Rtc to Aadhar link|ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್ ಒಂದೇ ನಿಮಿಷದಲ್ಲಿ ಚೆಕ್ ಮಾಡಿ!
<Rtc> <RTC online> <RTC link> <Aadhar Rtc link> < ಪಹಣಿಗೆ ಆಧಾರ್ ಕಾರ್ಡ್ ಲಿಂಕ್> < ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್>
ಆತ್ಮೀಯ ರೈತ ಬಾಂಧವರೇ ಈಗಾಗಲೇ ಕರ್ನಾಟಕ ಸರ್ಕಾರ ಮೂರು ತಿಂಗಳಿಂದ ಸತತವಾಗಿ ರೈತರಿಗೆ ತಮ್ಮ ಆಧಾರ್ ಕಾರ್ಡ್ ನೊಂದಿಗೆ ಪಹಣಿ ಪತ್ರ ಲಿಂಕ್ ಮಾಡಲು ತಿಳಿಸಿದೆ ಆದರೆ ಪಹಣಿ ಪತ್ರ ಇನ್ನೂ ಆಧಾರ್ ಕಾರ್ಡ್ ಗೆ ಬಹಳಷ್ಟು ಜನರದು ಲಿಂಕ್ ಆಗಿಲ್ಲ ಆದರೆ ಇದರಿಂದ ಆಗುವ ಪರಿಣಾಮವೇನೆಂದರೆ ಸರ್ಕಾರದಿಂದ ಸಿಗುವ ಬಹುದೊಡ್ಡ ಸೌಲಭ್ಯಗಳು ಸಾಮಾನ್ಯ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಅದರಲ್ಲಿಯೂ ಪ್ರಮುಖವಾಗಿ ರೈತರು ಈ ಕೆಲಸ ತಮ್ಮ ಪ್ರಥಮ ಕೆಲಸವಾಗಿ ಮಾಡಿಕೊಂಡು ಹೋಗಬೇಕು.
ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆನಾ?
ಆನ್ಲೈನ್ ಮೂಲಕ ನಿಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಆದರೆ ಅದರಲ್ಲಿಯೂ ಸಹ ಪೆಂಡಿಂಗ್ ತೋರಿಸುತ್ತೇವೆ ಹೀಗಾಗಿ ನೀವು ಈಗ ಒಂದೇ ಕೊನೆಯ ದಾರಿ ಏನೆಂದರೆ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ನಿಮ್ಮ ಗ್ರಾಮ ಪಂಚಾಯಿತಿಗೆ ಅಡಿಯಲ್ಲಿ ಬರುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಒಂದು ಲಾಗಿನ್ ಮತ್ತು ಯೂಸರ್ ನ್ನು ನೀಡಿರುತ್ತಾರೆ. ಇದರ ಸಹಾಯದಿಂದ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾರಾದರೂ ಒಬ್ಬರು ಈ ಕೆಲಸವನ್ನು ಮಾಡುತ್ತಿರುತ್ತಾರೆ ನೀವು ಕೂಡ ಇವತ್ತೇ ಆ ಕೆಲಸ ಮುಗಿಸಿಕೊಳ್ಳಿ.
ಒಂದು ವೇಳೆ ಈಗಾಗಲೇ ನೀವು ಲಿಂಕ್ ಮಾಡಿಸಿದ್ದರೆ ಯಾರಿಗೂ ಕೇಳುವುದು ಮತ್ತು ಲಿಂಕ್ ಮಾಡಿಸುವುದು ಅವಶ್ಯಕತೆ ಇಲ್ಲ ಒಂದು ವೇಳೆ ಆನ್ಲೈನ್ ನಲ್ಲಿ ನೀವು ಲಿಂಕ್ ಮಾಡಿದರೆ ಮತ್ತೊಂದು ಬಾರಿ ಚೆಕ್ ಮಾಡಿಸಬೇಕು ಏಕೆಂದರೆ ನಾವು ಕಳೆದ ಬಾರಿ ಲೇಖನದಲ್ಲಿ ತಿಳಿಸಿದಂತೆ ಆನ್ಲೈನ್ ಮೂಲಕ ಲಿಂಕ್ ಮಾಡುವುದು ಬಹಳಷ್ಟು ಜನರದು ಪೆಂಡಿಂಗ್ ಬರುತ್ತವೆ ಹೀಗಾಗಿ ನೀವು ಲಿಂಕ್ ಮಾಡಿದ್ದೀರಿ ಎಂದು ಭ್ರಮೆಯಲ್ಲಿ ಕುಳಿತುಕೊಳ್ಳುವುದಕ್ಕಿಂತ ಒಂದು ಬಾರಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಚೆಕ್ ಮಾಡಿಸಿ ಈ ಕಾರ್ಯಕ್ರಮ ಸಂಪೂರ್ಣವಾಗಿ ಉಚಿತವಾಗಿದ್ದು ಮತ್ತು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕೆಲಸವಹಿಸಲಾಗಿದೆ.
