ಮೊಬೈಲ್ ರಿಪೇರಿ ಬಿಸಿನೆಸ್ ತರಬೇತಿ! ದಿನಕ್ಕೆ 5,000 ಸಂಪಾದಿಸಿ
<Mobile repairing training> <mobile repair> mobile repair training for free> <30 days free training>
ಉಚಿತ ಮೊಬೈಲ್ ರಿಪೇರಿ & ಸೇವೆ ತರಬೇತಿಗೆ ಮೇ 8 ರಂದು ನೇರ ಸಂದರ್ಶನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್ ರಿಪೇರಿ & ಸೇವೆ ಕುರಿತ 30 ದಿನಗಳ ಉಚಿತ ತರಬೇತಿಗೆ ಮೇ 8 ರಂದು ನೇರ ಸಂದರ್ಶನವನ್ನು ಆಯೋಜಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಅರ್ಹತೆ ಮತ್ತು ದಾಖಲೆಗಳು ಏನು ಬೇಕು?
ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯಗಳು ಏನು?
ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲವೇ ಬೇರೆಯವರು ದಾರಿ ನೀಡುತ್ತಿಲ್ಲವೇ? ಹಾಗಿದ್ದರೆ ಈಗಲೇ ಅಧಿಕೃತವಾಗಿ ಜಮೀನಿಗೆ ಹೋಗಲು ಬಂಡಿದಾರಿ ಪಡೆಯುವುದು ಹೇಗೆ?
https://krushisanta.com/How-to-solve-Route-for-your-own-land--problems--with-law
ಇದನ್ನು ಓದಿ:ಒಂದೇ ವಾರದಲ್ಲಿ ಉಳಿದ ಪರಿಹಾರ ಜಮಾ! ಈ ರೈತರಿಗೆ ಮಾತ್ರ ದೊರೆಯಲಿದೆ ಉಳಿದ ಬರಗಾಲ ಪರಿಹಾರ ಪೇಮೆಂಟ್
https://krushisanta.com/Baragala-Parihar-payment
ಇದನ್ನು ಓದಿ:ಐದೇ ನಿಮಿಷದಲ್ಲಿ ಬೇಸಿಗೆ ಬೆಳೆ ಸರ್ವೆ ಮಾಡುವುದು ಹೇಗೆ? ಬೆಳೆ ಪರಿಹಾರ ಪಡೆಯಬೇಕಾದರೆ ಕಂಪಲ್ಸರಿ ಆಗಿ ಮಾಡಲೇಬೇಕು.
https://krushisanta.com/How-to-do-summer-crop-survey-using-Summer-crop-survey-2023-24-Mobile-App