18000 ಸಾವಿರ ಬೋರ್ ವೆಲ್ ಸೋಲಾರ್ ಪಂಪ್ಸೆಟ್ ನೀಡಲು ಅರ್ಜಿ ಆಹ್ವಾನ
<Solar pump set> <solar pump set application> <solar pump set application in Karnataka> < ಸೋಲಾರ್ ಪಂಪ್ಸೆಟ್ ಅರ್ಜಿ> < ಸೋಲಾರ್ ಪಂಪ್ಸೆಟ್ ನೀಡಲು ಅರ್ಜಿ>
ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್-ಬಿ ಯೋಜನೆಯಡಿ ಸೌರ ಪಂಪ್ ಸೆಟ್ ಪಡೆಯಲು ರಾಜ್ಯದ 18 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದ್ದಾರೆ.
ಪಿಎಂ -ಕುಸುಮ್ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್) ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ದೇಶಿಸಿ ಅವರು ಮಾತ ನಾಡಿದರು. ಸರಕಾರದಿಂದ ಸಿಗುವ ಸಹಾಯಧನ ಎಷ್ಟು ಮತ್ತು ರೈತರು ತಮ್ಮ ಕೈಯಿಂದ ಎಷ್ಟು ಹಣ ಕಟ್ಟಬೇಕು ಅದರ ಬಗ್ಗೆ ವಿವರವನ್ನು ನಾವು ಇಲ್ಲಿ ಕೆಳಗಡೆ ನೀಡಿದ್ದೇವೆ ಸರಿಯಾಗಿ ನೋಡಿ ತಿಳಿದುಕೊಳ್ಳಿ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು ಮತ್ತು ರೈತರವಂತಿಕೆ ಎಷ್ಟು?
ಕುಸುಮ್ ಬಿ ಯೋಜನೆಯಡಿ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು ಕೇಂದ್ರದಿಂದ ಶೇ.30 ಸಬ್ಸಿಡಿ ಹಾಗೂರಾಜ್ಯ ಸರ್ಕಾರದಿಂದ ಶೇ.30 ರಷ್ಟು ಸಬ್ಸಿಡಿ ನೀಡಿ ಉಳಿದ ಶೇ.40ರಷ್ಟು ಪಾಲು ಫಲಾನುಭವಿ ರೈತ ಭರಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸಬ್ಸಿಡಿಪಾಲನ್ನು ಶೇ.30ರಿಂದ 50ಕ್ಕೆ ಏರಿಸಿದೆ. ಈ ಹಿನ್ನೆಲೆಯಲ್ಲಿ ಈವರೆಗೆ ರಾಜ್ಯದ 18 ಸಾವಿರ ರೈತರು ಸೌರಪಂಪ್ ಸೆಟ್ ಪಡೆಯಲು ಸೌರಮಿತ್ರ ವೆಬ್‌ಸೈಟ್/ ಆ್ಯಪ್‌ನಲ್ಲಿ ನೋಂದಣಿ ಮಾಡಿದ್ದಾರೆ ಎಂದು ಗುಪ್ತಾ ತಿಳಿಸಿದರು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
*ರೈತರು ತಮ್ಮ ಆಧಾರ್.
*ಆರ್‌ಟಿಸಿ.
*ಬ್ಯಾಂಕ್ ವಿವರಗಳೊಂದಿಗೆ
ಆನ್‌ಲೈನ್ ಪೋರ್ಟಲ್ ಇದರ ಸೌಲಭ್ಯ ಪಡೆಯಲು ಆನ್ಲೈನ್ ಜಾಲತಾಣ ತೆಗೆಯಲಾಗಿದೆ ಆನ್ಲೈನ್ ನಲ್ಲಿಯೇ ಅರ್ಜಿ ಹಾಕಬೇಕು ಅರ್ಜಿಯನ್ನು ನೀವು ಸೇವಾ ಸಿಂಧು ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದಾಗಿದೆ. ಯೋಜನೆಯ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಧಿಕೃತ ಜಾಲತಾಣ ಕೆಳಗಡೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ನೋಡಬಹುದು.
https://souramitra.com ಮೂಲಕ ನೋಂದಾಯಿಸಿಕೊಳ್ಳ ಬಹುದು. ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 080- 22202100 ಬಹುದು.
