Rainfall alert in Karnataka|ಮಳೆ ಮುನ್ಸೂಚನೆ ಇನ್ನು ಎಷ್ಟು ಮಳೆ ಆಗಲಿದೆ! ಚೆಕ್ ಮಾಡಿ

<Rainfall> <Rainfall Karnataka> <ಮಳೆ ವರದಿ> <ಮಳೆ ಮಾಹಿತಿ>

Jun 15, 2024 - 18:51
 0
Rainfall alert in Karnataka|ಮಳೆ ಮುನ್ಸೂಚನೆ ಇನ್ನು ಎಷ್ಟು ಮಳೆ ಆಗಲಿದೆ! ಚೆಕ್ ಮಾಡಿ

ಬೆಳಿಗ್ಗೆ 08:30 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಸಾಧಾರಣವಾಗಿತ್ತು ಮತ್ತು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿಯ ಕೆಲವು ಸ್ಥಳಗಳಲ್ಲಿ ಮತ್ತು ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಳೆಯಾಗಿದೆ.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಗಬ್ಬರು (ರಾಯಚೂರು ಜಿಲ್ಲೆ) 6, ಉಡುಪಿ (ಉಡುಪಿ ಜಿಲ್ಲೆ) 3, ಶೋರಾಪುರ (ಯಾದಗಿರಿ ಜಿಲ್ಲೆ) 3, ಸೈದಾಪುರ (ಯಾದಗಿರಿ ಜಿಲ್ಲೆ) 3, ಅಂಕೋಲಾ (ಉತ್ತರ ಕನ್ನಡ ಜಿಲ್ಲೆ) 2, ಗೋಕರ್ಣ (ಉತ್ತರ ಕನ್ನಡ ಜಿಲ್ಲೆ) 2, ಕುಮಟಾ (ಉತ್ತರ ಕನ್ನಡ ಜಿಲ್ಲೆ) 2, ಕೆಂಭಾವಿ (ಯಾದಗಿರಿ ಜಿಲ್ಲೆ) 2, ತಾವರಗೇರಾ (ಕೊಪ್ಪಳ ಜಿಲ್ಲೆ) 2, ಮುದಗಲ್ (ರಾಯಚೂರು ಜಿಲ್ಲೆ) 2, ಮಂಠಾಳ (ಬೀದರ್ ಜಿಲ್ಲೆ) 2, ಕೋಟ (ಉಡುಪಿ ಜಿಲ್ಲೆ) 1, ಹೊನಾವರ ವೀಕ್ಷಣಾಲಯ (ಉತ್ತರ ಕನ್ನಡ ಜಿಲ್ಲೆ) 1, ಕಾರ್ಕಳ (ಉಡುಪಿ ಜಿಲ್ಲೆ) 1, ಸಿದ್ದಾಪುರ (ಉಡುಪಿ ಜಿಲ್ಲೆ) 1, ಮಂಕಿ (ಉತ್ತರ ಕನ್ನಡ ಜಿಲ್ಲೆ) 1. ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) ) 1, ಯಡ್ರಾಮಿ (ಕಲಬುರ್ಗಿ ಜಿಲ್ಲೆ) 1, ದೇವದುರ್ಗ (ರಾಯಚೂರು ಜಿಲ್ಲೆ) 1, ಕವಡಿಮಟ್ಟಿ ಎ.ಆರ್.ಜಿ (ಯಾದಗಿರಿ ಜಿಲ್ಲೆ) 1, ಮಸ್ಕಿ (ರಾಯಚೂರು ಜಿಲ್ಲೆ) 1, ಕಲಬುರ್ಗಿ ವೀಕ್ಷಣಾಲಯ (ಕಲಬುರ್ಗಿ ಜಿಲ್ಲೆ) 1, ಕಕ್ಕೇರಿ (ಯಾದಗಿರಿ ಜಿಲ್ಲೆ) 1, ಕಮಲಾಪುರ(ಕಲಬುರ್ಗಿ ಜಿಲ್ಲೆ) 1, ಮಾನ್ವಿ (ರಾಯಚೂರು ಜಿಲ್ಲೆ) 1.

ರಾಜ್ಯದ ಮಳೆ/ ಗುಡುಗಿನ ಮುನ್ಸೂಚನೆ 0830 ಗಂಟೆಗಳ IST ವರೆಗೆ ಮಾನ್ಯವಾಗಿರುತ್ತದೆ:

ದಿನ 1 (15ನೇ ಜೂನ್ 2024): ಕರಾವಳಿ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಿನ 2 (16ನೇ ಜೂನ್ 2024) : ಕರಾವಳಿ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಿನ 3 (17ನೇ ಜೂನ್ 2024): ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದಿನ 4 (18ನೇ ಜೂನ್ 2024): ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ..

ದಿನ 5 (19ನೇ ಜೂನ್ 2004): ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ..

ದಿನ 6 (20ನೇ ಜೂನ್ 2024): ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ದಿನ 7 (21ನೇ ಜೂನ್ 2024): ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ರಾಮನಗರ, ತುಮಕೂರು ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಮೀನುಗಾರರಿಗೆ ಎಚ್ಚರಿಕೆ: ಇಲ್ಲ.

17 ಜೂನ್ 2024 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳು: ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31°C ಮತ್ತು 21° C ಆಗಿರಬಹುದು.

ಮುಂದಿನ 48 ಗಂಟೆಗಳು: ಸಾಮಾನ್ಯವಾಗಿ ಮೋಡ ಕವಿದ ಅಕಾಶ. ಹಗುರದಿಂದ ಸಾಧಾರಣ ಮಳೆಗೆಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31° C ಮತ್ತು 21" C ಆಗಿರಬಹುದು.

ಇದನ್ನು ಓದಿ:ರೈತರೇ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ! ಕೃಷಿ ಬಿಜಿನೆಸ್ ಮಾಡಲು ಎರಡು ಕೋಟಿ ಸಾಲ ಸೌಲಭ್ಯ ನೀಡಲು ಅರ್ಜಿ

https://krushisanta.com/Get-up-to-2-crore-loan-for-secondary-agriculture

ಇದನ್ನು ಓದಿ:PM kisan List 17 ನೇ ಕಂತು ಜಮಾ ಆಗುತ್ತದೆ ಹೆಸರು ನೋಡಿ

https://krushisanta.com/17-nth-installment-will-credit-on-18-nth-June-at-4-to-5-PM

ಇದನ್ನು ಓದಿ:RTC to Aadhar Link Status| ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್? ಲಿಂಕ್ ಆದವರ ಲಿಸ್ಟ್ ಚೆಕ್ ಮಾಡಿ

https://krushisanta.com/Check-pahani-and-Aadhar-link-status-in-mobile

ಇದನ್ನು ಒದಿ:3 rd installment ಬೆಳೆ ಹಾನಿ! ಮೊಬೈಲ್ ಸಂಖ್ಯೆ ಹಾಕಿ ಚೆಕ್ ಮಾಡಿ

https://krushisanta.com/Check--bele-parihar-payment-status-for-small-and-marginal-farmers

admin B.Sc(hons) agriculture College of agriculture vijayapura And provide consultant service