7 ಲಕ್ಷ ರೈತರ ಖಾತೆಗೆ 3000 ಜಮಾ ಆಗುವ ಲಿಸ್ಟ್! ಬಿಡುಗಡೆ

<ರೈತರಿಗೆ 3000 ಜಮಾ> < ರೈತರಿಗೆ ಜೀವನೋಪಾಯ ಪರಿಹಾರ ಬಿಡುಗಡೆ> < ರೈತರಿಗೆ ಹೆಚ್ಚುವರಿ ಪರಿಹಾರ> < ರೈತರ ಖಾತೆಗೆ ಹಚ್ಚುವ ರಿ ಬರ ಪರಿಹಾರ ಜಮಾ> < ರೈತರ ಖಾತೆಗೆ ಬರ ಪರಿಹಾರ ಜಮಾ>

Jun 12, 2024 - 07:45
 0
7 ಲಕ್ಷ ರೈತರ ಖಾತೆಗೆ 3000 ಜಮಾ ಆಗುವ ಲಿಸ್ಟ್! ಬಿಡುಗಡೆ

ಬರದಿಂದ ಸಂಕಷ್ಟಕ್ಕೆ ಸಿಲುಕಿದ ಸಣ್ಣ, ಅತಿ ಸಣ್ಣ ರೈತರಿಗೆ ರಾಷ್ಟ್ರೀಯ ವಿಪತ್ತು ನಿಧಿಯಿಂದ ಜೀವನೋಪಾಯ ಭತ್ಯೆ ಅನ್ವಯ ಪರಿಹಾರ ರೂಪದಲ್ಲಿ ಕುಟುಂಬಕ್ಕೆ 2800-3000 ರೂ.ನಂತೆ ವಿತರಿಸಲು ಇದರಿಂದ ಸರಿಸುಮಾರು 17.09 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರಾಜ್ಯದಲ್ಲಿ ಬರ, ಪ್ರವಾಹ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಲು ಮತ್ತು ನಿಭಾಯಿಸಲು, ನೀತಿ ನಿರೂಪಣೆ ರೂಪಿಸಲು ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಣಯಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಂಪುಟ ಉಪ ಸಮಿತಿ ಗುರುವಾರ ಈ ತೀರ್ಮಾನ ಕೈಗೊಂಡಿತು. ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೃಷ್ಣ ಬೈರೇಗೌಡ, ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ಇನ್ನೊಂದು

ವಾರದೊಳಗೆ ರೈತರ ಖಾತೆಗೆ ಹಣ ಜಮಾ ಆಗಲಿದೆ. రాష్ట్రీయ వివక్తు పరివార నిధియాంది రాజ్య వివక్తు ಪರಿಹಾರ ನಿಧಿಯನ್ನೂ ಸೇರಿಸಿ ಅಂದಾಜು ಮೂರು ಸಾವಿರ ರೂ.ವರೆಗೂ ರೈತರಿಗೆ ನೀಡಲಾಗುತ್ತಿದೆ ಎಂದರು. ರಾಷ್ಟ್ರೀಯ ನಿಧಿಯಿಂದ 3454 ಕೋಟಿ ಬಂದಿತ್ತು. ಇದರಲ್ಲಿ 2451 ಕೋಟಿ ರೂಪಾಯಿಯನ್ನು 27.5. ಲಕ್ಷ ರೈತರಿಗೆ ಮೇ ಮೊದಲ ವಾರದಲ್ಲಿ ಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಇನ್ನಷ್ಟು ರೈತರಿಗೆ ಕೊಡಲು ಸಂಪುಟ ಸಮಿತಿಯಲ್ಲಿ ತೀರ್ಮಾನ ಮಾಡಬೇಕಾಗಿತ್ತು.

ಇದೀಗ ಚರ್ಚೆ ನಡೆಸಿ ನಿರ್ಣಯಿಸಲಾಗಿದೆ ಎಂದು ಸಚಿವರು ತಿಳಿಸಿದರು. ಮೊದಲ ಹಂತದಲ್ಲಿ ಬೆಳೆ ನಷ್ಟ ಪರಿಹಾರ ಸಿಗದ ಮಳೆಯಾಶ್ರಿತ ರೈತರು, ನಾಲೆ ಕೊನೆ ಭಾಗದ ರೈತರಿಗೆ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ. ಡಿಸಿಗಳ ವರದಿ ಆಧಾರದಲ್ಲಿ ಪರಿಹಾರ ನೀಡಲಾಗುತ್ತದೆ. ಒಟ್ಟಾರೆ ಈ ತೀರ್ಮಾನದಿಂದ 7 ಲಕ್ಷ ರೈತರಿಗೆ ಇದರಿಂದ ಲಾಭವಾಗಲಿದೆ. ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.

ಯಾರೆಲ್ಲಾ 7 ಲಕ್ಷ ರೈತರು ಈ ಲಿಸ್ಟಲ್ಲಿ ಬರುತ್ತಾರೆ?