18 ಸಾವಿರ ರೈತರಿಂದ ಈ ಒಂದು ಯೋಜನೆಗೆ ಅರ್ಜಿಯನ್ನು ಆವರಿಸಲಾಗಿದೆ ಬೇಗನೆ ಅರ್ಜಿಯನ್ನು ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಒಂದಲ್ಲ ಎರಡಲ್ಲ 18000 ಸೋಲಾರ್ ಪಂಪ್ಸೆಟ್ ಎಂದರೆ ಇದು ಸುಮಾರು ನಮ್ಮ ರಾಜ್ಯದ ವಿದ್ಯುತ್ತನ್ನು ಉಳಿಸಬಹುದು. ಅರ್ಜಿಯನ್ನು ಸಲ್ಲಿಸಿ ನೀವು ಕೂಡ ಇದರ ಸೌಲಭ್ಯವನ್ನು ಪಡೆಯಬೇಕು.
ರೈತರುಗಳಿಗೆ ಈ ಕೆಳಕಂಡ ಆದ್ಯತೆಗಳ ಮೇರೆಗೆ ಸೌರ ಕೃಷಿ ಪಂಪ್ ಸೆಟ್ ಗಳನ್ನು ಅಳವಡಿಸಲಾಗುವುದು
ಆದ್ಯತೆ - 1: ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿಯಲ್ಲಿ ರೂ. 10,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಮೊದಲ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.
ಆದ್ಯತೆ - 2: ರೈತರು ಈಗಾಗಲೇ ಅನಧಿಕೃತ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ (UNIP) ಯೋಜನೆಯಡಿಯಲ್ಲಿ ರೂ. 50/- ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ನೋಂದಾಯಿಸಿದ್ದು ಮತ್ತು ಇವರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರದಲ್ಲಿರುವವರಿಗೆ ಎರಡನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.
ಆದ್ಯತೆ - 3: ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಹೆಚ್ಚು ದೂರವಿದ್ದು ಮತ್ತು ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ಮೂರನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.
ಆದ್ಯತೆ - 4: ಈ ಯೋಜನೆಯಡಿಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸುವ ರೈತರುಗಳ ಕೊರೆದ/ತೆರೆದ ಬಾವಿಗಳು ಪರಿವರ್ಥಕ (Transformer) ಕೇಂದ್ರದಿಂದ 500 ಮೀಟರ್‌ಗಿಂತ ಒಳಗಿದ್ದು ಮತ್ತು ಹಾಗೂ ಶೇಕಡ 20 ರಷ್ಟು ಹಣ ಪಾವತಿಸುವವರಿಗೆ ನಾಲ್ಕನೇ ಆದ್ಯತೆಯಲ್ಲಿ ಹಾಗೂ ಈ ವರ್ಗದಲ್ಲಿ ನೋಂದಾಯಿಸುವ ರೈತರಿಗೆ ಮೊದಲು ನೋಂದಾಯಿಸಿದವರಿಗೆ ಮೊದಲು ನೀಡುವ ಆಧಾರದ ಮೇರೆಗೆ (First Come First Serve basis) ಅಳವಡಿಸಲಾಗುವುದು.
ವಿಶೇಷ ಸೂಚನೆ : ಕುಟುಂಬಕ್ಕೆ ಒಂದು ಸೌರ ಕೃಷಿ ಪಂಪ್ ಸೆಟ್ ಸೀಮಿತಗೊಳಿಸಲಾಗಿದೆ
ಇದನ್ನು ಓದಿ:1791 ಕೋಟಿ ರೈತರ ಖಾತೆಗೆ ಬೆಳೆ ವಿಮೆ ಜಮಾ!
https://krushisanta.com/1791-crores-amount-credited-to-farmers-crop-insurance
ಇದನ್ನು ಓದಿ:3 ನೇ ಕಂತಿನ ಬರ ಪರಿಹಾರ ಪಡೆದುಕೊಳ್ಳುವ ರೈತರ ಹಳ್ಳಿವಾರು ಪಟ್ಟಿ
https://krushisanta.com/3rd-Bele-hani-Patti-bidugade
ಇದನ್ನು ಓದಿ:ಇನ್ನು 2 ದಿನ ಮಾತ್ರ ಬಾಕಿ! ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು? ಈಗಲೇ ಲಿಂಕ್ ಆಗಿದ್ದರೆ ಚೆಕ್ ಮಾಡಿ
https://krushisanta.com/Aadhar-to-RTC-link-is-mandatory-to-get-government-benefits-in-future
ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ರೈತರಿಗೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗೇ ಇಲ್ಲ?
https://krushisanta.com/For-this-farmers-have-not-Credited-second-installment