ಹಂತ 1: https://landrecords.karnataka.gov.in/service4ಇ ಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಈಗಾಗಲೇ ನಿಮ್ಮ ಪಾಣಿಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಇಲ್ಲಿ ನಿಮಗೆ ತೋರಿಸುತ್ತದೆ.
ಹಂತ 2: ಇಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅದಾದ ನಂತರ ಕೆಳಗಡೆ ಕ್ಯಾಪ್ಚರ್ ಕೋಡ್ ನೀಡಿರುತ್ತಾರೆ ಅದನ್ನು ಸಹ ನಮೂದಿಸಿ ನಂತರ ನಿಮ್ಮ ಮೊಬೈಲ್ಗೆ ಒಟಿಪಿ ಬರುತ್ತದೆ ಓಟಿಪಿಯನ್ನು ಇದ್ರಲ್ಲಿ ಹಾಕಬೇಕು ಒಟಿಪಿ ಹಾಕಿದ ನಂತರ ಮುಂದೆ ಕ್ಲಿಕ್ ಮಾಡಿ.
ಹಂತ 3: ನಂತರ ಈಗ ನಿಮ್ಮ ಆಧಾರ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ಇಂಗ್ಲಿಷ್ ಭಾಷೆಯಲ್ಲಿ ಟೈಪ್ ಮಾಡಲು ಕೇಳುತ್ತದೆ ಅದನ್ನು ಸರಿಯಾಗಿ ಟೈಪ್ ಮಾಡಿಕೊಳ್ಳಿ ಟೈಪ್ ಆದ ನಂತರ ಕೆಳಗಡೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಈಗ ನಿಮಗೆ ಆಧಾರ ಸಂಖ್ಯೆಗೆ ಓಟಿಪಿ ಹೋಗುತ್ತದೆ ಅಲ್ಲಿ ನೀವು ಓಟಿಪಿ ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಹೋಗುತ್ತದೆ ಒಟಿಪಿಯನ್ನ ಅಲ್ಲಿ ಎಂಟರ್ ಮಾಡಿ ಎಂಟರ್ ಮಾಡಿದ ನಂತರ ಸಬ್ಮಿಟ್ ಮಾಡಬೇಕು ನಂತರ ಸರ್ವೆ ನಂಬರ್ ಆಯ್ಕೆ ಮಾಡಬೇಕು ಆಯ್ಕೆ ಮಾಡಿ ಈ ರೀತಿಯಾಗಿ ಲಿಂಕ್ ಮಾಡಬೇಕು ಒಂದು ವೇಳೆ ಈಗಾಗಲೇ ಲಿಂಕ್ ಆಗಿದ್ದರೆ ನಿಮಗೆ ಅಲ್ಲಿ ಈಗಾಗಲೇ ನಿಮ್ಮ ಪಾಣಿಪತ್ರಕ್ಕೆ ಈ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ತೋರಿಸುತ್ತದೆ.
ಇದನ್ನು ಓದಿ:ಆಧಾರ್ ಕಾರ್ಡ್ ನಂಬರ್ ಹಾಕಿ, ಬೆಳೆ ವಿಮೆ, ಬೆಳೆ ಪರಿಹಾರ, ಪಿಎಂ ಕಿಸಾನ್, ಗೃಹಲಕ್ಷ್ಮಿ,ಅನ್ನ ಭಾಗ್ಯ, ರೈತಸಿರಿ ಯೋಜನೆ ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
https://krushisanta.com/Get-payment-status-of-DBT-in-DBT-App-Karnataka
ಇದನ್ನು ಓದಿ:ಹಳ್ಳಿವಾರು ಪಟ್ಟಿ ಬಿಡುಗಡೆ! ಪಟ್ಟಿ ನಲ್ಲಿ ಹೆಸರು ನೋಡಿ|3000 ಖಚಿತ ಪಡೆದುಕೊಳ್ಳಿ
https://krushisanta.com/In-Karnataka-small-and-marginal-farmers-will-get-3000-parihara-benefit
ಇದನ್ನು ಓದಿ: 7 ಲಕ್ಷ ರೈತರ ಖಾತೆಗೆ ರೂ.3,000 ಹಣ ಜಮಾ ಲಿಸ್ಟ್
https://krushisanta.com/7-lakh-farmers-are-eligible-for-extra--drought-relief
ಇದನ್ನು ಓದಿ:ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ? ನಿಮಗೂ ಬಂತಾ ಈಗಲೇ ಚೆಕ್ ಮಾಡಿ
https://krushisanta.com/Gruhalakshmi-11th-installment--is-credited-to-bank-account