ರೈತ ಬಾಂಧವರೇ ಅದನ್ನು ನೀವು ಚೆಕ್ ಮಾಡಬೇಕಾದರೆ ಕೆಳಗಿನ ಹೇಳಿರುವ ವಿಧಾನವನ್ನು ಅನುಸರಿಸಬೇಕು ಈ ವಿಧಾನದಲ್ಲಿ ಯಾವ ರೀತಿಯಾಗಿ ನಾವು ಹೇಳುತ್ತೇವೆ ಅದೇ ರೀತಿಯಾಗಿ ನೀವು ಕೂಡ ಚೆಕ್ ಮಾಡಿಕೊಳ್ಳಬೇಕು. ಚೆಕ್ ಮಾಡಿದ ತಕ್ಷಣ ನೀವು ಕೂಡ ಆ ಏಳು ಲಕ್ಷ ರೈತರ ಲಿಸ್ಟ್ ನಲ್ಲಿ ಬರದಿದ್ದರೆ ನಿಮಗೆ ಹಣ ಬರೋದಿಲ್ಲ ಒಂದು ವೇಳೆ ಬಂದರೆ ಖಂಡಿತವಾಗಿಯೂ 3000 ಗಳು ಜಮಾ ಆಗುತ್ತದೆ.

ಹಂತ 1: https://parihara.karnataka.gov.in/service92/ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ನಲ್ಲಿ ನೀವು ಸೆಲೆಕ್ಟ್ ಮಾಡಿಕೊಳ್ಳಬೇಕಾದ ವಿವರ " 2023-24" ಋತುಮಾನ "ಮುಂಗಾರು" ಬೆಳೆ ವಿಪತ್ತಿನ ವಿಧ "ಬರ" ಮತ್ತು ಮುಂದೆ "Get Data".

ಹಂತ 2: ನಂತರ ಮತ್ತೆ ನಿಮಗೆ ಇಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ, ಅದರಲ್ಲಿ ನಿಮಗೆ ಬೇಕಾದ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಿ ಬಹಳಷ್ಟು ಜನರು ಸರ್ವೇ ನಂಬರ್ ಆಯ್ಕೆ ಮಾಡಿಕೊಂಡು ಮಾಹಿತಿಯನ್ನು ಹುಡುಕುತ್ತಾರೆ.

ಹಂತ 3: ನೀವು ಸಹ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಪಂಚಾಯಿತಿ ಅದಾದ ನಂತರ ಸರ್ವೆ ನಂಬರ್ ಹಾಗೂ ಅದಾದ ನಂತರ ಹೀಸಾ ನಂಬರ್ ನಂತರ ನಿಮ್ಮ ಹೆಸರು ಆಯ್ಕೆ ಮಾಡಿ ಸರ್ಚ್ ಮಾಡಿ.

ಹಂತ 4: ಮೊದಲಿಗೆ ನಿಮಗೆ ಇಲ್ಲಿ ಎರಡು ಕಂತುಗಳು ಬಂದಿದ್ದಾವೆ ಇಲ್ಲ ಚೆಕ್ ಮಾಡಿಕೊಳ್ಳಿ ಅದಾದ ನಂತರ ತಕ್ಷಣವಾಗಿ ಕೈಯಲ್ಲಿ ನಿಮ್ಮ ಪ್ರಾಣಿ ಪತ್ರವನ್ನು ತೆಗೆದುಕೊಂಡು ಎಷ್ಟು ಎಕ್ಕರೆ ಜಮೀನು ಇದೆ 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದಲ್ಲಿ ನಿಮಗೂ ಸಹ ರೂ.3000 ಗಳು ನೇರವಾಗಿ ಜಮಾ ಆಗುತ್ತದೆ.

ಇದನ್ನು ಓದಿ:ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ? ನಿಮಗೂ ಬಂತಾ ಈಗಲೇ ಚೆಕ್ ಮಾಡಿ

https://krushisanta.com/Gruhalakshmi-11th-installment--is-credited-to-bank-account

ಇದನ್ನು ಓದಿ:ನಿನ್ನೆ ಪ್ರಧಾನಿಯವರು ಸಹಿ ಮಾಡಿರುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ಚೆಕ್ ಮಾಡಿ

https://krushisanta.com/Shri-Narendra-Modi-has-signed-pm-Kisan-17th-installment-approval

ಇದನ್ನು ಓದಿ:ಸಬ್ಸಿಡಿಯಲ್ಲಿ ಭರ್ಜರಿ ಆಸಕ್ತಿ ಜನರಿಗೆ ದೇವಾಲಯಗಳ ಟ್ರಿಪ್ ಘೋಷಣೆ! ಈಗಲೇ ಅರ್ಜಿ ಸಲ್ಲಿಸಿ ನೀವು ಕೂಡ ಪ್ರವಾಸ ಮಾಡಿ

https://krushisanta.com/Subsidy-trip-from-Karnataka-Government

ಇದನ್ನು ಓದಿ:ರಾಜ್ಯದಲ್ಲಿ 18000 ಸೋಲಾರ್ ಪಂಪ್ಸೆಟ್ ನೀಡಲು ರೈತರಿಗೆ ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ

https://krushisanta.com/18000-solar-pump-set-application-is-invited-in-Karnatak-apply-online

admin B.Sc(hons) agriculture College of agriculture vijayapura And provide consultant service